Advertisement

ರಕ್ಷಣೆಗೆ ಕಿರ್ಲೋಸ್ಕರ್‌ ಸಾಥ್‌

06:00 AM Dec 28, 2018 | |

ಶಿಲ್ಲಾಂಗ್‌: ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿರುವ ಗಣಿ ದುರಂತದಲ್ಲಿ ಸಿಲುಕಿರುವ ಕಾರ್ಮಿಕರನ್ನು ಮೇಲೆತ್ತುವ ಸಾಹಸ ಕಾರ್ಯಕ್ಕೆ ಕಿರ್ಲೋಸ್ಕರ್‌ ಕಂಪೆನಿ ಸ್ವಯಂ ಪ್ರೇರಿತವಾಗಿ ಕೈಜೋಡಿಸಿದೆ.

Advertisement

370 ಅಡಿ ಆಳದಲ್ಲಿ ಕಾರ್ಮಿಕರು ಸಿಲುಕಿದ್ದು ಅವರಿರುವ ಸ್ಥಳದಲ್ಲಿ ನೀರು ತುಂಬಿಕೊಂಡಿರುವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತುಕಡಿ ನಡೆಸುತ್ತಿರುವ ಪರಿಹಾರ ಕಾರ್ಯ  ವಿಳಂಬವಾಗಿತ್ತು. ಹಾಗಾಗಿ,ಸ್ಥಳೀಯ ಆಡಳಿತ ರಾಜ್ಯ ಸರಕಾರಕ್ಕೆ ಪತ್ರ ಬರೆದು 25 ಬಿಎಚ್‌ಪಿ ಸಾಮರ್ಥ್ಯದ ಪಂಪ್‌ಗ್ಳನ್ನು ಪೂರೈಸು ವಂತೆ ಕೋರಿತ್ತು. 

ಈ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್‌ ಬ್ರದರ್ಸ್‌ ಲಿಮಿಟೆಡ್‌, ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಪಂಪ್‌ ಗಳನ್ನು ಪೂರೈಸು ವುದಾಗಿ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next