Advertisement

“ಶುಭಾಶಯಗಳು ಮಾಮ” : ನೂತನ ಸಿಎಂ ಬೊಮ್ಮಾಯಿ ಗೆ ಅಭಿನಯ ಚಕ್ರವರ್ತಿಯ ಹಾರೈಕೆ  

02:54 PM Jul 28, 2021 | Team Udayavani |

ಬೆಂಗಳೂರು :  ರಾಜಭವನದ ಆವರಣದಲ್ಲಿ ಇಂದು(ಬುಧವಾರ, ಜುಲೈ 28) ನಡೆದ ಪ್ರಮಾಣ ವಚನ ಸರಳ ಸಮಾರಂಭ  ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,  ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್ ಅವರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Advertisement

ಸಿನಿ ಲೋಕದ ತಾರೆ, ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಕೂಡ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ :  ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿಗೆ ಜಗದೀಶ್‌ ಶೆಟ್ಟರ್‌ ಅಭಿನಂದನೆ

ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಶುಭಾಶಯ ತಿಳಿಸಿದ ಅಭಿನಯ ಚಕ್ರವರ್ತಿ,  “ಸರಳತೆಯಿಂದಲೇ ಅವರು ಬೆಳೆದು ಇಲ್ಲಿಯ ತನಕ ಬಂದಿದ್ದಾರೆ. ನನ್ನ ವೃತ್ತಿ ಜೀವನದ ಆರಂಭದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದರು. ನಿಮಗೆ ಶುಭಾಶಯಗಳು  ಮಾಮ” ಎಂದು ಅವರು ಬರೆದುಕೊಂಡಿದ್ದಾರೆ.


ಇನ್ನು, ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನೊಳಗೊಂಡು ಪ್ರಮುಖರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಕೋವಿಡ್ ಹೆಸರಿನಲ್ಲಿ ಶಿವರಾಜ್ ನೇತೃತ್ವದ ಸರ್ಕಾರದಿಂದ ಬ್ರಹ್ಮಾಂಡ ಭ್ರಷ್ಟಾಚಾರ : ಕಾಂಗ್ರೆಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next