ಪ್ರತಿಪಕ್ಷಗಳ ಒಕ್ಕೂಟ ಸದ್ಯದಲ್ಲೇ ರೂಪುಗೊಳ್ಳುತ್ತದೆ : ದೀದಿ
ಐದು ದಿನ ಗಳ ರಾಷ್ಟ್ರ ರಾಜಧಾನಿಯ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಿನ್ನೆ( ಜುಲೈ 27) ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಕಾಂಗ್ರೆಸ್ ನ ಪ್ರಮುಖ ನಾಯಕರನ್ನು ಭೇಟಿಯಾದ ಬಳಿಕ ಇಂದು (ಬುಧವಾರ, ಜುಲೈ 28) ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ಸದ್ಯದಲ್ಲೇ ರೂಪುಗೊಳ್ಳುತ್ತದೆ ದೆಶವೇ, ದೇಶವೇ ನೇತೃತ್ವ ವಹಿಸುತ್ತದೆ, ನಾವೆಲ್ಲಾ ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.
ಮೇಘಸ್ಫೋಟ : ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ : ಮೋದಿ
ಭಾರಿ ಮೇಘಸ್ಫೋಟ ಸಂಭವಿಸಿದ ನಂತರ ಕಾರ್ಗಿಲ್ ನ ಕಿಶ್ಟ್ ವಾರ್ ನಲ್ಲಿನ ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಧ್ಯತೆಗಳುಳ್ಳ ಎಲ್ಲಾ ನೆರವುಗಳನ್ನು ಪೀಡಿತ ಪ್ರದೇಶಗಳಿಗೆ ನೀಡಲಾಗುತ್ತಿದೆ. ಎಲ್ಲರ ಹಿತ ಕಾಯುವುದಕ್ಕೆ ಸರ್ಕಾರ ಸಂಪೂರ್ಣ ಪ್ರಯತ್ನ ಮಾಡುತ್ತದೆ ಎಂದು ಹೇಳಿದ್ದಾರೆ.
ಐ ಸಿ ಎಮ್ ಆರ್ ನಿಂದ ಮಾನ್ಯತೆ ಹೊಂದಿರದ ಕೋವಿಡ್ ಕಿಟ್ ಗಳನ್ನು ಬಳಸಲಾಗಿದೆ : ಕಾಂಗ್ರೆಸ್ ಆರೋಪ
ಐ ಸಿ ಎಮ್ ಆರ್ ನಿಂದ ಮಾನ್ಯತೆ ಹೊಂದಿರದ ಕೋವಿಡ್ ಕಿಟ್ ಗಳನ್ನು ಸೋಂಕು ಪರೀಕ್ಷೆಯಲ್ಲಿ ಬಳಸಲಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಹರಿಹಾಯ್ದಿದೆ. ಮಾನ್ಯತೆ ಇಲ್ಲದ ಕೋವಿಡ್ ಕಿಟ್ ಗಳನ್ನು ಕೋರಿಯಾದಿಂದ ಾಮದು ಮಾಡಿಕೊಂಡು ಕೋವಿಡ್ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ. ಇದು ಕೋವಿಡ್ ಹೆಸರಿನಲ್ಲಿ ಮಾಡಿದ ಬ್ರಹ್ಮಾಂಡ ಭ್ರಷ್ಟಾವಚಾರ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಆರೋಪಿಸಿದೆ.
ಬಸವರಾಜ ಬೊಮ್ಮಾಯಿ ಆದ ನಾನು…
ರಾಜಭವನದ ಆವರಣದಲ್ಲಿ ಇಂದು ನಡೆದ ಪ್ರಮಾಣ ವಚನ ಸರಳ ಸಮಾರಂಭ ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುರುಗೇಶ್ ನಿರಾಣಿ, ಅವರನ್ನೊಳಗೊಂಡು, ಪಕ್ಷದ ಎಲ್ಲಾ ಪ್ರಮುಖ ನಾಯಕರುಗಳು ಹಾಗೂ ಬೊಮ್ಮಾಯಿ ಕುಟುಂಬಸ್ಥರು ಭಾಗಿಯಾಗಿದ್ದರು.
ಶುಭಾಶಯಗಳು ಮಾಮ : ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ
ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸಿನಿ ಲೋಕದ ತಾರೆ, ಚಂದನವನದ ಅಭಿನಯ ಚಕ್ರವರ್ತಿ ಕಚ್ಚ ಸುದೀಪ್ ಕೂಡ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳು ಮಾಮ ಎಂದು ಹಾರೈಸಿದ್ದಾರೆ.
ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳ : ಮತ್ತೆ ಆತಂಕ ಸೃಷ್ಟಿ
ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 43,654 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 640 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಜುಲೈ28) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. ಕಳೆದ ಮೂರು ವಾರಗಳ ಬಳಿಕ ಕೋವಿಡ್ ಪ್ರಕರಣದಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 41,678 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 3,06,63,147 ಮಂದಿ ಗುಣಮುಖರಾಗಿದ್ದಾರೆ ಎಂದು ಅಂಕಿಅಂಶದಲ್ಲಿ ವಿವರಿಸಲಾಗಿದೆ.
ಬೊಮ್ಮಾಯಿ ಗೆ ಮೋದಿ ಶುಭಾಶಯ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಅಭಿನಂದನೆ ತಿಳಿಸಿರುವ ಮೋದಿ, ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರವಾಣ ವಚನ ಸ್ವೀಕರಿಸಿದ್ದಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ವಿನೇಶ್ ಫೊಗಾಟ್ ವಿಮಾನ ಮಿಸ್
ಒಲಿಂಪಿಕ್ಸ್‌ನಲ್ಲಿ ಭಾರತದ ಬಹುದೊಡ್ಡ ಪದಕ ಭರವಸೆಯಾಗಿರುವ, ಕುಸ್ತಿಪಟು ವಿನೇಶ್ ಫೊಗಾಟ್ ಮಂಗಳವಾರ ಫ್ರ್ಯಾಂಕ್‌ಫರ್ಟ್‌ನಲ್ಲಿ ವಿಮಾನ ಮಿಸ್ ಮಾಡಿಕೊಂಡ ಘಟನೆ ಸಂಭವಿಸಿದೆ. ಅವರು ಫ್ರ್ಯಾಂಕ್‌ಫರ್ಟ್‌ನಿಂದ ವಿಮಾನವೇರಿ ಮಂಗಳವಾರ ರಾತ್ರಿ ಟೋಕಿಯೊ ತಲುಪಬೇಕಿತ್ತು. ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿದ್ದ ವಿನೇಶ್, ಇಯು ವೀಸಾದಡಿ (ಯುರೋಪಿಯನ್ ಯೂನಿಯನ್) ಒಂದು ದಿನ ಹೆಚ್ಚು ಉಳಿದದ್ದೇ ಈ ಎಡವಟ್ಟಿಗೆ ಕಾರಣ. ಎಂದು ಐಒಎ ಮೂಲಗಳು ತಿಳಿಸಿವೆ.