ಕಿಕ್ಕೇರಿ: ಹೊಯ್ಸಳರ ಕಾಲದ ಕಿಕ್ಕೇರಿಯ ಜನಾರ್ದನ ದೇಗುಲ ಕುಸಿಯುವ ಹಂತದಲ್ಲಿದ್ದು ಜೀರ್ಣೋದ್ಧಾರಕ್ಕೆ ಕೈ ಬೀಸಿ ಕರೆಯುವಂತಿದೆ. ದೇಗುಲದ ಒಳಗಡೆ, ಹೊರಗಡೆ ಎನ್ನದೆ ಗಿಡಗಂಟಿ, ಕಲ್ಲುಹೂವು ಬೆಳೆದು ಒಂದೊಂದಾಗಿ ಕಲ್ಲುಗಳು ಸಡಿಲವಾಗಿ ಕಳಚುತ್ತಿವೆ. ಒಂದೆಡೆ ಒತ್ತುವರಿ ಕಾಟದಿಂದ ದೇಗುಲ ನಲುಗಿದರೆ ಮತ್ತೂಂದೆಡೆ ದೇಗು ಲದ ಸುತ್ತ ವಿಷಜಂತುಗಳಿಗೆ ಕೊರತೆ ಇಲ್ಲದಂತೆ ಕಾಡುತ್ತಿದೆ.
ನ್ಯೂಯಾರ್ಕ್ ಮ್ಯೂಸಿಯಂನಲ್ಲಿದೆ: ಮುಖಮಂಟಪ ಕುಸಿದು ಪ್ರವೇಶ ದ್ವಾರಸ್ತಂಭ ಉಳಿದಿದೆ. ನವರಂಗ ಜೀರ್ಣಾವಸ್ಥೆ ತಲುಪಿದರೆ, ಗರ್ಭಗೃಹ, ನವ ರಂಗ ಸುಸ್ಥಿತಿಯಲ್ಲಿದೆ. ನವ ರಂಗ ದಲ್ಲಿನ 4ಹೊಯ್ಸಳ ಶೈಲಿಯ ದುಂಡಾದ ಚುರುಕಿ ಕಂಬ, ಭುವನೇ ಶ್ವರಿಯ ಅಷ್ಟಧಿಕಾ³ಲಕರು, ಸುಖನಾಸಿಯ ಪ್ರವೇಶದ್ವಾರದ ವೈಷ್ಣವ ದ್ವಾರಪಾಲಕರು ಕಣ್ಣರಳಿಸಿ ನೋಡುವಂತಿವೆ. ಇಲ್ಲಿನ ಮೂಲವಿಗ್ರಹ ಜನಾರ್ಧನಮೂರ್ತಿ ನ್ಯೂಯಾರ್ಕ್‌ನ ಮ್ಯೂ ಸಿಯಂ ನಲ್ಲಿದೆ ಎಂದು ಇತಿಹಾಸ ತಜ್ಞರು, ವಿದ್ವಾಂ ಸರು ಹೇಳುತ್ತಾರೆ.
ಸ್ಮಾರಕ, ಕೋಟೆ ಕೊತ್ತಲು, ಗುಡಿ ಗೋಪುರ ನಾಡಿನ ಸಂಸ್ಕೃತಿಯ ಸಂಕೇ ತ ವಾಗಿದ್ದು, ಜತನವಾಗದಿ ದ್ದಲ್ಲಿ ಮುಂದಿನ ಪೀಳಿಗೆಗೆ ಸಿಗುವುದು ಚಿತ್ರ ಪಟ ದಲ್ಲಿ ಎನ್ನುವಂತೆ ಗ್ರಾಮದ ಸುಂದರ ಜನಾರ್ದನ ದೇಗುಲದ ಜನಾರ್ಧನ ಮೂರ್ತಿ ನ್ಯೂ ಯಾರ್ಕ್‌ನ ಮ್ಯೂಸಿಯಂನಲ್ಲಿರುವುದೇ ಸಾಕ್ಷಿಯಾಗಿದೆ.
ಕಲೆಯ ಬೀಡು: ಕಿಕ್ಕೇರಿ ಹೋಬಳಿ ಹೊಯ್ಸಳರ ಕಲೆಯ ಬೀಡಾಗಿದೆ. ಗ್ರಾಮ ಹೊಯ್ಸಳರ ಉಪ ರಾಜಧಾನಿ ಯಾಗಿತ್ತು. ಗ್ರಾಮದ ಹೊಯ್ಸ ಳರ ವಿನಯಾದಿತ್ಯನ ಕಾಲದ (1095) ಮೂಲ ಬ್ರಹೆ¾àಶ್ವರ(ಕಾಡು ಮಲ್ಲೇಶ್ವರ), ಒಂದನೇ ನರಸಿಂಹನ ಕಾಲದ(1171) ಬ್ರಹೆ¾àಶ್ವರ, ಮೂರನೇ ನರಸಿಂಹನ ಕಾಲದ(1260) ಜನಾರ್ಧನ, ಮೂರನೇ ಬಲ್ಲಾಳನ ಕಾಲದ(1330) ಸುಂದರ ಯೋಗಾನರಸಿಂಹ ಸ್ವಾಮಿ ದೇಗುಲ, ವಿಜಯನಗರದ ಕಾಲದ ಗ್ರಾಮ ದೇವತೆ ಕಿಕ್ಕೇರಮ್ಮ ಪುರಾತನ ಕಾಲದ ಅಪ ರೂಪದ ಸ್ಮಾರಕಗಳಾಗಿರುವ ಉಲ್ಲೇಖವಿದೆ.
ಕಾಲಯಮನಿಗೆ ಸಿಲುಕಿದ ದೇಗುಲ: ಪ್ರೇಮಕವಿ ಕೆ.ಎಸ್. ನರ ಸಿಂಹಸ್ವಾಮಿ ಹುಟ್ಟಿ ಬೆಳೆದು ಕಾವ್ಯಸ್ಪೂರ್ತಿಯಾದ ಇಲ್ಲಿನ ಸಿರಿಗೆರೆ (ಅಮಾನಿಕೆರೆ)ಯ ತಟದಲ್ಲಿ ಪೂರ್ವಾಭಿಮುಖವಾಗಿ 4ಅಡಿ ಎತ್ತರದ ವೇದಿಕೆಯಲ್ಲಿ ಹೊಯ್ಸಳರ ಸುಂದರ ವಾಸ್ತು ಶೈಲಿ ಯಲ್ಲಿ ಜನಾರ್ದನ ದೇಗುಲ ಮೂಡಿದೆ. ದೇಗುಲ ವೇದಿಕೆ ಮೇಲೆ 4ಹಂತದ ಕಪೋತಬಂಧ ಅಧಿಷ್ಠಾನ, ತಳಪಾದಿಯ ಮೇಲೆ ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪವಿದೆ. ಅಧಿಷ್ಠಾನದ ಮೇಲೆ ದೇಗುಲ ಭಿತ್ತಿಗೆ ಸೇರಿದಂತೆ ಊಧ್ವìಕಂಪವು 3 ಪಟ್ಟಿಗೆ ಗಳಿಂದ ಕೂಡಿದ್ದು ಸುತ್ತಲೂ ಸುಂದರ ಶಿಲಾಬಾಲಿಕೆಯರ, ದೇವಾನು ದೇವತೆಗಳ ಮೂರ್ತಿಗಳು ಜೀವತಳಿದಂತೆ ಕಲ್ಲಿನಲ್ಲಿ ಅರಳಿವೆ. ದೇಗುಲಕ್ಕೆ 4ಹಂತದ ಸುಂದರ ಗೋಪುರವಿದ್ದು, ಪ್ರಸ್ತರ, ಗ್ರೀವ, ಶಿಖರ, ಸ್ಥೂಪಿ ಗಳಿದ್ದು, ದೇಗುಲ ಹೊಂಬಣ್ಣದ ಗ್ರಾನೈಟ್ ಶಿಲೆ ಯಿಂದ ನಿರ್ಮಿತ ವಾದಂತಿದೆ. ಹೊಯ್ಸಳ ಶೈಲಿಯ 4 ಹಂತದ ಸುಂದರವಾದ ಗೋಪು ರವಿದ್ದು, ಪ್ರಸ್ತರ, ಗ್ರೀವ, ಶಿಖರ ಮತ್ತು ಸ್ಥೂಪಿಗಳಿಂದ ಕೂಡಿದೆ.
ಕಿಡಿಗೇಡಿಗಳ ಪಾಲು: ಸ್ಥಳೀಯ ಗಣ್ಯಶ್ರೇಷ್ಠರ, ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ದೇಗುಲದ ಸುತ್ತ ಗಿಡಗಂಟಿ ಹೆಮ್ಮರ ವಾಗಿ ಬೆಳೆದರೆ, ದೇಗುಲದ ಕಲ್ಲುಗಳು ಬಹುತೇಕ ಕಿಡಿಗೇಡಿಗಳ ಪಾಲಾಗು ತ್ತಿವೆ. ಭೂ ಒತ್ತು ವರಿ ಯಾ ಗಿದ್ದು, ಅಳಿದುಳಿದ ದೇಗುಲ ವನ್ನು ಉಳಿಸುವ ಜೀರ್ಣೋದ್ದಾರಕ್ಕೆ ಸಮಾನ ಮನಸ್ಸುಗಳು ಮುಂದಾಗಬೇಕಿದೆ.