Advertisement
ಕಿರಣ್ ಹುಟ್ಟಿದ್ದು ಗದಗ ಜಿಲ್ಲೆಯ ರೋಣದಲ್ಲಿ. ತಂದೆ ತಾಯಿ ಉದ್ಯೋಗಿಗಳು. ತಾಯಿ ಶಿಕ್ಷಕಿಯಾಗಿದ್ದ ಕಾರಣ ಅವರ ವರ್ಗಾವಣೆಯಾದಾಗಲೆಲ್ಲ ಬೇರೆಬೇರೆ ಜಾಗದಲ್ಲಿ ನೆಲೆ ಕಂಡುಕೊಳ್ಳಬೇಕಾಯ್ತು. ಹೀಗಾಗಿ ಅಂಗನವಾಡಿಗೆ 4 ತಿಂಗಳಲ್ಲೇ ಪ್ರವೇಶ ಪಡೆದ. ಶೃಂಗೇರಿಯ ಶಾರದಾಂಬೆಯ ಮಡಿಲಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿ ಧಾರವಾಡದ ಕೋಳಿವಾಡದಲ್ಲಿ ಶಿಕ್ಷಣ ಆರಂಭಿಸಿದ. ಎಲ್ಲ ಮಕ್ಕಳು ಮಣ್ಣಲ್ಲಿ ಆಟ ವಾಡುತ್ತಿದ್ದರೆ ಇವನು ಅಕ್ಷರಗಳನ್ನು ಬರೆಯುತ್ತಿದ್ದ. ಗಣಿತವೆಂದರೆ ಬಲು ಸುಲಭ. 2 ವರ್ಷಕ್ಕೆR 30ರ ವರೆಗೆ ಮಗ್ಗಿ ಹೇಳುತ್ತಿದ್ದ ಇವನು ಹಲವು ಬಾರಿ ರಾಜ್ಯಮಟ್ಟದಲ್ಲಿ ಮಗ್ಗಿ ಹೇಳುವ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದ. ಎರಡೂವರೆ ವರ್ಷ. ನರ್ಸರಿಯಲ್ಲಿರುವಾಗಲೇ 5ನೇ ಕ್ಲಾಸ್‌ವರೆಗಿನ ಪುಸ್ತಕದ ಪಾಠಗಳನ್ನು ಕಲಿತಿದ್ದ. ಅಲ್ಲದೇ ತನ್ನನ್ನು 5ನೇ ಕ್ಲಾಸ್‌ಗೆ ಸೇರಿಸಿ ಎಂದು ಅಳುತ್ತಿದ್ದ. ಇವನ ಮಾತು, ಜಾಣ್ಮೆ ಕಂಡು ಶಿಕ್ಷಕರೂ ಅಚ್ಚರಿಗೊಂಡಿದ್ದರು.
Related Articles
Advertisement
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ಬಿಕಾಂ ಪದವಿಗೆ ಸೇರಿದ ಕಿರಣ್, ಕಾಲೇಜಿನಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದ. ಹಾಸ್ಟೆಲ್‌ನಲ್ಲಿದ್ದುಕೊಂಡೇ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿವಿಧ ಕೋರ್ಸ್‌ಗಳನ್ನು ಸರ್ಟಿಫಿಕೇಟ್ ಗಳಿಸಿಕೊಂಡಿದ್ದಾನೆ. ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೀರ್ತಿ ಇವನದ್ದು. ಒಟ್ಟಿನಲ್ಲಿ ಸಕಲ ಕಲಾ ವಲ್ಲಭನಾಗಿರುವ ಕಿರಣ್‌ಗೆ ಗೊತ್ತಿಲ್ಲದ ವಿದ್ಯೆಯೇ ಇಲ್ಲ. ಪದವಿ ಮಾಡುತ್ತಿರುವಾಗ ತಾನಿದ್ದ ಕಾಲೇಜ್‌ನಲ್ಲಿ ಕುಸ್ತಿ ಪಟುಗಳನ್ನು ತಯಾರು ಮಾಡಿ ಕೋಚ್ ಸ್ಥಾನ ಪಡೆದು ರಾಜ್ಯದಲ್ಲೇ ಹೆಸರುಗಳಿದ್ದ. ಕಾಲೇಜಿನ ಪ್ರತಿಯೊಂದು ಚಟುವಟಿಕೆಗಳಲ್ಲಿ ಮೂಂಚೂಣಿಯಲ್ಲಿದ್ದ ಇವನು ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿರುವುದು ಮಾತ್ರವಲ್ಲ ವಿವಿಧ ಸಂಘಸಂಸೆೆ§ಗಳ ಪ್ರಶಸ್ತಿಗಳಿಗೂ ಪಾತ್ರನಾಗಿದ್ದಾನೆ. ಅಲ್ಲದೇ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ಉದ್ಯೋಗ ಮಾರ್ಗದರ್ಶನ ತರಬೇತಿ ನೀಡಿ ಸಂಪನ್ಮೂಲ ವ್ಯಕ್ತಿಯಾಗಿಯೂ ಹೆಸರು ಗಳಿಸಿದ್ದ. ಮೂರೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದ್ದಾನೆ. ಕ್ರೀಡೆಯಲ್ಲಿ ಮಾತ್ರವಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಿರಂತರ ಪಾಲ್ಗೊಂಡು
ಎಸ್‌ಡಿಎಂ ಕಲಾ ವೈಭವದ ಸದಸ್ಯನಾಗಿ ಹಲವಾರು ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧೆಡೆ ನೀಡಿದ್ದಾನೆ. ಅನೇಕ ಸಾಹಿತಿಗಳ ಒಡನಾಟ ಹೊಂದಿರುವ ಕಿರಣ್‌ಗೆ ಹಾಡುವುದು, ಬರೆಯುವುದೆಂದರೆ ಅತೀ ಪ್ರಿಯವಾದದ್ದು.
ಪದವಿ ಶಿಕ್ಷಣ ಅಂತಿಮ ವರ್ಷದಲ್ಲಿ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಇನ್ಫೋಸಿಸ್, ಎಚ್‌ಜಿಎಸ್ ಸೇರಿದಂತೆ ಹಲವು ಕಂಪೆನಿಗಳಿಗೆ ಆಯ್ಕೆಯಾಗಿದ್ದರೂ ಅವೆಲ್ಲವನ್ನೂ ತಿರಸ್ಕರಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಲೇಷ್ಯಾಕೆೆR ಬಂದಿರುವ ಕಿರಣ್ ಇಲ್ಲಿನ ಹೆಲ್ಪ್ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಎ. ಪದವಿ ಮಾಡುತ್ತಿದ್ದು, ಇಲ್ಲಿಯೂ ಇವನ ಸಾಧನೆಯ ಹಾದಿ ಬೆಳೆಯುತ್ತಿದೆ.
ಮಲೇಷ್ಯಾದಲ್ಲಿ ನಡೆದ ಅಲಿಬಾಬಾ ಗ್ಲೋಬಲ್ ಇ- ಕಾಮರ್ಸ್ ಟಾಲೆಂಟ್ (ಜಿಇಟಿ) ಚಾಲೆಂಜ್ 2020 ಸ್ಟಾರ್ಟ್ ಅಪ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ 11ನೇ ಸ್ಥಾನ ಗಳಿಸಿದ್ದಾನೆ. ಅಲ್ಲದೇ ಇವನ ತಂಡ ಹಲವಾರು ಬಹುಮಾನಗಳನ್ನು ಗಳಿಸಿದೆ.
ಕಿರಣ್ ನೇತೃತ್ವದ ತಂಡ ರಚಿಸಿದ foodxless ಎಂಬ ಐಡಿಯಾದ ಉದ್ದೇಶ ಕಡಿಮೆ ಬಳಕೆಯ ಮೂಲಕ ಆಹಾರ ಪೋಲಾಗುವುದನ್ನು ಕಡಿಮೆ ಮಾಡುವುದು. ಅವಧಿ ಮುಗಿಯುವ ದಿನಾಂಕಕ್ಕೆ ಹತ್ತಿರದಲ್ಲಿ ಇರುವ ಆಹಾರವನ್ನು ಕಡಿಮೆ ಬೆಲೆಗೆ ವಿತರಿಸುವುದು ಮತ್ತು ಆಹಾರದ ಅಗತ್ಯವಿರುವವರಿಗೆ ಉಚಿತವಾಗಿ ನೀಡುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತಿದೆ. ಮಲೇಷ್ಯಾದಲ್ಲಿ ಅಲಿಬಾಬಾ ಗೆಟ್ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂದೆನಿಸಿಕೊಂಡಿರುವ ಕಿರಣ್, 2020ರಲ್ಲಿ ಮಲೇಷ್ಯನ್ ನ್ಯಾಶನಲ್ ಯಂಗ್ ಟ್ಯಾಲೆಂಟ್‌ನಲ್ಲಿ ಮೊದಲ 100 ಯಂಗ್ ಟ್ಯಾಲೆಂಟ್‌ಗಳಲ್ಲಿ ಪ್ರಶಸ್ತಿ ಗಳಿಸಿದ್ದಾನೆ.
ತನ್ನ ವಿದ್ಯಾಭ್ಯಾಸದೊಂದಿಗೆ ಮಲೇಷ್ಯಾದಲ್ಲಿ ನೆಲೆಸಿರುವ ಕರ್ನಾಟಕ ಮಕ್ಕಳಿಗೆ ಕನ್ನಡ ಕಲಿ ಯೋಜನೆ ಮೂಲಕ ಶಿಕ್ಷಕನಾಗಿ ಕನ್ನಡ ಶಿಕ್ಷಣವನ್ನೂ ನೀಡುತ್ತಿರುವ ಕಿರಣ, KSR NEST ಎಂಬ ಯೂಟ್ಯೂಬ್ ಚಾನೆಲ್ ಮೂಲಕ ವಿದೇಶಗಳಲ್ಲಿ ಶಿಕ್ಷಣ ಪಡೆಯುವುದು, ಖರ್ಚುವೆಚ್ಚಗಳ ಕುರಿತು ಮಾಹಿತಿ ನೀಡುತ್ತಿದ್ದಾನೆ.
ರಘು ದೇಸಾಯಿ, ಮಲೇಷ್ಯಾ