Advertisement

ರಣಬೀರ್ ಕಪೂರ್ ‘ಶಂಶೇರಾ’ಕಲೆಕ್ಷನ್ ಮೀರಿದ ‘ವಿಕ್ರಾಂತ್ ರೋಣ’

02:33 PM Jul 31, 2022 | Team Udayavani |

ಕಳೆದ ಗುರುವಾರ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರವು ಭರ್ಜರಿ ಆರಂಭವನ್ನು ಹೊಂದಿದ್ದು, ಎಲ್ಲೆಡೆಯಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ.

Advertisement

ರಣಬೀರ್ ಕಪೂರ್ ಅವರ ಬಾಲಿವುಡ್ ಚಿತ್ರ ‘ಶಂಶೇರಾ’ ಒಂದು ವಾರದಲ್ಲಿ ಗಳಿಸಿದ ಮೊತ್ತಕ್ಕಿಂತ ಹೆಚ್ಚಿನ ಗಳಿಕೆಯನ್ನು ‘ವಿಕ್ರಾಂತ್ ರೋಣ’ ಕೇವಲ ಮೂರು ದಿನಗಳಲ್ಲಿ ಗಳಿಸಿದೆ.

ಶಂಶೇರಾ ಚಿತ್ರವು ಮೊದಲ ವಾರದಲ್ಲಿ ಭಾರತ ಮಾರುಕಟ್ಟೆಯಲ್ಲಿ 40.45 ಕೋಟಿ ರೂ ಗಳಿಸಿದೆ. ಆದರೆ ವಿಕ್ರಾಂತ್ ರೋಣ ಚಿತ್ರವು ತನ್ನ ಮೊದಲ ದಿನವೇ 35 ಕೋಟಿ ಬಾಚಿಕೊಂಡಿದೆ.

ಇದನ್ನೂ ಓದಿ:ಸಿಮಿಲಿಪಾಲ್ ನ್ಯಾಶನಲ್ ಪಾರ್ಕ್ ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಅಪರೂಪದ ಕಪ್ಪು ಹುಲಿ|ವಿಡಿಯೋ

ವಿಕ್ರಾಂತ್ ರೋಣ ಚಿತ್ರವು 2500 ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿದ್ದರೆ, ರಣಬೀರ್ ಕಪೂರ್ ಅಭಿನಯದ ‘ಶಂಶೇರಾ’ ಚಿತ್ರವು 5,250 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಯಿತು.

Advertisement

ಕಿಚ್ಚ ಸುದೀಪ್, ಜಾಕ್ವೆಲಿನ್ ಫೆರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ವಿಕ್ರಾಂತ್ ರೋಣ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜ್ಯಾಕ್ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next