Advertisement

ಖೇರ್‌ ವರ್ಸಸ್‌ ಬನ್ಸಲ್

04:52 AM May 14, 2019 | mahesh |

ಚಂಡೀಗಢದಲ್ಲಿ ಈ ಬಾರಿಯೂ ಬಿಜೆಪಿ ನಾಯಕಿ, ಹಿರಿಯ ಚಿತ್ರನಟಿ ಕಿರಣ್‌ ಖೇರ್‌ ಗೆಲ್ಲುತ್ತಾರಾ ಅಥವಾ ಈ ಕ್ಷೇತ್ರದ ಹಳೆಯ ಹುಲಿ ಕಾಂಗ್ರೆಸ್‌ನ ಪವನ್‌ ಕುಮಾರ್‌ ಬನ್ಸಲ್ ಅವರು ಖೇರ್‌ ಉತ್ಸಾಹಕ್ಕೆ ತಣ್ಣೀರೆರಚುತ್ತಾರಾ? ಮೇ 19ರಂದು 7ನೇ ಹಂತದ ಮತದಾನ ನಡೆಯಲಿದ್ದು, ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕೆ ರಾಜಕೀಯ ಪಂಡಿತರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

Advertisement

ಆದರೆ ಎಲ್ಲರೂ ಒಕ್ಕೊರಲಿನಿಂದ ಹೇಳುವ ಮಾತೆಂದರೆ, ಈ ಬಾರಿ ಪ್ರಬಲ ಟಕ್ಕರ್‌ ಅಂತೂ ಇರಲಿದೆ ಎನ್ನುವುದು. 2014ರಲ್ಲಿ ಮೋದಿ ಅಲೆಯ ಸಹಾಯದಿಂದ ಕಿರಣ್‌ ಖೇರ್‌ ಬನ್ಸಲ್ ಅವ ರನ್ನು 69,642 ಮತಗಳ ಅಂತರದಿಂದ ಸೋಲಿಸಿದ್ದರು. ಅಂದು ಕಿರಣ್‌ ಖೇರ್‌ 1,91,362 ಮತಗಳನ್ನು ಪಡೆದರೆ, ಬನ್ಸಲ್ 1,21,720 ಮತಗಳನ್ನು ಗಳಿಸಿದ್ದರು. ಆಮ್‌ ಆಮ್‌ ಆದ್ಮಿ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ನಟಿ ಗುಲ್ ಪನಾಗ್‌ 1,08,679 ಮತ ಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಸೀಮಿತ ರಾದರು. ಈ ಬಾರಿ ಎಎಪಿಯ ಹರ್‌ವೋಹನ್‌ ಧವನ್‌ರನ್ನು ಕಣಕ್ಕೆ ಇಳಿ ಞ ಸಿದೆ.

ಇನ್ನೊಂದು ವಾರದೊಳಗೇ ಮತದಾನ ನಡೆಯಲಿರುವುದ ರಿಂದ, ಈ ಕ್ಷೇತ್ರಕ್ಕೆ ಬಿಜೆಪಿ, ಕಾಂಗ್ರೆಸ್‌ ಮತ್ತು ಆಪ್‌ ನಾಯ ಕರು ಸಮರೋಪಾದಿಯಲ್ಲಿ ಭೇಟಿ ಕೊಡಲಾರಂಭಿಸಿದ್ದಾರೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ, ಕಿರಣ್‌ ಖೇರ್‌ ಅವರ ಪತಿ-ಹಿರಿಯ ನಟ ಅನುಪಮ್‌ ಖೇರ್‌ ಕೂಡ ಪ್ರಚಾರ ಕಾರ್ಯ ಕೈಗೊಂಡಿ ದ್ದಾರೆ.

ಅತ್ತ ಕಾಂಗ್ರೆಸ್‌ ಕೂಡ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ನವಜೋತ್‌ ಸಿಂಗ್‌ ಸಿಧು, ಮಾಜಿ ಸಚಿವ ಆನಂದ್‌ ಶರ್ಮಾ ಪವನ್‌ ಬನ್ಸಲ್ ಅವರ ಪರ ಪ್ರಚಾರ ಮಾಡಿದ್ದಾರೆ.

2014ಕ್ಕೂ ಮುನ್ನ ಪವನ್‌ ಕುಮಾರ್‌ ಬನ್ಸಲ್ ಈ ಕ್ಷೇತ್ರದಲ್ಲಿ 15 ವರ್ಷಗಳ ವರೆಗೆ ಸಂಸದರಾಗಿದ್ದವರು. 1999ರಲ್ಲಿ ಅವರು ಬಿಜೆ ಪಿಯ ಕೃಷ್ಣಲಾಲ್ ಶರ್ಮಾರನ್ನು, 2004 ಮತ್ತು 2009ರಲ್ಲಿ ಬಿಜೆಪಿ ಅಭ್ಯರ್ಥಿ ಸತ್ಯಪಾಲ್ ಜೈನ್‌ರನ್ನು ಸೋಲಿಸಿದ್ದರು. 2014ರಲ್ಲಿ ಕಿರಣ್‌ ಖೇರ್‌ ಅವರ ಲೆಕ್ಕಾಚಾರವನ್ನೆಲ್ಲ ತಲೆಕೆಳಗೆ ಮಾಡಿ ಈ ಕ್ಷೇತ್ರ ವನ್ನು ವಶಪಡಿಸಿಕೊಂಡರು.

Advertisement

5 ವರ್ಷಗಳಲ್ಲಿ ಬಿಜೆಪಿ ನಾಯಕಿ ಕಿರಣ್‌ ಖೇರ್‌ ಈ ಕ್ಷೇತ್ರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ, ಆಗ ಅವರು ಮೋದಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದರು, ಈಗಲೂ ಅವರು ಮತ್ತೆ ಅವರು ಮೋದಿ ಫ್ಯಾಕ್ಟರ್‌ ಮೇಲೆಯೇ ಅವಲಂಬಿತರಾ ಗಿದ್ದಾರೆ ಎಂದು ಬನ್ಸಲ್ ಆರೋಪಿಸುತ್ತಾರೆ. ”ಇಂದು ಟ್ರಾಫಿಕ್‌ ಎನ್ನುವುದು ಚಂಡೀಗಢದ ಅತಿ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ದಿನವೂ 1.70 ಲಕ್ಷ ವಾಹನಗಳು ನಗರ ವನ್ನು ಪ್ರವೇಶಿಸುತ್ತವೆ. ಇದರಿಂದಾಗಿ ವಿಪರೀತ ವಾಹನದಟ್ಟ ಣೆಯಾಗುತ್ತಿದೆ. ಮೆಟ್ರೋ ರೈಲು ಯೋಜನೆಯು ಇದಕ್ಕೆ ಏಕೈಕ ಪರಿಹಾರವಾಗಿತ್ತು. ನನ್ನ ಸಮ ಯದಲ್ಲಿ ಮೆಟ್ರೋ ರೈಲು ತರುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕಿರಣ್‌ ಖೇರ್‌ ಈ ಯೋಜನೆಯನ್ನು ನಿಲ್ಲಿಸಿಬಿಟ್ಟರು” ಎನ್ನುತ್ತಾರೆ ಬನ್ಸಲ್. ಈ ಆರೋಪಗಳಿಗೆಲ್ಲ ತೀಕ್ಷ ¡ವಾಗಿ ಯೇ ಪ್ರತಿಕ್ರಿ ಯಿಸುತ್ತಾರೆ ಕಿರಣ್‌ ಖೇರ್‌. ಇನ್ನು ಮೋದಿ ಹೆಸರಲ್ಲಿ ಮತ ಕೇಳುವು ದರಲ್ಲಿ ತಪ್ಪೇನಿದೆ ಎನ್ನುವ ಖೇರ್‌ ಅವರು ”ಮೋದಿಯವರನ್ನು ಇಡೀ ಪ್ರಪಂಚ ವೇ ಗೌರವಿಸುತ್ತದೆ. ತಮ್ಮ ಉತ್ತಮ ಕಾರ್ಯ ಗಳಿಂದ ದೇಶವಾಸಿಗಳಿಗೆ ಹೆಮ್ಮೆ ತಂದಿದ್ದಾರೆ ಮೋದಿ. ಪವನ್‌ ಕ‌ುಮಾರ್‌ ಬನ್ಸಲ್ ತಮ್ಮ ನಾಯಕ ರಾಹುಲ್ ಗಾಂಧಿಯ ಬಗ್ಗೆ ಈ ಮಾತನ್ನು ಹೇಳಬಲ್ಲರಾ…ರಾಹುಲ್ ಗಾಂಧಿ ಯವರ ಹೆಸರು ಹೇಳಿದರೆ ಜನ ಅವರಿಗೆ ಮತ ನೀಡುತ್ತಾರಾ?” ಎಂದು ಪ್ರಶ್ನಿಸುತ್ತಾರೆ.

ಈ ಬಾರಿ ಕಣದಲ್ಲಿ
ಕಿರಣ್‌ ಖೇರ್‌(ಬಿಜೆಪಿ)
ಪವನ್‌ ಕುಮಾರ್‌ ಬನ್ಸಲ್(ಕಾಂಗ್ರೆಸ್‌)

2014ರ ಫ‌ಲಿತಾಂಶ
ಕಿರಣ್‌ ಖೇರ್‌ (ಬಿಜೆಪಿ) 1,91,362
ಪವನ್‌ ಕುಮಾರ್‌ ಬನ್ಸಲ್ (ಕಾಂಗ್ರೆಸ್‌) 1,21,720

Advertisement

Udayavani is now on Telegram. Click here to join our channel and stay updated with the latest news.

Next