Advertisement

ನಮ್ಮ ಹೋರಾಟ ಗೃಹ ಸಚಿವರ ವಿರುದ್ಧವೇ ಹೊರತು ಮುಖ್ಯಮಂತ್ರಿಗಳ ವಿರುದ್ಧ ಅಲ್ಲ: ಕಿಮ್ಮನೆ

01:36 PM Nov 25, 2022 | Team Udayavani |

ತೀರ್ಥಹಳ್ಳಿ : ಅಡಕೆ ಸಸಿಯನ್ನು ಕಂಡು ಹಿಡಿದಿದ್ದೆ ನಾನು ಎಂದು ಆರಗ ಜ್ಞಾನೇಂದ್ರ ಹೇಳ್ತಾರೆ. ಎಲೆ ಚುಕ್ಕೆ ರೋಗ ಅಥವಾ ಕೊಳೆ ರೋಗಕ್ಕೆ ಇಲ್ಲಿಯವರೆಗೆ ಔಷಧಿ ಕಂಡು ಹಿಡಿದಿಲ್ಲ. ವಿಜ್ಞಾನಿಗಳನ್ನು ಕರೆಸಿ ಔಷಧಿ ಕಂಡು ಹಿಡಿಯುತ್ತೇವೆ ಎಂದು ಹೇಳುವುದು ಬರಿ ಭರವಸೆ ಅಷ್ಟೇ. ಇದು ಚುನಾವಣೆಗಾಗಿ ಹಚ್ಚುವ ಮುಲಾಮ್ ಅಷ್ಟೇ ಎಂದು ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು.

Advertisement

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಹುಂಚ ಹೋಬಳಿ, ಮಂಡಗದ್ದೆ, ಸಿಂಗನಬಿದರೆ, ಆಗುಂಬೆ ಹೋಬಳಿ, ನಿಧಿಗೆ, ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ಕಾಡು ಪ್ರಾಣಿಗಳು ಬರದಿರುವ ಹಾಗೆ ಇಲ್ಲಿಯವರೆಗೆ ಏನು ಮಾಡಿಲ್ಲ. ಕಾಡು ಪ್ರಾಣಿಗಳ ಮೂಲಕ ಹಾನಿಯಾಗಿದ್ದ ರೈತರಿಗೆ ಪರಿಹಾರ ಕೂಡ ಘೋಷಿಸಿಲ್ಲ. ಬಿಜೆಪಿ ಸರ್ಕಾರ ರೈತರಿಗೆ ಸಾಲಮನ್ನಾ ಅಥವಾ ಏನು ಮಾಡಿಲ್ಲ ಸಬ್ಸಿಡಿ ವಾಪಾಸ್ ಕೂಡ ತೆಗೆದುಕೊಂಡಿದ್ದಾರೆ. ಯಾವ ತೋಟಗಳಿಗೆ ಎಷ್ಟು ನಷ್ಟವಾಗಿದೆ ಹಾಗೂ ಅದಕ್ಕೆ ಸರಿಯಾದ ರೀತಿಯಲ್ಲಿ ತಂಡವನ್ನು ಮಾಡಿ ಗ್ರಾಮಪಂಚಾಯಿತಿಗೆ ಹೇಳಿ ಸಮಿತಿ ಮಾಡಬೇಕು, ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಸಮಿತಿಯ ರಚನೆ ಮಾಡಿಲ್ಲ. ಒಬ್ಬ ಅಡಕೆ ಬೆಳೆಗರಾರ ಮಗನಾಗಿ ಜ್ಞಾನೇಂದ್ರರವರು ರೈತರಿಗೆ ಈ ರೀತಿ ಮಾಡುವುದು ಸರಿನಾ ಎಂದರು.

ಇದನ್ನೂ ಓದಿ: ವರ್ಷಪೂರ್ತಿ ‘ಅದಿತಿ’ ಮಿಂಚು: ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು

ನ.27 ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸುವುದರ ಬಗ್ಗೆ ಮಾತನಾಡಿ ಗ್ರಾಮಪಂಚಾಯಿತಿ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೆ ಇಂತಿಷ್ಟು ಜನರನ್ನು ಸೇರಿಸಬೇಕು ಎಂದು ತಿಳಿಸಿದ್ದಾರಂತೆ ಪಾಪ ಆ ಅಧಿಕಾರಿಗಳು ಹುಚ್ಚು ಹಿಡಿದು ಓಡಾಡುತ್ತಿದ್ದಾರೆ ಜನರನ್ನು ಸೇರಿಸಿಲ್ಲ ಎಂದರೆ ಕೆಲಸ ಹೋಗುತ್ತೆ ಎನ್ನುವ ಭಯ ಅವರಿಗೆ. ಈ ಕಾರ್ಯಕ್ರಮ 50000 ಜನರನ್ನು ಸೇರಿಸುವ ಅಗತ್ಯವಿತ್ತ. ನ.27 ರಂದ ಪ್ರತಿಭಟನೆ ಮಾಡುವ ಆಲೋಚನೆ ಇತ್ತು. ನಮ್ಮ ಹೋರಾಟ ಅಥವಾ ಪ್ರತಿಭಟನೆ ಜ್ಞಾನೇಂದ್ರ ಅವರ ವಿರುದ್ಧ ಅವರು ಕಿರುಕುಳ ಕೊಡುತ್ತಿರುವದರ ವಿರುದ್ಧ ಹಾಗೂ ಅವರ ಸಿದ್ದಂತಾದ ವಿರುದ್ಧ. ನಾವು ಅಭಿವೃದ್ಧಿ ಮಾಡುವಾಗ ಕಾಮಗಾರಿಗಳಿಗೆ ಯಾವುದೇ ರೀತಿಯಲ್ಲಿ ಬೊಮ್ಮಾಯಿಯವರು ತೊಂದರೆ ಕೊಟ್ಟಿಲ್ಲ ಹಾಗಾಗಿ ನಮ್ಮ ಹೋರಾಟ ಜ್ಞಾನೇಂದ್ರರ ವಿರುದ್ಧವೇ ಹೊರತು ಬೊಮ್ಮ ಯಿ ವಿರುದ್ಧ ಅಲ್ಲ ಎಂದರು

Advertisement

ಆಯನೂರ್ ನಿಂದ ಪಾದಯಾತ್ರೆ ಪ್ರತಿಭಟನೆ

ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯನೂರ್ ನಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಆಯೋಜನೆ ಮಾಡಿದ್ದು ಶಿವಮೊಗ್ಗ ಜಿಲ್ಲೆಯ ಅನೇಕ ಸಮಸ್ಯೆ ಬಗ್ಗೆ ಈ ಪಾದಯಾತ್ರೆ ನೆಡೆಯಲಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಹಾಗೂ ರಾಜ್ಯದ ಮಲೆನಾಡು ರೈತರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ ನೆಡೆಯಲಿದೆ ಎಂದರು. ಈ ಪ್ರತಿಭಟನೆಯಲ್ಲಿ
ಸುರ್ಜೆವಾಲಾ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ ಕೆ ಹರಿಪ್ರಸಾದ್ ಸೇರಿ ಸಾವಿರಾರು ಜನರು ಜೊತೆಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಾರಾಯಣ ರಾವ್, ವಿಶ್ವನಾಥ್ ಶೆಟ್ಟಿ, ಕೆಸ್ತೂರ್ ಮಂಜುನಾಥ್, ಕಡ್ತೂರ್ ದಿನೇಶ್, ಅಮರನಾಥ್ ಶೆಟ್ಟಿ, ರಾಘವೇಂದ್ರ ಮೂಡುಬಾ, ವಿಲಿಯಮ್ ಮಾರ್ಟಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next