Advertisement

ಅಡುಗೆ ಮನೆಗಳು ಔಷಧಾಲಯಗಳಾಗಲಿ: ಆಯುಸಂಭ್ರಮದಲ್ಲಿ ಕೊಂಡೆವೂರು ಶ್ರೀಗಳು

05:06 PM Aug 04, 2019 | keerthan |

ವಿದ್ಯಾನಗರ: ಶರೀರಮಾದ್ಯಂ ಎಂಬಂತೆ ಏನೇ ಸಾಧನೆ ಮಾಡಬೇಕಾದರೂ ನಮ್ಮ ಶರೀರ ಮೊದಲು ಬೇಕು. ನಾಲಿಗೆ ಚಪಲ, ಇಂದ್ರಿಯ ಚಪಲಗಳಿಂದಾಗಿ ಶರೀರದ ಕಡೆಗಿನ ಗಮನ ಕಡಿಮೆಯಾಗುತ್ತಿದ್ದು ಆಯುರ್ವೇದ ಶಾಸ್ತ್ರ ನಮ್ಮಿಂದ ದೂರವಾಗುತ್ತಿದೆ. ಶರೀರದ ಸಂರಕ್ಷಣೆಗಾಗಿ ಕಾಲಕ್ಕನುಗುಣವಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳನ್ನು ಪ್ರಕೃತಿಯೇ ನಮಗೆ ನೀಡುತ್ತದೆ. ಅಡುಗೆ ಮನೆಗಳು ಔಷಧಾಲಯಗಳಾಗಿದ್ದುವು. ಆದರೆ ಬೇಜವಾಬ್ದಾರಿ ತನದಿಂದ ಇಂದು ಆಸ್ಪತ್ರೆಗಳೇ ನಮ್ಮ ಆಶ್ರಯ ತಾಣವಾಗಿ ಬದಲಾಗಿದೆ. ಶಾರೀರಿಕ ಸ್ವಾಸ್ತ್ಯ ಸಂರಕ್ಷಣೆಗೆ ಆದ್ಯತೆ ನೀಡದಿರುವುದರಿಂದ ನೂರಾರು ರೋಗಗಳಿಗೆ ದಾಸರಾಗಬೇಕಾಗುತ್ತದೆ ಎಂದು  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.

Advertisement

ಅವರು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನಲ್ಲಿ ಜರುಗಿದ ಆಯು ಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀವರ್ಚನ ನೀಡಿದರು.

ಆಯು ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಕೇರಳ ಪ್ರಾಂತ ಸಂರಕ್ಷಣಾ ಸಮಿತಿ ಅಧ್ಯಕ್ಷ ರವೀಂಧ್ರ ವೈದ್ಯರು ಮಾತನಾಡಿ ಆಯುರ್ವೇದ ಸ್ವಾಸ್ತ್ಯ ಸಮಾಜದ ಮೂಲ. ನಾವು ಪ್ರಕೃತಿಗೆ ಹತ್ತಿರಾದಂತೆ ಸುಖ,ಸಂತೋಷ, ನೆಮ್ಮದಿ ಮತ್ತು ಆರೋಗ್ಯವಂತ ಬದುಕು ನಮ್ಮದಾಗುತ್ತದೆ. ಆ ನಿಟ್ಟಿನಲ್ಲಿ ಈ ಕಾಲಘಟ್ಟದ ಜನಜೀವನವನ್ನು ಸಂರಕ್ಷಿಸುವ ಮತ್ತು ಜನಜಾಗೇರಿ ಮೂಡಿಸುವ ಕಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ನೀಡಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಕೆ.ಪದ್ಮನಾಭನ್‌ ಮಾತನಾಡಿ ಕೃತಕ ಆಹಾರಗಳೆಡೆಗಿನ ಆಕರ್ಷಣೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ನಾಲಗೆಯ ರುಚಿಗಿಂತ ಆರೋಗ್ಯ ಸಂರಕ್ಷಣೆಗೆ ಪ್ರಾಧಾನ್ಯತೆ ನೀಡಬೇಕು. ಭಾರತೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ. ನಮ್ಮ ಪ್ರಾಮುಖ್ಯತೆ ಸತ್ವಯುತ ಆಹಾರ ಮತ್ತು ಉತ್ತಮ ಆರೋಗ್ಯದ ಕಡೆಗಿರಲಿ ಎಂದು ಹೇಳಿದರು. ಪ್ರೇಮಾನಂದ ಶೆಟ್ಟಿ, ಹರಿಪ್ರಸಾದ್‌ ಶೆಟ್ಟಿ, ವಿಶ್ವ ಹಿಂದೂ ಪರಿಷತ್‌ ಸಂಘಟಕ ಪ್ರೇಮಾನಂದ ಶೆಟ್ಟಿ ಕುಂದಾಪುರ ಮುಖ್ಯ ಅತಿಥಿಗಾಳಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಶಿಧರ ಶೆಟ್ಟಿ ಮುಟ್ಟ, ಡಾ,ಸಜೀವನ್‌ ಪಾಲಕ್ಕಾಡ್‌. ಹರಿಪ್ರಸಾದ್‌ ಶೆಟ್ಟಿ ಉದ್ಯಮಿ ಕುಂದಾಪುರ, ಡಾ.ಶ್ರೀಧರ ಬಾಯಿರಿ ಉಡುಪಿ ಉಪಸ್ಥಿತರಿದ್ದರು. ಕು.ಗಾಯತ್ರಿ ಪ್ರಾರ್ಥನೆ ಗೀತೆ ಹಾಡಿದರು. ಹರೀಶ್‌ ಮಾಡ ಸ್ವಾಗತಿಸಿ ಪುಷ್ಪರಾಜ ಐಲ ಧನ್ಯವಾದ ಸಮರ್ಪಿಸಿದರು.

ನಾಗನ ಕಟ್ಟೆಯಲ್ಲಿ ವಿಶೇಷ ನಾಗಪೂಜೆ ಜರುಗಿತು. ಅನ್ನ, ಅಕ್ಷರ, ಆಹಾರ, ಆಧಾರ ಮತ್ತು ಆರೋಗ್ಯ ಎಂಬ ಐದು ತತ್ವಗಳ ಮೂಲಕ ಜನರಿಗೆ ನೆರವಾಗುವ ರೀತಿಯಲ್ಲಿ ವಿದ್ಯಾದಾನ, ಮನೆದಾನ ಮುಂತಾದ ಚಟುವಟಿಕೆಗಳು ಆಶ್ರಮದ ಆಶ್ರಯದಲ್ಲಿ ನಡೆಯುತ್ತಿದೆ. ಧ್ಯಾನಿ, ಜ್ಞಾನಿ ಮತ್ತು ದಾನಿಗಳಿಂದ ಸಂಪನ್ನವಾದ ವೇದಿಕೆಯನ್ನು ವಿವಿಧ ಔಷದೀಯ ಗಿಡಮೂಲಿಕೆಗಳಿಂದ ಅಲಂಕರಿಸಲಾಗಿತ್ತು.

Advertisement

ಆಯು ಸಂಭ್ರಮದಲ್ಲಿ ಔಷಧಿಯುಕ್ತ ಆಹಾರ ಕಾರ್ಯಾಗಾರವನ್ನು ಡಾ.ಶ್ರೀಧರ ಬೆ„ರಿ ಉಡುಪಿ ಹಾಗೂ ಕೇರಳ ನಿತ್ಯಾನಂದ ಆಯುರ್ವೇಧ ಸಂರಕ್ಷಣಾ ಸಮಿತಿಯ ರವೀಂದ್ರ ವೈದ್ಯರು ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಉಂಟಾಗುವ ಪ್ರಯೋಜನಗಳು, ತೆಂಗಿನ ಕಾಯಿಯ ಪ್ರತ್ಯೇಕತೆ ಮತ್ತು ಉಪಯೋಗಗಳು, ಭಾರತೀಯ ಆಹಾರ ಪದ್ಧತಿ ಮತ್ತು ವೈಜ್ಞಾನಿಕ ಹಿನ್ನೆಲೆ, ಮಳೆ ನೀರಿನ ಮಹತ್ವ, ತೆ„ಲ ಅಭ್ಯಂಗ, ಸ್ನಾನ, ವ್ಯಾಯಾಮ, ತಾಯಿ ಹಾಲಿನ ಬಗ್ಗೆ ಮಾಹಿತಿ ನೀಡಲಾಯಿತು. ಡಾ.ಸಜೀವನ್‌ ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗಗಳನ್ನು ಮಲಯಾಳಂನಲ್ಲಿ ವಿವರಿಸಿದರು. ಡಾ,ಗೋಪಿನಾಥ್‌ ಕನ್ನಡಲ್ಲಿ ಮಾಹಿತಿ ನೀಡಿದರು.

ಔಷಧೀಯ ಆಹಾರ
ಬೆಳಗ್ಗಿನ ಉಪಹಾರದಲ್ಲಿ ದಾಸವಾಳದ ಚಹಾ, ಕಡಿಗೋಧಿಯ ಉಪ್ಪಿಟ್ಟು, ಹೆಸರಿನ ಉಸ್ಲಿ ಹಾಗೂ ಮಧ್ಯಾಹ್ನದ ಊಟಕ್ಕೆ
ದಾಸವಾಳ ಎಲೆ ಸಾಂಬಾರ್‌, ಬಾಳೆ ಎಲೆ ಉಪ್ಪಿನಕಾಯಿ, ಹಾಗಲ ಕಾಯಿ ಇಂಚಿ ಥೆ„ರು, ಅಗ್ನಿ ಬಳ್ಳಿ ರಸ, ತುಳಸಿ ಮಸಾಲಾ, ಬಾಳೆದಿಂಡು ಸಲಾಡ್‌, ಕುಂಬಳ ಕಾಯಿ ಚಟ್ನಿ, ಕುಂಬಳಕಾಯಿ ಫ್ರೈ, ಕುಂಬಳಕಾಯಿ ಪಾಯಸ ವಿಶೇಷವಾಗಿತ್ತು. ಪಾರಂಪರಿಕ ವೈದ್ಯರುಗಳು ಸಿದ್ಧಪಡಿಸಿದ ಆಹಾರವನ್ನು ಸೇವಿಸಿದ ಭಕ್ತರಲ್ಲಿ ಧನ್ಯತಾ ಭಾವ ಮೂಡಿತು.

ಸಭಾಂಗಣದಲ್ಲಿ ನೆರೆದಿದ್ದ ಜನಸಾಗರ ಆಯುರ್ವೇದ ಔಷಧಗಳನ್ನು ಮತ್ತು ಆಹಾರ ವಸ್ತುಗಳನ್ನು ಮಾರಾಟಮಾಡುತ್ತಿದ್ದ ಸ್ಟಾಲ್‌ಗ‌ಳತ್ತ ಆಕರ್ಷಿತರಾದರು.

ನಕ್ಷತ್ರವನ
ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ನಕ್ಷತ್ರವನ್ನು ಸಂದರ್ಶಿಸಿ ಪುಷ್ಕರಿಣಿಯನ್ನು ಕಣ್ತುಂಬಿಕೊಂಡರು. ನಕ್ಷತ್ರವನದ ತುಂಬಾ ಜನ್ಮ ನಕ್ಷತ್ರ ಮತ್ತು ರಾಶಿಯ ಗಿಡಮರಗಳನ್ನು ಕಾಣಬಹುದು. ಪ್ರತಿ ಗಿಡಮರದ ಸಮೀಪ ಮರದ ಹೆಸರು ಮತ್ತು ನಕ್ಷತ್ರ ಇಲ್ಲವೇ ರಾಶಿಯ ಹೆಸರನ್ನು ನಮೂದಿಸಿದ ನಾಮಫಲಕಗಳನ್ನು ಕಾಣಬಹುದಾಗಿದೆ. ಈ ವನದ ಮಧ್ಯದಲ್ಕಿರುವ ಪುಷ್ಕರಿಣಿ ವನದ ಸೌಂದರ್ಯವನ್ನು ಹೆಚ್ಚಿಸಿದೆ.

ಅತಿರಾತ್ರ ಸೋಮಯಾಗ ಮೊದಲಾದ ಅತ್ಯಪೂರ್ವವಾದ ಹೋಮ, ಯಾಗಾದಿಗಳಿಗೆ ಹೆಸರಾದ ಗಾಯತ್ರಿ ಮಾತೆ ನೆಲೆಸಿರುವ ಈ ಆಶ್ರಮದಲ್ಲಿ ನಡೆಯುವ ಪುಣ್ಯ ಕಾರ್ಯಗಳು ನಮ್ಮನ್ನು ಈ ಆಶ್ರಮಕ್ಕೆ ಬರುವಂತೆ ಮಾಡಿದೆ. ಗೋಸೇವೆ, ಜನಸೇವೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಇಲ್ಲಿ ನಡೆಯುತ್ತಿದೆ. ವಿದ್ಯಾದಾನ, ಮನೆದಾನ ಸೇರಿದಂತೆ ನೊಂದವರ ಆಶಾಕಿರಣವಾಗಿ ಬೆಳಗುತ್ತಿರುವ ಈ ಕ್ಷೇತ್ರವು ಆರೋಗ್ಯ ಸಂರಕ್ಷಣೆಯತ್ತ ಜನರ ಚಿತ್ತವನ್ನು ಸೆಳೆಯುತ್ತಿರುವುದು ಇನ್ನೊಂದು ವಿಶೇಷ
– ಪ್ರೇಮಾನಂದ ಶೆಟ್ಟಿ, ಕುಂದಾಪುರ.

Advertisement

Udayavani is now on Telegram. Click here to join our channel and stay updated with the latest news.

Next