Advertisement

ಪರಮಾಣು ಸಿಡಿತಲೆಗಳ ತಯಾರಿಕೆ ಹೆಚ್ಚಳ: ಕಿಮ್‌ ಜಾಂಗ್‌ ಉನ್‌

08:58 PM Jan 01, 2023 | Team Udayavani |

ಸಿಯೋಲ್‌: ಪರಮಾಣು ಸಿಡಿತಲೆಗಳ ತಯಾರಿಕೆಯನ್ನು ತೀವ್ರವಾಗಿ ಹೆಚ್ಚಿಸಲಾಗವುದು ಹಾಗೂ ಹೆಚ್ಚು ಶಕ್ತಿಶಾಲಿ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಸಲಾಗುವುದು ಎಂದು ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ ಘೋಷಿಸಿದ್ದಾರೆ.

Advertisement

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ತಮ್ಮ ಶತ್ರು ದೇಶಗಳಲ್ಲಿ ಠಕ್ಕರ್‌ ಕೊಡಲೆಂದೇ ಕಿಮ್‌ ಈ ನಿರ್ಧಾರ ತಾಳಿದ್ದಾರೆ ಎನ್ನಲಾಗಿದೆ.

ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ನಡೆದ ಆಡಳಿತ ಪಕ್ಷದ ಪ್ರಮುಖ ಸಭೆಯ ನಂತರ ಕಿಮ್‌ ಈ ಘೋಷಣೆ ಪ್ರಕಟಿಸಿದ್ದಾರೆ. 2020ರಲ್ಲಿ ಉತ್ತರ ಕೊರಿಯಾ ದಾಖಲೆಯ ಸಂಖ್ಯೆಯ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ.

“ದೇಶದ ಸಾರ್ವಭೌಮತ್ವ, ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ನಿಟ್ಟಿನಲ್ಲಿ ನಮ್ಮ ಮಿಲಿಟರಿ ಶಕ್ತಿಯನ್ನು ಬಲಪಡಿಸಲು ಹಾಗೂ ಅಮರಿಕ ಮತ್ತಿತ್ತರ ಶತ್ರು ರಾಷ್ಟ್ರಗಳು ನಮ್ಮನ್ನು ಗುರಿಯಾಗಿಸಿ ನಡೆಸುವ ಅಪಾಯಕಾರಿ ದಾಳಿಯನ್ನು ನಿಭಾಯಿಸಲು ಈ ಕ್ರಮ ಕೈಗೊಳ್ಳಲಾಗಿದೆ,’ ಎಂದು ಕಿಮ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next