Advertisement

ನರೇಗಾದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ: ಸುಳ್ಯ ಮುಂದು

09:44 AM Feb 01, 2020 | mahesh |

ಸುಳ್ಯ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಮೂರು ವರ್ಷಗಳಲ್ಲಿ 99 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ!

Advertisement

2016-17ರ ಅವಧಿಯಲ್ಲಿ ಆರಂಭ
ಗೊಂಡ ಈ ಯೋಜನೆ ಜಿಲ್ಲೆಯ ಐದೂ ತಾಲೂಕುಗಳಲ್ಲಿ ಪ್ರಗತಿಯಲ್ಲಿದೆ. ಅಂರ್ತಜಲ ಹೆಚ್ಚಿಸುವ ನಿಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆ.

376 ಪೂರ್ಣ
ನರೇಗಾದ ಅನುದಾನ ಪೈಕಿ ಶೇ. 65ರಷ್ಟನ್ನು ಜಲಸಂರಕ್ಷಣೆಗೆ ಬಳಸಬೇಕು ಎಂದು 2016-17ರಲ್ಲಿ ಜಿ.ಪಂ.ನಲ್ಲಿ ಯೋಜನೆ ರೂಪಿಸಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕಿಂಡಿ ಅಣೆಕಟ್ಟು ನಿರ್ಮಾಣದ ಗುರಿ ನೀಡಲಾಗಿತ್ತು. ಪ್ರತಿ ಅಣೆಕಟ್ಟಿಗೆ ಗರಿಷ್ಠ 5 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿತ್ತು. ಜಿಲ್ಲೆಯಲ್ಲಿ 1,048 ಅಣೆಕಟ್ಟುಗಳ ಗುರಿ ಇದ್ದು, 456 ಕಡೆ ಕಾಮಗಾರಿ ಆರಂಭಗೊಂಡಿದೆ; 376 ಪೂರ್ಣಗೊಂಡು ನೀರು ಸಂಗ್ರಹಿಸಲಾಗಿದೆ.

ಸುಳ್ಯ ಟಾಪರ್‌
ಸುಳ್ಯ ಗುರಿಯಲ್ಲಿ ಗರಿಷ್ಠ ಪ್ರಗತಿ ಸಾಧಿಸಿದೆ. 140ರ ಪೈಕಿ 101ರ ಕಾಮಗಾರಿ ಆರಂಭಗೊಂಡು, 99 ಪೂರ್ಣಗೊಂಡಿದೆ. ಬೆಳ್ತಂಗಡಿ ತಾಲೂಕಿನಲ್ಲಿ 240 ಗುರಿಯಲ್ಲಿ 107 ಕಾಮಗಾರಿ ಪ್ರಾರಂಭಗೊಂಡು, 85 ಸಂಪೂರ್ಣಗೊಂಡಿವೆ. ಪುತ್ತೂರು ತಾಲೂಕಿನಲ್ಲಿ 205ರಲ್ಲಿ 78 ಪೂರ್ಣಗೊಂಡಿವೆ. ಬಂಟ್ವಾಳ ತಾಲೂಕಿನಲ್ಲಿ 267ರಲ್ಲಿ 69 ಪೂರ್ಣಗೊಂಡಿವೆ. ಮಂಗಳೂರಿ ನಲ್ಲಿ 196ರಲ್ಲಿ 48 ಕಾಮಗಾರಿ ಆರಂಭಗೊಂಡು 37 ಪೂರ್ಣಗೊಂಡಿವೆ.

13.87 ಕೋ.ರೂ. ಬಳಕೆ
ಐದು ತಾಲೂಕಿನಲ್ಲಿ ಒಟ್ಟು 13.87 ಕೋ.ರೂ. ಅನುದಾನ ಖರ್ಚು ಮಾಡಲಾಗಿದೆ. ಸುಳ್ಯದಲ್ಲಿ 341.55 ಲ.ರೂ., ಬೆಳ್ತಂಗಡಿಯಲ್ಲಿ 280.06 ಲ.ರೂ., ಪುತ್ತೂರಿನಲ್ಲಿ 295.40 ಲ.ರೂ., ಬಂಟ್ವಾಳದಲ್ಲಿ 280.10 ಲ.ರೂ., ಮಂಗಳೂರಿನಲ್ಲಿ 147.63 ಲ.ರೂ. ಅನುದಾನ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 171747 ಮಾನವ ದಿನಗಳ ಶ್ರಮ ಬಳಕೆ ಆಗಿದೆ.

Advertisement

ದ.ಕ. ಜಿ.ಪಂನಲ್ಲಿ ಡಾ| ಎಂ.ಆರ್‌. ರವಿ ಅವರು ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಸಂದರ್ಭ ಜಲಸಂರಕ್ಷಣೆಗಾಗಿ ನರೇಗಾದಲ್ಲಿ ಹೆಚ್ಚಿನ ಮೊತ್ತವನ್ನು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬಳಸಲು ಉದ್ದೇಶಿಸಲಾಗಿತ್ತು. ಸುಳ್ಯಕ್ಕೆ 140 ಗುರಿ ನೀಡಿದ್ದು, ಮೂರು ವರ್ಷದಲ್ಲಿ 99 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
– ಭವಾನಿಶಂಕರ ಎನ್‌. ಇಒ, ಸುಳ್ಯ ತಾ.ಪಂ.

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next