Advertisement

ಕಿಷ್ಕಿಂದಾ ಅಂಜನಾದ್ರಿ ಕೇಸರಿಮಯ, ಮೊಳಗಿದ ಜೈಶ್ರೀರಾಮ್, ಬಜರಂಗಿ ಘೋಷಣೆ

07:37 PM Dec 05, 2022 | Team Udayavani |

ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಹನುಮದ್ ವೃತ್ ನಿಮಿತ್ತ ಹನುಮಮಾಲಾಧಾರಿಗಳಿಂದ ಕೇಸರಮಯವಾಗಿತ್ತು. ಸೋಮವಾರ ಬೆಳಗಿನ ಜಾವದಿಂದ ಸಂಜೆಯ ವರೆಗೂ ಇಡೀ ಅಂಜನಾದ್ರಿ ಕೇಸರಿಧಾರಿಗಳ ತಾಣವಾಗಿತ್ತು. ಎಲ್ಲೆಲ್ಲೂ ಜೈ, ಶ್ರೀರಾಮ್, ಜೈ ಬಜರಂಗಿ ಘೋಷಣೆ ಮೊಳಗಿತ್ತು.

Advertisement

ಪ್ರತಿ ವರ್ಷದಂತೆ ಹನುಮದ್ ವೃತ್‌ದ ನಿಮಿತ್ತ ಹನುಮವೃತಾಚರಣೆಯ ಹನುಮಭಕ್ತರ ಮಾಲಾವಿಸರ್ಜನೆಯ ಕಾರ್ಯಕ್ರಮ ಜಿಲ್ಲಾಡಳಿತ ಮಾಡಿದ್ದ ಸುವ್ಯವಸ್ಥೆಯ ಕಾರಣ ಯಶಸ್ವಿಯಾಗಿ ಜರುಗಿತು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಹನುಮಭಕ್ತರು ಅಂಜನಾದ್ರಿಯಲ್ಲಿ ಶ್ರೀಆಂಜನೇಯನ ಹಾಗೂ ಆಂಜನಾದೇವಿಯ ದರ್ಶನ ಪಡೆದು ಪುನೀತರಾದರು. ಕಳೆದ 15 ದಿನಗಳಿಂದ ಹನುಮಮಾಲಾಧಾರಿಗಳು ಕೇಸರಿ ಬಟ್ಟೆ ಧರಿಸಿ ಹನುಮಂತ ಸ್ಮರಣೆ ಮಾಡಿ ಹನುಮದ್ ವೃತ್ ದಿನದಂದು ಅಂಜನಾದ್ರಿಗೆ ಆಗಮಿಸಿ ಹನುಮಮಾಲಾ ವಿಸರ್ಜನೆ ಸಂಪ್ರದಾಯವಾಗಿದ್ದು ಕಳೆದ 10 ವರ್ಷಗಳಿಂದ ನಾಡಿನಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ತಾಲೂಕು ಮತ್ತು ಜಿಲ್ಲಾಡಳಿತ ಹನುಮಮಾಲಾಧಾರಿಗಳ ಮಾಲಾವಿಸರ್ಜನಾ ಕಾರ್ಯಕ್ರಮಕ್ಕಾಗಿ ಸುಮಾರು 14 ಸಮಿತಿಗಳನ್ನು ರಚನೆ ಮಾಡಿ ಹನುಮಮಾಲಾಧಾರಿಗಳಿಗೆ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಿತ್ತು. ಜತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ಸೂಚನೆಯಂತೆ ಗಂಗಾವತಿ ಗ್ರಾಮೀಣ ಪೊಲೀಸರು ಜನರು ಮತ್ತು ವಾಹನ ದಟ್ಟಣೆ ನಿಯಂತ್ರಿಸಿ ಮೂರು ಕಡೆ ಪೊಲೀಸ್ ಚೆಕ್ ಪೋಸ್ಟ್ 19 ಕಡೆ ರೈತರ ಸಹಕಾರದಲ್ಲಿ ವಾಹನ ನಿಲುಗಡೆ ತಾತ್ಕಲಿಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಬಲಭಾಗದಿಂದ ಬೆಟ್ಟ ಹತ್ತುವ ಎಡಭಾಗದಿಂದ ಇಳಿಯುವ ವ್ಯವಸ್ಥೆ ಮಾಡಿ ಬೆಟ್ಟದ ಎಡಭಾಗದಲ್ಲಿರುವ ಅಂಜನಾದ್ರಿಯ ವೇದಪಾಠಶಾಲೆಯಲ್ಲಿ ಹನುಮಭಕ್ತರಿಗೆ ಉಪ ಆಹಾರ ಮತ್ತು ಅನ್ನಪ್ರಸಾದದ ವ್ಯವಸ್ಥೆ ಮಾಡಿದ್ದರಿಂದ ಹನುಮಮಾಲಾ ವಿಸರ್ಜನೆ ಸೂಸುತ್ರವಾಗಿ ನೆರವೇರಿತು. ಸುಮಾರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಹನುಮಭಕ್ತರಿಗೆ ಊಟ ವಸತಿ ಮತ್ತು ವಾಹನ ಪಾರ್ಕಿಂಗ್ ಸರಿಯಾಗಿ ನಿರ್ವಹಿದ್ದನ್ನು ಹನುಮ ಭಕ್ತರು ಸ್ಮರಿಸಿದರು.

ಇಡೀ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು,ಪೊಲೀಸ್, ಕಂದಾಯ, ಶಿಕ್ಷಣ ಇಲಾಖೆ ಮತ್ತು ಆನೆಗೊಂದಿ, ಸಾಣಾಪೂರ, ಸಂಗಾಪೂರ ಮತ್ತು ಮಲ್ಲಾಪೂರ ಗ್ರಾ.ಪಂ. ಸಿಬ್ಬಂದಿ ವರ್ಗದವರು ಕಳೆದ ಒಂದು ವಾರದಿಂದ ಹನುಮಮಾಲಾ ವಿಸರ್ಜನೆಯ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ್ದರು.

ಅಂಜನಾದ್ರಿ ಬೆಟ್ಟಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಕರಡಿ ಸಂಗಣ್ಣ, ಅಪ್ಪಾಸಾಹೇಬ್ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ, ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬಜರಂಗದಳದ ಸೂರ್ಯನಾರಾಯಣ,ಅಮರೇಶ, ಪುಂಡಲೀಕ, ಶಿವಕುಮಾರ, ಕೇಶವ್, ಗೋವರ್ಧನ್, ಮಹಾಬಳೇಶ್ವರ ಹಗ್ಡೆ ಭೇಟಿ ನೀಡಿದರು.

ಮರ್ಯಾದಾ ಪುರುಷ ಶ್ರೀರಾಮಚಂದ್ರನ ಬಲಗೈ ಬಂಟ ಹನುಮಂತ ಜನಿಸಿದ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಹನುಮಭಕ್ತರ ಕಲರವ ಮುಗಿಲುಮುಟ್ಟಿದೆ. ಪ್ರತಿ ವರ್ಷದಂತೆ ಈ ಭಾರಿ ರಾಜ್ಯ ಸರಕಾರ ಹನುಮಭಕ್ತರಿಗೆ ಮೂಲಸೌಕರ್ಯ ಕಲ್ಪಿಸಿ ಹನುಮಮಾಲಾ ವಿಸರ್ಜನೆಗೆ ಅನುಕೂಲವಾಗಿದೆ. ಹನುಮ ದರ್ಶನ ಪ್ರಸಾದ ಮಾಡಿದ ಹನುಮಭಕ್ತರು ಇಲ್ಲಿಯ ಸುವ್ಯವಸ್ಥೆಯನ್ನು ಕಂಡು ಹರಸಿದ್ದಾರೆ. ಇನ್ನೂ ಮುಂದೆ ಅಯೋಧ್ಯೆಯಂತೆ ಅಂಜನಾದ್ರಿ ಪ್ರದೇಶ ಅಭಿವೃದ್ಧಿಗೆ ಸರಕಾರ ನೀಲನಕ್ಷೆ ಸಿದ್ದಪಡಿಸಿ ಸ್ಥಳೀಯರ ಅಭಿಪ್ರಾಯದಂತೆ ಕಾರ್ಯ ಅನುಷ್ಠಾನ ಮಾಡುತ್ತಿದೆ. ಕಿಷ್ಕಿಂದಾ ಅಂಜನಾದ್ರಿ ಕರುನಾಡಿನ ಹೆಮ್ಮೆಯಾಗಿದೆ.
– ಪರಣ್ಣ ಮುನವಳ್ಳಿ ಶಾಸಕರು.

Advertisement

ಇದನ್ನೂ ಓದಿ: ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕತರೂ ಮುಖ್ಯಮಂತ್ರಿ ಅಭ್ಯರ್ಥಿಯೇ : ಈಶ್ವರ ಖಂಡ್ರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next