ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಹುಂಡಿಯ ಎಣಿಕೆ ಕಾರ್ಯ ಸೋಮವಾರ ಜರುಗಿದ್ದು ಜನೇವರಿ ತಿಂಗಳಿನ ಹುಂಡಿಯ ಸಂಗ್ರಹ 26.23. ಲಕ್ಷ ರೂ.ಸಂಗ್ರಹವಾಗಿದೆ.
ಇದರಲ್ಲಿ ವಿವಿಧ ದೇಶಗಳ 11 ವಿದೇಶಿ ನಾಣ್ಯಗಳು ಹಾಗೂ 12 ನೋಟುಗಳು ಸಂಗ್ರಹವಾಗಿವೆ.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆ, ಶಿರಸ್ತೇದಾರಾದ ಮೈಬೂಬಅಲಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಗುರುರಾಜ, ಇಂದಿರಾ, ನಾಗರತ್ನ, ಕವಿತಾ, ಸೌಭಾಗ್ಯ, ಎಸ್ ಕವಿತಾ, ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ, ಅಭಿಷೇಕ, ಪೂಜಾ, ಮಂಜುನಾಥ ದುಮ್ಮಾಡಿ ದೇವಸ್ಥಾನದ ಮ್ಯಾನೇಜರ್ ಎಂ.ವೆಂಕಟೇಶ ಸೇರಿ ಸಿಬ್ಬಂದಿವರ್ಗ ಹಾಗೂ ಭಕ್ತರಿದ್ದರು.
ಇದನ್ನೂ ಓದಿ: ಪಠಾಣ್ ಅಬ್ಬರಕ್ಕೆ ನಡುಗಿದ ಬಾಕ್ಸಾಫೀಸ್: ಭಾರತದಲ್ಲೇ 300 ಕೋಟಿ ಗಳಿಸಿ ಶಾರುಖ್ ಸಿನಿಮಾ