Advertisement

“ಕಿಲಾಡಿಗಳು’- ಹೀಗೊಂದು ಸಿನಿಮಾದ ಹೆಸರನ್ನು ನೀವು ಕೇಳಿರಬಹುದು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

ಡಿಸೆಂಬರ್‌17 ರಂದು ಚಿತ್ರ ಬಿಡುಗಡೆ ಯಾಗಲಿದೆ. ಬಿ.ಪಿ.ಹರಿಹರನ್‌ ಅವರ ನಿರ್ದೇಶನ, ನಿರ್ಮಾಣವಿದೆ. ಮಹೇಂದ್ರ ಮಣೋತ್‌ ಕೂಡಾ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸುವ ಜೊತೆಗೆ ಪ್ರಮುಖ ಪಾತ್ರ ಮಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಹರಿಹರನ್‌, “ಇದು ಮನುಷ್ಯನ ಅಂಗಾಂಗಗಳಕಳ್ಳ ಸಾಗಣಿಕೆ ಕುರಿತಾದ ಸಿನಿಮಾ. ಈ ಚಿತ್ರದಲ್ಲಿ ಮಕ್ಕಳನ್ನುಕಿಡ್ನಾಪ್‌ ಮಾಡಿ, ಅವರ ಅಂಗಾಂಗಗಳನ್ನು ಯಾವ ರೀತಿ ವಿದೇಶಕ್ಕೆಕಳ್ಳಸಾಗಾಣಿಕೆ ಮಾಡುತ್ತಾರೆ, ಅದಕ್ಕೆ ಅವರು ಅನುಸರಿಸುವ ಮಾರ್ಗಗಳೇನು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ನಿರ್ದೇಶಕರ ಮಾತು.

ಚಿತ್ರತಂಡ ಈ ಚಿತ್ರವನ್ನು ಪೊಲೀಸರಿಗೆ ಅರ್ಪಿಸಿದೆ. ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಪೊಲೀಸ್‌ ಅಂಶಗಳು. ಇಡೀ ಚಿತ್ರದಲ್ಲಿ ಪೊಲೀಸ್‌ ಸಾಹಸವನ್ನು ಎತ್ತಿಹಿಡಿಯಲಾಗಿದೆ. ಪೊಲೀಸರಕುರಿತಾಗಿಯೇಹಾಡುಗಳಿದ್ದು, ಬಿಡುಗಡೆಯಾಗಿರುವಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಕಳ್ಳರು ಮಕ್ಕಳನ್ನುಕಿಡ್ನಾಪ್‌ ಮಾಡಿದಾಗ ಪೊಲೀಸರು ಯಾವ ರೀತಿ ಅವರನ್ನು ರಕ್ಷಿಸುತ್ತಾರೆ, ಅವರು ತೆಗೆದುಕೊಳ್ಳುವ ರಿಸ್ಕ್ ಯಾವ ರೀತಿಯದ್ದು ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ.

ಚಿತ್ರದಲ್ಲಿ ಗುರುರಾಜ ಹೊಸಕೋಟೆ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆವಿ.ನಾಗೇಂದ್ರ ಪ್ರಸಾದ್‌, ಹೃದಯ ಶಿವ ಹಾಡು ಬರೆದಿದ್ದಾರೆ. ಎ.ಟಿ.ರವೀಶ್‌ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರಕೆ ನಿರಂಜನ್‌, ಜಾನ್‌, ಸೂರ್ಯೋದಯ ಅವರ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next