Advertisement

ಕೆಲವು ವರ್ಷಗಳ ಹಿಂದೆ “ನಾವು ಸ್ಯಾಟಲೈಟ್‌ ಸ್ಟಾರ್ಸ್‌ ಆಗಿದ್ದೆವು’: ನಟ ಸುದೀಪ್‌

09:15 PM Jul 19, 2022 | Team Udayavani |

ಚೆನ್ನೈ: “ಕೆಲವು ವರ್ಷಗಳ ಹಿಂದೆ ದಕ್ಷಿಣ ಚಿತ್ರರಂಗದ ತಾರೆಗಳು “ಸ್ಯಾಟಲೈಟ್‌ ಸ್ಟಾರ್ಸ್‌’ ಎಂದೇ ಪರಿಗಣಿಸಲ್ಪಡುತ್ತಿದ್ದರು. ಆದರೀಗ, ಉತ್ತರ ಮತ್ತು ದಕ್ಷಿಣ ಎಂಬ ಭೇದಭಾವದ ಗಡಿರೇಖೆ ಅಳಿದು ಹೋಗುತ್ತಿದೆ” ಎಂದು ಕನ್ನಡದ ಸ್ಟಾರ್‌ ನಟ ಸುದೀಪ್‌ ಹೇಳಿದ್ದಾರೆ.

Advertisement

ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, “”ದಕ್ಷಿಣ ಭಾರತದ ಸ್ಟಾರ್‌ ನಟರ ಚಿತ್ರಗಳು ಹಿಂದಿಗೆ ಡಬ್‌ ಆದರೂ ಅವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರಲಿಲ್ಲ. ಅವನ್ನು ಕೇವಲ ಟಿವಿಗಳಲ್ಲಿ ಮಾತ್ರ ಪ್ರಸಾರ ಮಾಡಲಾಗುತ್ತಿತ್ತು.

ಹಾಗಾಗಿ, ನಮ್ಮನ್ನು ಸ್ಯಾಟಲೈಟ್‌ ಸ್ಟಾರ್‌ಗಳೆಂದು ಪರಿಗಣಿಸಲಾಗುತ್ತಿತ್ತು ಎಂದು ಅವರು ವಿವರಿಸಿದ್ದಾರೆ. ಈಗ ದಕ್ಷಿಣದ ಸ್ಟಾರ್‌ಗಳ ಚಿತ್ರಗಳು ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿವೆ. ಉತ್ತರ ಮತ್ತು ದಕ್ಷಿಣ ಎಂಬ ಗಡಿರೇಖೆ ಅಳಿದು ಹೋಗುತ್ತಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next