Advertisement
75 ವರ್ಷದ ಕಿಂಗ್ ಚಾರ್ಲ್ಸ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದ ವೇಳೆ ಕ್ಯಾನ್ಸರ್ ರೋಗ ಲಕ್ಷಣ ಇರುವುದು ಕಂಡುಬಂದಿದೆ ಎಂದು ಬಕಿಂಗ್ಹ್ಯಾಮ್ ಅರಮನೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.ಆದರೆ ಕಿಂಗ್ ಚಾರ್ಲ್ಸ್‌ಗೆ ಯಾವ ರೀತಿಯ ಕ್ಯಾನ್ಸರ್ ಇದೆ ಮತ್ತು ದೇಹದ ಯಾವ ಭಾಗದಲ್ಲಿ ರೋಗ ಲಕ್ಷಣಗಳು ಕಾಣಿಸಿ ಕೊಂಡಿವೆ ಎಂಬುದು ಮಾತ್ರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿಲ್ಲ.
Related Articles
ನಿಯಮಿತ ಚಿಕಿತ್ಸೆ ಪ್ರಾರಂಭವಾದ ನಂತರ ಸೋಮವಾರ ನೀಡಿದ ಹೇಳಿಕೆಯ ಪ್ರಕಾರ, ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರಲು ವೈದ್ಯರು ಕಿಂಗ್ ಚಾರ್ಲ್ಸ್‌ಗೆ ಸಲಹೆ ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಸ್ಥಾನದಲ್ಲಿ ಕುಟುಂಬದ ಇತರ ಹಿರಿಯ ಸದಸ್ಯರು ಸೇರಲಿದ್ದಾರೆ. ಆದಾಗ್ಯೂ, ಈ ಸಮಯದಲ್ಲಿ ಅವರು ದಾಖಲೆಗಳಿಗೆ ಸಹಿ ಹಾಕುವುದು ಮತ್ತು ಅರಮನೆಯೊಳಗೆ ಸಣ್ಣ ಖಾಸಗಿ ಸಭೆಗಳನ್ನು ನಡೆಸುವುದು ಸೇರಿದಂತೆ ರಾಜ್ಯ ವ್ಯವಹಾರವನ್ನು ಮುಂದುವರೆಸುತ್ತಾರೆ ಎಂದು ಹೇಳಲಾಗಿದೆ.
Advertisement
ಬ್ರಿಟನ್ ಪ್ರಧಾನಿ ಟ್ವೀಟ್ ಕಿಂಗ್ ಚಾರ್ಲ್ಸ್ ಅವರ ಆರೋಗ್ಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಕಿಂಗ್ ಚಾರ್ಲ್ಸ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಬ್ರಿಟನ್ ರಾಜ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ರಾಜ ಚಾರ್ಲ್ಸ್ ಶೀಘ್ರ ಗುಣಮುಖರಾಗಲಿ ಎಂದು ಇಡೀ ದೇಶ ಪ್ರಾರ್ಥಿಸುತ್ತಿದೆ ಎಂದು ಸುನಕ್ ಹೇಳಿದ್ದಾರೆ. ಬ್ರಿಟನ್‌ನ ವಿರೋಧ ಪಕ್ಷವಾದ ಲೇಬರ್ ಪಾರ್ಟಿ ಕೂಡ ರಾಜನಿಗೆ ಉತ್ತಮ ಆರೋಗ್ಯವನ್ನು ಬಯಸಿದೆ.