Advertisement

ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣ: ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ

01:50 PM Sep 26, 2020 | keerthan |

ಉಡುಪಿ: ಹಿರಿಯಡ್ಕದಲ್ಲಿ ಗುರುವಾರ ನಡೆನ ಕಿಶನ್‌ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪರಾರಿಯಾಗಿದ್ದ ಇನೋವಾ ವಾಹನವು ಕಾರ್ಕಳ ಸಮೀಪದ ಇರ್ವತ್ತೂರಿನಲ್ಲಿ ಶುಕ್ರವಾರ ಪತ್ತೆಯಾಗಿದೆ.

Advertisement

ಮಂಗಳೂರಿನ ದಿವ್ಯರಾಜ್‌ ಶೆಟ್ಟಿ ಹಾಗೂ ಹರಿಪ್ರಸಾದ್‌ ಶೆಟ್ಟಿ ಅವರೊಂದಿಗೆ ಕಿಶನ್‌ ಹೆಗ್ಡೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಲು ಕಾರಿನಿಂದ ಇಳಿಯುವ ವೇಳೆ ಗುರುವಾರ ಕೊಲೆ ನಡೆದಿತ್ತು.

ಸುತ್ತಿಗೆ, ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನ ಮುಂಭಾಗದಿಂದ ಆಗಮಿಸಿದ 4-5 ಮಂದಿಯ ತಂಡ ಏಕಾಏಕಿಯಾಗಿ ಕಾರಿನ ಗಾಜಿಗೆ ಸುತ್ತಿಗೆಯಿಂದ ಹೊಡೆದು ಜಖಂ ಗೊಳಿಸಿತ್ತು. ಅನಂತರ ಕಿಶನ್‌ ಹೆಗ್ಡೆ ಮೇಲೆ ಮನೋಜ್‌ ತಲವಾರಿನಿಂದ ಕಡಿದು ಗಾಯಗೊಳಿಸಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಕಿಶನ್‌ನನ್ನು ಹಿಂಬಾಲಿಸಿದ ತಂಡ ತಲೆಗೆ ಬಲವಾಗಿ ಹೊಡೆದು ಕೊಲೆ ನಡೆಸಿದೆ. ಕಿಶನ್‌ ಹೆಗ್ಡೆ ಜತೆಯಲ್ಲಿದ್ದರ ಪೈಕಿ ಹರಿಪ್ರಸಾದ್‌ ಶೆಟ್ಟಿಯವರ ತಲೆಗೂ ಏಟು ಬಿದ್ದಿದೆ.

ಕೋಡಿಕೆರೆ ತಂಡದ ಕೃತ್ಯ ರೌಡಿಶೀಟರ್‌ಗಳಾದ ಕಿಶನ್‌ ಹೆಗ್ಡೆ ಹಾಗೂ ಮನೋಜ್‌ ಕೋಡಿಕೆರೆ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಮನೋಜ್‌ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೊಲೆಯ ಬಳಿಕ ಆರೋಪಿಗಳು ರಿಡ್ಜ್ ಹಾಗೂ ಇನೋವಾ ಕಾರಿನಲ್ಲಿ ತೆರಳಿದ್ದರು. ರಿಡ್ಜ್ ಕಾರು ಗುರುವಾರವೇ ಕಣಂಜಾರು ಬಳಿಯ ಬ್ರಹ್ಮಲಿಂಗೇಶ್ವರ ಮೇಲಂಟೆ ದೇವಸ್ಥಾನದ ಬಳಿ ಪತ್ತೆಯಾಗಿತ್ತು. ಇನೋವಾ ಕಾರು ಶುಕ್ರವಾರ ಕಾರ್ಕಳ ಸಮೀಪದ ಇರ್ವತ್ತೂರುವಿನಲ್ಲಿ ಪತ್ತೆಯಾಗಿದೆ. ಆರೋಪಿಗಳು ಕಾರು ನಿಲ್ಲಿಸಿ ಬೇರೆ ವಾಹನಗಳಲ್ಲಿ ತೆರಳಿರುವ ಸಾಧ್ಯತೆಗಳಿವೆ.

Advertisement

ಇದನ್ನೂ ಓದಿ: ಡ್ರಗ್ ಪ್ರಕರಣ: ಮಂಗಳೂರು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅನುಶ್ರೀ

ಹಲವರ ವಿರೋಧ ಕಟ್ಟಿಕೊಂಡಿದ್ದ ಕಿಶನ್‌ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎನ್ನುವ ಮಾತುಗಳು ಕೆಲವೊಂದು ಮೂಲಗಳ ಪ್ರಕಾರ ಕೇಳಿಬರುತ್ತಿವೆ. ತನಿಖೆ ಹಲವು ತಂಡಗಳನ್ನು ರಚಿಸಿರುವ ಪೊಲೀಸ್‌ ಇಲಾಖೆಯು ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next