ಮಡಿಕೇರಿ : ಮದೆನಾಡು ಗ್ರಾ.ಪಂ ವ್ಯಾಪ್ತಿಯ ಬೋಮ್ಮೇಗೌಡನ ಭವಾನಿಶಂಕರ್ ಎಂಬುವವರ ಮನೆಯಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪಿಯೂಷ್ ಪೆರೇರ ಸೆರೆ ಹಿಡಿದು ರಕ್ಷಿಸಿದ್ದಾರೆ.
ಕಾಫಿ ತುಂಬಿದ ಚೀಲಗಳ ಮಧ್ಯೆ ಸೇರಿಕೊಂಡಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹರ ಸಾಹಸದ ಮೂಲಕ ಪಿಯೂಷ್ ಪೆರೇರ ಅವರು ಸೆರೆ ಹಿಡಿದರು. ಒಂದು ಸಂದರ್ಭದಲ್ಲಿ ಕಾಳಿಂಗ ಸರ್ಪನ ಅಪಾಯಕಾರಿ ದಾಳಿಯಿಂದಲೂ ತಪ್ಪಿಸಿಕೊಳ್ಳಬೇಕಾದ ಸನ್ನಿವೇಶ ಅವರಿಗೆ ಎದುರಾಯಿತು. ಕೊನೆಗೂ ಯಶಸ್ವಿಯಾಗಿ ಸೆರೆಯಾದ ಕಾಳಿಂಗನನ್ನು ಸಂಪಾಜೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟ ಪೆರೇರ ತೃಪ್ತಿಯ ನಿಟ್ಟುಸಿರು ಬಿಟ್ಟರು.
ಇಲ್ಲಿಯವರೆಗೆ ನೂರಾರು ಹಾವುಗಳನ್ನು ರಕ್ಷಿಸಿರುವ ಪಿಯೂಷ್ ಪೆರೇರ ಅವರು ಸೆರೆ ಹಿಡಿದಿರುವ ನಾಲ್ಕನೇ ಕಾಳಿಂಗ ಸರ್ಪ ಇದಾಗಿದೆ. ಹಾವುಗಳ ನಾಶದಿಂದ ಪ್ರಾಕೃತಿಕ ಅಸಮಾತೋಲನ ಉಂಟಾಗುವುದರಿಂದ ಯಾರೂ ಕೊಲ್ಲದೆ ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ಪಿಯೂಷ್ ಪೆರೇರ ಅವರ ಮೊ.ಸಂ : 94819 52253
ಇದನ್ನೂ ಓದಿ : ಗಂಗಾವತಿಯಲ್ಲಿ ಮಟ್ಕಾ,ಇಸ್ಪೀಟ್, ಮೀಟರ್ ಬಡ್ಡಿ ದಂಧೆ: ಅಧಿವೇಶನದಲ್ಲಿ ಹೆಚ್ ಡಿಕೆ ಪ್ರಸ್ತಾಪ