Advertisement
ಝಿಪ್ಲೈನ್ಎರಡು ಬೆಟ್ಟ ಇದೆ. ಆಚೆ ಒಂದು ಬೆಟ್ಟ ಈಚೆ ಒಂದು ಬೆಟ್ಟ. ಈಗ ಒಂದು ಬೆಟ್ಟದಿಂದ ಮತ್ತೂಂದು ಬೆಟ್ಟಕ್ಕೆ ಹಗ್ಗದಲ್ಲಿ ಜಾರಿಕೊಂಡು ಹೋಗಬೇಕು. ಅದನ್ನೇ ಝಿಪ್‌ಲೈನ್ ಅಂತ ಕರೆಯುವುದು. ಅಡ್ವೆಂಚರ್ ಆಟಗಳಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದೆ. ಯಾಕೆಂದರೆ ಹಾಗೆ ಮೇಲಿಂದ ಜಾರಿಕೊಂಡು ಹೋಗುವಾಗ ಕೆಳಕ್ಕೆ ನೋಡಿದರೆ ಭಾರಿ ಭಯ ಆಗುತ್ತದೆ. ಆ ಭಯವನ್ನು ಮೀರಬೇಕು. ಕೆಲವು ಕಡೆ ಕೂತು ಹಗ್ಗದಲ್ಲಿ ಇನ್ನೊಂದು ಕಡೆ ಹೋಗುವುದಿದೆ. ಇನ್ನು ಕೆಲವು ಕಡೆ ಮಲಗಿಕೊಂಡು ಜುಂಯ್ ಅಂತದ ಹಾರಿ ಹೋಗಬಹುದು. ನಿಮಗೆ ಝಿಪ್‌ಲೈನ್ ಫೋಟೋ ನೋಡಿದರೆ ಈ ಆಟ ಹೇಗಿರುತ್ತದೆ ಅಂತ ಪೂರ್ತಿ ಗೊತ್ತಾಗುತ್ತದೆ. ಕೆಲವು ಕಡೆ ನದಿಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಝಿಪ್ ಲೈನ್ ಹಾಕಿರುತ್ತಾರೆ. ಹಕ್ಕಿ ಥರ ಹಾರುತ್ತಾ ಕೆಳಗೆ ನೋಡುವುದು ಒಂಥರಾ ಮಜಾ. ಥ್ರಿಲ್ ಬಯಸೋರಿಗಂತೂ ಇದು ಹೇಳಿ ಮಾಡಿಸಿದ ಆಟ.
ಬೆಟ್ಟ ಹತ್ತೋದು, ಬಂಡೆಗಳನ್ನು ಹತ್ತೋದು ಇವೆಲ್ಲಾ ತುಂಬಾ ಹಳೆಯ ಮತ್ತು ಅಷ್ಟೇ ರೋಚಕ ಆಟಗಳು. ಸಿನಿಮಾಗಳಲ್ಲೆಲ್ಲಾ ಹೀರೋಗಳು ಈ ಥರ ಬೆಟ್ಟ ಹತ್ತೋ ದೃಶ್ಯಗಳಿರುತ್ತವೆ. ಕಷ್ಟ ಪಟ್ಟು ಒಂದೊಂದೇ ಹೆಜ್ಜೆ ಹತ್ತಿಡುತ್ತಾ ಮೇಲೆ ಹತ್ತುತ್ತಿರುತ್ತಾರೆ. ಆಗೆಲ್ಲಾ ಕಾಲು ಜಾರುವ ಸೀನ್ ಬಂದರಂತೂ ಎದೆ ಝಲ್ ಅನ್ನುತ್ತದೆ. ನೀವೂ ಇಂಥಾ ಸಾಹಸ ಮಾಡಬಹುದು. ಇಲ್ಲಿ ಹಲವಾರು ಕಡೆ ಡೂಪ್ಲಿಕೇಟ್ ಬಂಡೆಗಳಿವೆ. ಅವುಗಳನ್ನು ಹತ್ತುವ ಸಾಹಸಕ್ಕೆ ನೀವು ಮನಸ್ಸು ಮಾಡಬಹುದು. ಕೆಲವು ಕಡೆ ಮಕ್ಕಳಿಗೆ ವಾಲ್‌ಕ್ಲೈಂಬಿಂಗ್ ಆಟಗಳಿವೆ. ಪುಟಾಣಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗೋಡೆ ಹತ್ತುತ್ತಾ ಇರುತ್ತಾರೆ. ಆಸಕ್ತಿ ಇದ್ದರೆ ನೀವೂ ಬಂಡೆ ಹತ್ತುವ ಸಾಹಸವನ್ನು ಮಾಡಬಹುದು. ಈ ಕಿಕ್ ಪಡೆಯಬಹುದು.
Related Articles
Advertisement