Advertisement

ಎಫ್‌ಐಆರ್‌ನಿಂದ ಮಿರಾಶಿ ಹೆಸರು ಕೈಬಿಡಲು ಆಗ್ರಹ

04:41 PM Feb 14, 2021 | Team Udayavani |

ಯಲ್ಲಾಪುರ: ಮದನೂರು ಗ್ರಾಪಂ ಸದಸ್ಯರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪ್ರಥಮ ಪ್ರಕರಣ ದಾಖಲಾದವರಲ್ಲಿ ಸ್ಥಳೀಯ ಮುಖಂಡ ವಿಜಯ ಮಿರಾಶಿ ಹೆಸರನ್ನು ಕೈಬಿಡುವಂತೆ ಅಗ್ರಹಿಸಿ ತಹಶೀಲ್ದಾರ್‌ಗೆ ಮಿರಾಶಿ ಅಭಿಮಾನಿಗಳು ಶನಿವಾರ ಕಿರವತ್ತಿಯಲ್ಲಿ ಮನವಿ ಸಲ್ಲಿಸಿದರು.

Advertisement

ಕಿರವತ್ತಿ ಮದನೂರು ಕ್ರಾಸ್‌ನಿಂದ ಗ್ರಾಪಂ ಕಚೇರಿವರೆಗೆ ಮೆರವಣಿಗೆ ನಡೆಸಿದ ಅಭಿಮಾನಿಗಳು ಗ್ರೇಡ್‌2 ತಹಶೀಲ್ದಾರ್‌ ಸಿ.ಜಿ. ನಾಯ್ಕರಿಗೆ ಮನವಿ ಸಲ್ಲಿಸಿದರು. ಪ್ರಕರಣದಲ್ಲಿ ಮಿರಾಶಿ ಅವರ ಹೆಸರನ್ನು

ದಾಖಲಿಸಿದ್ದಾರೆ. ಘಟನೆ ನಡೆದ ದಿನ ಮಿರಾಶಿ ಅವರು ಯಲ್ಲಾಪುರದ ತಮ್ಮ ಮನೆಯಲ್ಲಿಯೇ ಇದ್ದರು. ಯಾವುದೇ ಹೊಡೆದಾಟಕ್ಕೆ ಹೋಗದೇ ಇದ್ದರೂ ಸಹ ಪ್ರಥಮ ವರದಿಯಲ್ಲಿ ಅವರ ಹೆಸರನ್ನು ದಾಖಲಿಸಲಾಗಿದೆ. ಎಫ್‌ಐಆರ್‌ ನಿಂದ ಮಿರಾಶಿ ಹೆಸರನ್ನು ಕೈಬಿಡಬೇಕೆಂದು ಅಭಿಮಾನಿಗಳು ಮನವಿಯಲ್ಲಿ ಆಗ್ರಹಿಸಿದರು.

ಮಿರಾಶಿ ಅಭಿಮಾನಿಗಳಾದ ರೆಹಮತ್‌ ಅಬ್ಬಿಗೇರಿ, ಮಾಕು ಕೊಕರೆ, ಎಂ.ಬಿ. ಗೌಡಾ, ಮುರಳಿ ಹೆಗಡೆ, ಬಾಲು ನಾಯಕ, ಮಂಜು ರಾಯ್ಕರ್‌, ಶಿರೀಷ ಪ್ರಭು, ಗಂಗಾರಾಮ ಕೊಖರೆ, ಪದ್ದು ಪಿಂಗಳೆ, ಶಾಮು ಶಿಂಧೆ,ದೂಳು ದೋಯಿಪುಡೆ, ಈಶ್ವರ ಸೋಮಪುರಕರ್‌, ಪಪಂ ಸದಸ್ಯ ಸತೀಶ ನಾಯ್ಕ, ಅಬ್ದುಲ್‌ ಅಲಿ, ನಾಗರಾಜ ಅಂಕೋಲೆಕರ್‌, ಗಂಗು ಪಾಟಿಲ್‌, ಕಿರವತ್ತಿ ಗ್ರಾಪಂ ಅಧ್ಯಕ್ಷೆ ಮಂಜುಳ ವರದಾನಿ, ಉಪಾದ್ಯಕ್ಷೆ ರೇಣುಕಾ ಹೋಳಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next