Advertisement

ಕಿಚ್ಚ ಸುದೀಪ್‌ ನಕಲಿ ಪೋಸ್ಟರ್‌ ವೈರಲ್‌!

01:04 PM Jan 05, 2022 | Team Udayavani |

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಸ್ಟಾರ್ ನಟರ ಬಗ್ಗೆ ಹರಿದಾಡುವ ಅಂತೆ-ಕಂತೆ ಸುದ್ದಿಗಳು ಅಭಿಮಾನಿಗಳಿಗೂ ತಪ್ಪು ಸಂದೇಶ ನೀಡಿ, ಹಾದಿ ತಪ್ಪಿಸುತ್ತವೆ. ಈಗ ನಟ ಕಿಚ್ಚ ಸುದೀಪ್‌ ಅವರ ವಿಷಯದಲ್ಲೂ ಅವರ ಅಭಿಮಾನಿಗಳಿಗೆ ಇಂಥದ್ದೇ ತಪ್ಪು ಸಂದೇಶವೊಂದು ರವಾನೆಯಾಗಿದೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ನಟ ಕಿಚ್ಚ ಸುದೀಪ್‌, “ನಮಸ್ತೆ ಗೋಷ್ಟ್’ ಎಂಬ ಹಾರರ್‌ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು “ಬಾಹುಬಲಿ’ ಖ್ಯಾತಿಯ ಪ್ರಭಾಸ್‌ ಅವರಿಗೆ “ಸಾಹೋ’ ಸಿನಿಮಾವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸುಜಿತ್‌ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಫ‌ಸ್ಟ್‌ಲುಕ್‌ ಪೋಸ್ಟರ್‌ ಎಂದು ಹೇಳಲಾದ ಪೋಸ್ಟರ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್ನು ಈ ಪೋಸ್ಟರ್‌ ಅನ್ನು ಸುದೀಪ್‌ ಅಭಿಮಾನಿಗಳು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ತಮ್ಮ ನೆಚ್ಚಿನ ನಟನ ಹೊಸ ಸಿನಿಮಾಕ್ಕೆ ಶುಭಾಶಯವನ್ನು ಕೋರುತ್ತಿದ್ದಾರೆ. ಆದರೆ ಅಸಲಿ ಸಂಗತಿ ಎಂದರೆ, “ನಮಸ್ತೆ ಗೋಷ್ಟ್’ ಎಂಬ ಹೆಸರಿನ ಯಾವುದೇ ಸಿನಿಮಾದಲ್ಲಿ ಸದ್ಯಕ್ಕೆ ಸುದೀಪ್‌ ಅಭಿನಯಿಸುತ್ತಿಲ್ಲ ಎಂಬುದು ಅವರ ಆಪ್ತ ಮೂಲಗಳ ಅಧಿಕೃತ ಮಾಹಿತಿ. ಈ ಸಿನಿಮಾದ ಬಗ್ಗೆ ಸ್ವತಃ ಸುದೀಪ್‌ ಅವರಾಗಲಿ, ಅಥವಾ ನಿರ್ದೇಶಕ ಸುಜಿತ್‌ ಅವರಾಗಲಿ, ಅಧಿಕೃತವಾಗಿ ಯಾವುದೇ ಪೋಸ್ಟರ್‌ ಆಗಲಿ ಅಥವಾ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನಾಗಲಿ ಹಂಚಿಕೊಂಡಿಲ್ಲ. ಸುಮ್ಮನೆ ಯಾರೋ ವಿನ್ಯಾಸ ಮಾಡಿರುವ “ನಮಸ್ತೆ ಗೋಷ್ಟ್’ ಹೆಸರಿನ ಇಂಥದ್ದೊಂದು ಪೋಸ್ಟರ್‌ ಕಿಚ್ಚನ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡಿರುವುದಂತೂ ಸುಳ್ಳಲ್ಲ

 

Advertisement

Udayavani is now on Telegram. Click here to join our channel and stay updated with the latest news.

Next