Advertisement

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ಗ ಕುಂಬ್ಳೆ ಕೋಚ್‌

10:40 AM Oct 12, 2019 | Sriram |

ಮುಂಬೈ: ನಾಯಕ ವಿರಾಟ್‌ ಕೊಹ್ಲಿ ಜತೆ ಭಿನ್ನಾಭಿಪ್ರಾಯದಿಂದ ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗಿಳಿದಿದ್ದ ಅನಿಲ್‌ ಕುಂಬ್ಳೆ ಮತ್ತೆ ತರಬೇತಿ ವಿಭಾಗಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ.

Advertisement

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಪ್ರಮುಖ ತಂಡವಾಗಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಕೋಚ್‌ ಆಗಿ ಅನಿಲ್‌ ಕುಂಬ್ಳೆ ಅವರನ್ನು ನೇಮಕಗೊಳಿಸಲಾಗಿದೆ.

ಕಿಂಗ್ಸ್‌ ಇಲೆವೆನ್‌ ತಂಡಕ್ಕೆ ಕುಂಬ್ಳೆ ಕೋಚ್‌ ಆಗಿರುವುದು ನಮಗೆ ಸಂತಸವಾಗಿದೆ. ಅವರ ಕೋಚಿಂಗ್‌ ಮತ್ತು ಕ್ರಿಕೆಟ್‌ ಪಾಂಡಿತ್ಯದ ಬಗ್ಗೆ ವಿಶ್ವಕ್ಕೇ ತಿಳಿದಿದೆ. ಕುಂಬ್ಳೆ ಐಪಿಎಲ್‌ನಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಭಾರತ ತಂಡ ಮತ್ತು ಎರಡು ಐಪಿಎಲ್‌ ತಂಡಗಳೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ ಕೂಡ. ಅವರ ಮಾರ್ಗದರ್ಶನದಲ್ಲಿ ಕಿಂಗ್ಸ್‌ ಇಲೆವೆನ್‌ ತಂಡ ಉತ್ತಮ ಪ್ರದರ್ಶನ ನೀಡುತ್ತದೆಂಬ ವಿಶ್ವಾಸವಿದೆ’ ಎಂದು ಕಿಂಗ್ಸ್‌ ಇಲೆವೆನ್‌ ತಂಡದ ಸಹ ಮಾಲಕರಾದ ನೆಸ್‌ ವಾಡಿಯಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next