16 ಡಿಸೆಂಬರ್- 2021 ರಂದು ತನ್ನ ವಿಶ್ವ ಪ್ರೀಮಿಯರ್‌ಗಾಗಿ ಕಿಯಾ ಕಂಪನಿಯ ಬಹು ನಿರೀಕ್ಷಿತ ಎಂಪಿವಿ ಕಿಯಾ ಕೆರೆನ್ಸ್ ಕಾರಿನ (MPV Kia Carens) ನ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ.
ಕೀಯಾ ಪ್ರಕಾರ, ಕ್ಯಾರೆನ್ಸ್ ಪ್ರೀಮಿಯಂ ಒಳ ವಿನ್ಯಾಸಗಳು ವಿಶೇಷವಾಗಿರಲಿದ್ದು, ಸ್ಮಾರ್ಟ್ ಸಂಪರ್ಕ ವೈಶಿಷ್ಟ್ಯತೆಗಳು, ಎಸ್ ಯುವಿ ಮಾದರಿಯ ಆಕರ್ಷಕ ಹೊರ ಭಾಗಗಳು ಮತ್ತು ವಿಶಾಲ ಸ್ಥಳಾವಕಾಶಗಳನ್ನು ಹೊಂದಿರಲಿದೆ.
ದಕ್ಷಿಣ ಕೊರಿಯಾ ಕಾರು ಉತ್ಪಾದನಾ ಕಂಪನಿಯಾಗಿರುವ ಕಿಯಾ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಈ ಕಂಪನಿಯು ಶೀಘ್ರದಲ್ಲೇ ಭಾರತದಲ್ಲೂ ಹೊಸ ವಿನ್ಯಾಸದ ಎಂಪಿವಿ ಆವೃತ್ತಿಯನ್ನು ಪರಿಚಯಿಸಲು ಸಿದ್ದವಾಗಿದೆ. ಇದು ದಕ್ಷಿಣ ಕೊರಿಯಾದ ಕಾರು ತಯಾರಕರಿಂದ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ನಾಲ್ಕನೇ ಉತ್ಪನ್ನವಾಗಿದೆ.
ಆದರೆ ಎಂಪಿವಿ ಮಾದರಿಗಳಲ್ಲಿ ಕೆಲವು ಮಾದರಿಗಳಿರುವುದರಿಂದ ಪ್ರತಿಸ್ಪರ್ಧಿ ಕಡಿಮೆಯಿದ್ದು, ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ. ಇದೇ ಕಾರಣಕ್ಕೆ ಮಧ್ಯಮ ಗಾತ್ರದ ಎಂಪಿವಿ ವಿಭಾಗಕ್ಕೆ ಪ್ರವೇಶಿಸಲು ಸಿದ್ದವಾಗಿರುವ ಕಿಯಾ ಕಂಪನಿಯು ಹೊಸ ಮಾದರಿಯ ಎಂಪಿವಿ ಮಾದರಿಯೊಂದನ್ನು ಅಭಿವೃದ್ದಿಗೊಳಿಸಿದ್ದು, ಡಿಸೆಂಬರ್ 16ರಂದು ಅನಾವರಣಗೊಳ್ಳಲಿರುವ ಹೊಸ ಕಾರು 2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:- ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !
ಕಿಯಾ ಹೊಸ ಕಾರು ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸಲಿದ್ದು, ಕಾರು ಅನಾವರಣಕ್ಕೂ ಮುನ್ನ ಕಿಯಾ ಕಂಪನಿಯು ಈಗಾಗಲೇ ಹೊಸ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದೆ.
“ಕಿಯಾ ಕ್ಯಾರೆನ್ಸ್ ನಮ್ಮ ಇತ್ತೀಚಿನ ವಿನ್ಯಾಸದ ‘ಆಪೊಸಿಟ್ಸ್ ಯುನೈಟೆಡ್'(Opposites United) ಅನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತದೆ ಮತ್ತು ಇದು ಅತ್ಯಾಧುನಿಕ ವ್ಯಕ್ತಿತ್ವ ಮತ್ತು ಶೈಲಿಯೊಂದಿಗೆ ಅನನ್ಯ ವೈಶಿಷ್ಟ್ಯದೊಂದಿಗೆ ಯಶಸ್ವಿಯಾಗಿ ಸಂಯೋಜನೆಗೊಂಡಿದೆ ಎಂದು ಕಿಯಾ ವಿನ್ಯಾಸ ಕೇಂದ್ರದ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಕರೀಮ್ ಹಬೀಬ್ ಹೇಳಿದರು.