Advertisement

‘ತೋತಾಪುರಿ’ ಟ್ರೇಲರ್‌ ಗೆ ಕಿಚ್ಚನ ಸಾಥ್‌

11:17 AM Apr 15, 2022 | Team Udayavani |

ನವರಸ ನಾಯಕ ಜಗ್ಗೇಶ್‌ ನಟಿಸಿರುವ “ತೋತಾಪುರಿ’ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್‌ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ “ತೋತಾಪುರಿ’ ಟ್ರೇಲರ್‌ ಏಪ್ರಿಲ್‌ 21ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್‌ “ತೋತಾಪುರಿ’ ಟ್ರೇಲರ್‌ ರಿಲೀಸ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್‌ ನೀಡುತ್ತಿದ್ದಾರೆ.

Advertisement

ಜಗ್ಗೇಶ್‌ ಹಾಗೂ ನಿರ್ದೇಶಕ ವಿಜಯಪ್ರಸಾದ್‌ ಕಾಂಬಿನೇಷನ್‌’ನಲ್ಲಿ ಈಗಾಗಲೇ “ನೀರ್‌ದೋಸೆ’ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿದೆ. ಇದೇ ಜೋಡಿ ಈಗ “ತೋತಾಪುರಿ’ ಮೂಲಕ ಕಮಾಲ್‌ ಮಾಡಲು ಹೊರಟಿದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು,  ”ಬಾಗ್ಲು ತೆಗಿ ಮೇರಿ ಜಾನ್‌’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ನೂರೈವತ್ತು ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.

ಈ ವಾರ “ಕೆಜಿಎಫ್-2′ ವಿಶ್ವದಾದ್ಯಂತ ತೆರೆಕಂಡಿದೆ. ಅದಾದ ಬಳಿಕ ಅತಿಹೆಚ್ಚು ಗಮನ ಸೆಳೆದಿರುವ ಸಿನಿಮಾಗಳ ಪೈಕಿ ಮೊದಲಿಗೆ “ತೋತಾಪುರಿ’ ಮೊದಲನೆಯ ಭಾಗ ರಿಲೀಸ್‌ ಆಗಲಿದೆ. ದೇಶ-ವಿದೇಶಗಳಲ್ಲೂ ಈ ಚಿತ್ರದ ಹಾಡು ಗಮನ ಸೆಳೆದಿತ್ತು. ಈಗ ಟ್ರೇಲರ್‌ ಮೂಲಕ ಜಗತ್ತಿನಾದ್ಯಂತ ಮತ್ತಷ್ಟು ಸೌಂಡು ಮಾಡಲು ಚಿತ್ರತಂಡ ಸಜ್ಜಾಗಿದೆ. ಜಗ್ಗೇಶ್‌ ಜೋಡಿಯಾಗಿ ಅದಿತಿ ಪ್ರಭುದೇವ ಇದ್ದಾರೆ.

“ಡಾಲಿ’ ಧನಂಜಯ್, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌, ಹೇಮದತ್‌ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ. ಸುರೇಶ್‌ ಅರಸ್‌ ಸಂಕಲನ, ನಿರಂಜನ್‌ ಬಾಬು ಕ್ಯಾಮೆರಾ ಕೆಲಸ ಈ ಚಿತ್ರಕ್ಕಿದೆ.

ಜಿ. ಎಸ್‌. ಕಾರ್ತಿಕ ಸುಧನ್

Advertisement
Advertisement

Udayavani is now on Telegram. Click here to join our channel and stay updated with the latest news.

Next