ನವದೆಹಲಿ: ರೈತರ ಬೆಳೆ ಸಾಗಣೆಗಾಗಿ ಕಿಸಾನ್ ರೈಲು ಸೇವೆ ಆರಂಭಿಸಿ ಒಂದು ವರ್ಷ ಕಳೆದಿದೆ.
ಈ ಒಂದು ವರ್ಷದಲ್ಲಿ ಆಹಾರ ಸಂಸ್ಕರಣೆ ಸಚಿವಾಲಯದಿಂದ ಬರಬೇಕಿದ್ದ 95 ಕೋಟಿ ರೂ. ಇನ್ನೂ ತಮಗೆ ಬಂದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
2020ರ ಅ.14ರಿಂದ 2021ರ ಅ.10ರವರೆಗೆ ರೈಲ್ವೆ ಇಲಾಖೆಯು 129 ಮಾರ್ಗದಲ್ಲಿ 1,455 ಕಿಸಾನ್ ರೈಲುಗಳನ್ನು ಓಡಿಸಿದೆ. ಅದರಲ್ಲಿ 4.78 ಲಕ್ಷ ಟನ್ ಬೆಳೆ ಸಾಗಣೆ ಮಾಡಲಾಗಿದೆ. ಅದರ ರೈಲ್ವೆ ದರ 182.46 ಕೋಟಿ ರೂ.ಗಳಾಗುತ್ತದೆ.
ಆದರೆ ಸರ್ಕಾರವು ಕಿಸಾನ್ ರೈಲಿನ ಟಿಕೆಟ್‌ಗಳಿಗೆ ಶೇ. 50 ರಿಯಾಯಿತಿ ನೀಡಿದೆ. ಉಳಿದ ಶೇ.50 ಅನ್ನು ಸಚಿವಾಲಯ ರೈಲ್ವೆ ಇಲಾಖೆಗೆ ನೀಡಬೇಕಿದೆ.
ಆ ಹಿನ್ನೆಲೆಯಲ್ಲಿ 94.92 ಕೋಟಿ ರೂ. ಹಣ ರೈಲ್ವೆಗೆ ಸರ್ಕಾರದಿಂದ ಪಾವತಿಯಾಗಬೇಕಿದೆ ಎನ್ನಲಾಗಿದೆ.
ಇದನ್ನೂ ಓದಿ:ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ! 2020ರ ಮಾಹಿತಿ ಹೊರ ಹಾಕಿದ ಕೇಂದ್ರ