ಹೊಸದಿಲ್ಲಿ: “ಖೇಲೋ ಇಂಡಿಯಾ ಯುವ ಕ್ರೀಡಾಕೂಟ’ ಸೋಮವಾರ ಶುರುವಾಗಿದೆ. ಇದಕ್ಕೂ ಮುನ್ನ ಒಂದಿಷ್ಟು ಅವ್ಯವಸ್ಥೆಗಳೂ ಕಂಡುಬಂದಿವೆ. ಮಧ್ಯಪ್ರದೇಶದ 9 ನಗರಗಳಲ್ಲಿ 27 ವಿವಿಧ ಕ್ರೀಡೆಗಳನ್ನು ಹಂಚಿಕೊಂಡು ನಡೆಸಲಾಗುತ್ತಿದೆ. ಇಂದೋರ್‌ನಲ್ಲಿ ಅಂಡರ್-19 ಟೇಬಲ್ ಟೆನಿಸ್ ಕೂಟ ಆರಂಭವಾಗಿದೆ. ಆದರೆ ಹೊಟೇಲ್‌ನಲ್ಲಿ ಮೂಲಭೂತ ಅವ್ಯವಸ್ಥೆ ಕಾಡಿದೆ.
“ಬ್ರ್ಯಾಂಡ್ ನ್ಯೂ’ ಎಂದು ಕರೆಸಿಕೊಂಡಿದ್ದ ಹೊಟೇಲ್ ಒಂದರಲ್ಲಿ ಟಿಟಿ ಅಧಿಕಾರಿಗಳನ್ನು ಉಳಿಸಲಾಗಿತ್ತು. ಅಲ್ಲಿ ಯಾವ ಮೂಲಭೂತ ಅವಶ್ಯಕತೆಗಳೂ ಇರಲಿಲ್ಲ. ಇನ್ನೂ ವಿಚಿತ್ರವೆಂದರೆ, ಟಿಟಿ ಅಧಿಕಾರಿಗಳು ತೆರಳಿದ್ದ ದಿನವೇ (ಜ. 28)ಹೊಟೇಲನ್ನು ಉದ್ಘಾಟಿಸಿದ್ದು!
ಹೀಗಾಗಿ ಕೆಲವು ಕೊಠಡಿಗಳಲ್ಲಿ ಕೂರಲು ಕುರ್ಚಿ, ಟೇಬಲ್, ಕನ್ನಡಿ, ಇಂಟರ್‌ನೆಟ್ ಸೌಲಭ್ಯ ಕೂಡ ಇರಲಿಲ್ಲ. ಹೊಟೇಲ್ ಸಿಬಂದಿ ಇನ್ನೂ ಕೊಠಡಿಗಳನ್ನು ಸಿದ್ಧಪಡಿಸುವ ಕೆಲಸದಲ್ಲೇ ಇದ್ದರು ಎಂದು ಪಿಟಿಐ ವರದಿ ಮಾಡಿದೆ.
ಬಹುತೇಕ 50 ದಾಟಿದ್ದ ಅಧಿಕಾರಿಗಳೇ ಇದ್ದಿದ್ದರಿಂದ ಅವರಿಗೆಲ್ಲ ಬಹಳ ಒದ್ದಾಟವಾಗಿದೆ.