Advertisement

ಯಸಳೂರು ಹೋಬಳಿ ಕೌಕೊಡಿ ಗ್ರಾಮದಲ್ಲಿ 12 ಅಡ್ಡಿ ಉದ್ದದ ಕಾಳಿಂಗ ಸರ್ಪ ಸೆರೆ

12:53 PM Mar 24, 2022 | Team Udayavani |

ಸಕಲೇಶಪುರ: ತಾಲೂಕಿನ ಕೌಕೊಡಿ ಗ್ರಾಮದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿರುವ ಘಟನೆ ಬುಧವಾರ ನೆಡೆದಿದೆ.

Advertisement

ತಾಲೂಕಿನ ಯಸಳೂರು ಹೋಬಳಿಯ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಕೊಡಿ ಗ್ರಾಮದ ಪ್ರವೀಣ್ ಎಂಬುರವರ ಮನೆಯ ಸಮೀಪ ಬುಧವಾರ ಮುಂಜಾನೆ ಭಾರಿ ಗ್ರಾತದ ಕಾಳಿಂಗ ಸರ್ಪ ಕಾಣಿಸಿಕೂಂಡಿದೆ. ಕೂಡಲೇ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಮೋಹನ್ ಸೋಮವಾರಪೇಟೆಯ ಉರಗ ಪ್ರೇಮಿ ರಘು ಎಂಬುವರಿಗೆ ಸ್ಥಳಕ್ಕೆ ಬರಲು ಮನವಿ ಮಾಡಿದ್ದಾರೆ. ಸುಮಾರು 1 ಘಂಟೆಗೂ ಹೆಚ್ಚು ಕಾರ್ಯಾಚರಣೆ ನೆಡೆಸಿದ ಉರಗ ಪ್ರೇಮಿ ರಘು ಸುಮಾರು 12 ಅಡ್ಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಬಿಟ್ಟಿದ್ದಾರೆ. ಮಲೆನಾಡಿನಲ್ಲಿ ಕಾಳಿಂಗಸರ್ಪಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಕಾರ್ಯಾಚರಣೆಯಲ್ಲಿ ಉಪವಲಯರಣ್ಯಾಧಿಕಾರಿ ಪ್ರವೀಣ್ ಕುಮಾರ್ , ಅರಣ್ಯ ರಕ್ಷಕ ಎ.ಕೆ ಕುಮಾರ್ ಹಾಗೂ ಸಿಬ್ಬಂದಿಗಳು ಇದ್ದರು.

ಇದನ್ನೂ ಓದಿ : ತಮಿಳು ನಟ ಸಿಂಬು ಕಾರು ಹರಿದು ವೃದ್ಧ ಸಾವು ; ಚಾಲಕನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next