Advertisement
ಈ ಸಾಧನೆ ಮಾಡಿದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಪರ ಪ್ರಕಾಶ್ ಪಡುಕೋಣೆ ಮತ್ತು ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದಾರೆ.ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈಗಾಗಲೇ ಬ್ಯಾಡ್ಮಿಂಟನ್ ಗುಂಪು ವಿಭಾಗದಲ್ಲಿ ಚಿನ್ನ ಗೆದ್ದಿರುವ ಶ್ರೀಕಾಂತ್ ವೈಯಕ್ತಿಕ ವಿಭಾಗದಲ್ಲಿಯೂ ಚಿನ್ನದತ್ತ ಸಾಗುತ್ತಿದ್ದಾರೆ. ಈ ನಡುವೆ ಶ್ರೀಕಾಂತ್‌ಗೆ ಮತ್ತೂಂದು ಸಿಹಿ ಸುದ್ದಿ ಸಿಕ್ಕಿದೆ. ಹೀಗಾಗಿ ಈ ದಿನ ಭಾರತೀಯ ಕ್ರೀಡೆಗೆ ಗೋಲ್ಡನ್ ಡೇ ಆಗಿದೆ.
ಶ್ರೀಕಾಂತ್‌ಗೆ 2017ನೇ ವರ್ಷ ಗೋಲ್ಡನ್ ವರ್ಷ ಅಂದರೆ ತಪ್ಪಾಗದು. ಯಾಕೆಂದರೆ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಂತಹವೊಂದು ಸಾಧನೆ ಮಾಡಿದ ಭಾರತೀಯ ಪುರುಷರಲ್ಲಿ ಮೊದಲಿಗ ಮತ್ತು ವಿಶ್ವದಲ್ಲಿ 4ನೇ ಆಟಗಾರ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2017ನೇ ವರ್ಷದಲ್ಲಿ ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯಾ ಓಪನ್, ಡೆನ್ಮಾರ್ಕ್ ಓಪನ್, ಫ್ರಾನ್ಸ್ ಓಪನ್‌ನಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ. ಸಿಗಾಪುರ್ ಓಪನ್‌ನಲ್ಲಿ ಮಾತ್ರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾಗಿದ್ದರು.
Related Articles
ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವ ನಂ.1 ಶ್ರೇಯಾಂಕಕ್ಕೇರಿದವರಲ್ಲಿ ಶ್ರೀಕಾಂತ್ ಮೂರನೇ ಭಾರತೀಯ ಆಗಿದ್ದಾರೆ. ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್‌ನಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ 1980ರಲ್ಲಿ ನಂ.1ನೇ ಶ್ರೇಯಾಂಕಕ್ಕೇರಿದ್ದರು. ಆ ನಂತರ 2015ರಲ್ಲಿ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1ನೇ ಶ್ರೇಯಾಂಕ್ಕಕೇರಿದ್ದರು.
Advertisement