Advertisement

ಬರ ಪರಿಶೀಲನೆ ಸಭೆಯಲ್ಲಿ ಖೂಬಾ-ಖಾಶೆಂಪೂರ ಕಿತ್ತಾಟ

06:22 AM Jun 04, 2019 | Lakshmi GovindaRaj |

ಬೀದರ: ಜಿಪಂ ಸಭಾಂಗಣದಲ್ಲಿ ನಡೆದ ಬರ ಪರಿಶೀಲನೆ ಸಭೆಯಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂ ಧಿಸಿದಂತೆ ಚರ್ಚೆ ನಡೆಯುತ್ತಿರುವ ಮಧ್ಯೆ ಮಾತನಾಡಿದ ಸಂಸದ ಭವಂತ ಖೂಬಾ ಆತುರದಲ್ಲಿ “ನಾಲಾಯಕ್‌ ಸರ್ಕಾರ’ ಎಂಬ ಪದ ಬಳಸಿದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅಲ್ಲದೆ, ಕೆಲ ಹೊತ್ತು ವಾಗ್ವಾದ ಕೂಡ ನಡೆಯಿತು. ಸಭೆಯಲ್ಲಿ ಬೀದರ ನಗರದ ವಿವಿಧೆಡೆ ಟ್ಯಾಂಕರ್‌ ನೀರು ಪೂರೈಕೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದ ಖೂಬಾ, ನಗರದಲ್ಲಿ ಸ್ಥಳೀಯ ಶಾಸಕ ಹಾಗೂ ಸಚಿವರಾದ ರಹೀಂ ಖಾನ್‌ ಉಚಿತ ನೀರು ಎಂದು ಟ್ಯಾಂಕರ್‌ ಮೇಲೆ ಬರೆಸಿ ವಿವಿಧ ವಾರ್ಡ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ.

ಹಾಗಾದರೆ ಸರ್ಕಾರ ಏನು ಮಾಡುತ್ತಿದೆ. ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ “ನಾಲಾಯಕ್‌ ಸರ್ಕಾರ’ ಎಂಬ ಪದ ಬಳಸಿದರು. ಇದರಿಂದ ಕ್ರುದ್ಧರಾದ ಬಂಡೆಪ್ಪ ಖಾಶೆಂಪೂರ್‌ ಮಧ್ಯೆ ಪ್ರವೇಶಿಸಿ, ಸಂಸದರು ಮಾತಾಡುವಾಗ ಪದಗಳ ಮೇಲೆ ಹಿಡಿತ ಸಾಧಿಸಬೇಕು.

ರಾಜ್ಯದಲ್ಲಿ ನಾಲಾಯಕ್‌ ಸರ್ಕಾರ ಇದೆ ಎಂದು ಹೇಗೆ ಆರೋಪಿಸುತ್ತಿದ್ದೀರಿ ಎಂದು ಕಿಡಿ ಕಾರಿದರು. ನಂತರ ಸಂಸದರು ಮಾತನಾಡಿ, ನಾನು ಸರ್ಕಾರಕ್ಕೆ ನಾಲಾಯಕ್‌ ಅಂದಿಲ್ಲ. ಬದಲಿಗೆ ಅಧಿ ಕಾರಿಗಳಿಗೆ ಆ ಪದ ಬಳಸಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next