Advertisement

ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್‌ ಶಂಕರ್‌ “

02:45 PM May 25, 2022 | Team Udayavani |

ಲೂಸ್‌ ಮಾದ ಯೋಗಿ ನಾಯಕರಾಗಿ ಅಭಿನಯಿಸಿರುವ “ಕಿರಿಕ್‌ ಶಂಕರ್‌’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ತೆರೆ ಕಾಣುತ್ತಿದೆ.

Advertisement

ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ಕಿರಿಕ್‌ ಶಂಕರ್‌’ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. “ಕಬ್ಜ’ ಖ್ಯಾತಿಯ ನಿರ್ದೇಶಕ ಆರ್‌. ಚಂದ್ರು ಮತ್ತು ರ್ಯಾಪರ್‌ ಅಲ್‌ ಓ.ಕೆ (ಅಲೋಕ್‌) “ಕಿರಿಕ್‌ ಶಂಕರ್‌’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನಂತರಾಜು, “ಇಡೀ ತಂಡದ ಪರಿಶ್ರಮದಿಂದ ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯಮನಸ್ಸುಗಳು ಸೇರಿ ಮಾಡುವ ಕೆಲಸ ಒಳ್ಳೆಯದೆ ಆಗುತ್ತದೆ ಎಂಬ ಭರವಸೆ ಇದೆ. ನಮ್ಮ ಸಿನಿಮಾ ನೋಡಿ ಹಾರೈಸಿ’ ಎಂದರು.

“ಇದೇ ಏಪ್ರಿಲ್‌ನಲ್ಲಿ ಈ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿತ್ತು. ಆದರೆ ತುಂಬಾ ಸಿನಿಮಾಗಳು ಬಿಡುಗಡೆಯಾಗಿದ್ದರಿಂದ ನಮ್ಮ ಸಿನಿಮಾದ ಬಿಡುಗಡೆಯನ್ನುಕೆಲಕಾಲ ಮುಂದೂಡಬೇಕಾಯಿತು’ ಎನ್ನುವುದು ನಿರ್ಮಾಪಕ ಎಂ. ಎನ್‌. ಕುಮಾರ್‌ ಮಾತು.

ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಟ ಯೋಗಿ, “ಅಣ್ಣಾವ್ರ ಬ್ಯಾನರ್‌ ನಂತರ ನಾನು ಕೆಲಸ ಮಾಡಿದ ದೊಡ್ಡ ಬ್ಯಾನರ್‌ ಇದು. ಸಾಕಷ್ಟು ಹಿಟ್‌ಸಿನಿಮಾಗಳನ್ನು ಕೊಟ್ಟ ನಿರ್ದೇಶಕರು,ಅನುಭವಿ ನಿರ್ಮಾಪಕರ ಜೊತೆ ಕೆಲಸಮಾಡಿದ್ದು ನನಗೂ ಖುಷಿ ತಂದಿದೆ. ಎಲ್ಲರ ಪರಿಶ್ರಮದಿಂದ ಸಿನಿಮಾಚೆನ್ನಾಗಿ ಬಂದಿದೆ. ಸಿನಿಮಾ ಮತ್ತು ನನ್ನ ಪಾತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ’ ಎಂದರು.

Advertisement

ನಾಯಕಿ ಅದ್ವಿಕಾ ರೆಡ್ಡಿ, ನಟ ರಿತೇಶ್‌, ಸಂಕಲನಕಾರ ನಾಗೇಂದ್ರ ಅರಸ್‌,ಸಂಗೀತ ನಿರ್ದೇಶಕ ವೀರ ಸಮರ್ಥ್,ಛಾಯಾಗ್ರಾಹಕ ಜೆ. ಜಿ ಕೃಷ್ಣ ಹಾಗೂಕಾರ್ಯಕಾರಿ ನಿರ್ಮಾಪಕಯೋಗೀಶ್‌ ಹುಣಸೂರು “ಕಿರಿಕ್‌ ಶಂಕರ್‌’ ಸಿನಿಮಾದ ಅನುಭವಗಳನ್ನು ಹಂಚಿಕೊಂಡು, ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next