ವಿಶಾಖಪಟ್ಟಣ: ಆಂಧ್ರಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ಕಿರಣ್ ಕುಮಾರ್ ರೆಡ್ಡಿ ಶೀಘ್ರದಲ್ಲಿಯೇ ಬಿಜೆಪಿ ಸೇರುವ ಸಾಧ್ಯತೆ ಇದೆ.
ಇದರಿಂದಾಗಿ ಆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳು ಇವೆ. ರಾಯಲಸೀಮಾ ಪ್ರದೇಶದ ಪ್ರಮುಖ ನಾಯಕರಾಗಿರುವ ಕಿರಣ್ ಕುಮಾರ್ ರೆಡ್ಡಿಯವರಿಗೆ ಬಿಜೆಪಿ ಸೇರಿದರೆ, ಪ್ರಮುಖ ಹುದ್ದೆಯನ್ನು ನೀಡುವ ಆಫರ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಮಿಷನ್ ಸೌತ್ ಎಂಬ ಬಿಜೆಪಿಯ ಯೋಜನೆಯ ಅನ್ವಯ ಕಿರಣ್ ರೆಡ್ಡಿಯವರನ್ನು ಸೇರ್ಪಡೆ ಮಾಡಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಚಿತ್ತೂರು ಜಿಲ್ಲೆಯ ವಯಲ್ಪಾಡು ಕ್ಷೇತ್ರದಿಂದ ನಾಲ್ಕು ಬಾರಿ ಇವರು ಆಯ್ಕೆಯಾಗಿದ್ದಾರೆ. ಕಿರಣ್ ರೆಡ್ಡಿ ಅವರು ಅವಿಭಜಿತ ಆಂಧ್ರದ ಕೊನೆಯ ಸಿಎಂ ಆಗಿದ್ದಾರೆ.