Advertisement

ಖೇಲೋ ಇಂಡಿಯಾ ಕ್ರೀಡಾಕೂಟ: ಆತಿಥೇಯ ಜೈನ್‌ ವಿವಿಗೆ ಸಮಗ್ರ ಪ್ರಶಸ್ತಿ

10:57 PM May 03, 2022 | Team Udayavani |

ಬೆಂಗಳೂರು: ಸತತ 10 ದಿನಗಳ ಕಾಲ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ -21 ಮಂಗಳವಾರ ಮುಕ್ತಾಯವಾ ಯಿತು. ಸಮಾರೋಪದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಪಾಲ್ಗೊಂಡು ಕಳೆ ಹೆಚ್ಚಿಸಿದರು. ಅಂತಿಮ ದಿನ ಕಬಡ್ಡಿ ಮತ್ತು ಫುಟ್ ಬಾಲ್‌ ಪಂದ್ಯಗಳ ಫೈನಲ್‌ ಸ್ಪರ್ಧೆಗಳು ನಡೆದವು.

Advertisement

ನಿರೀಕ್ಷೆಯಂತೆಯೇ ಕೂಟದ ಆತಿಥ್ಯ ವಹಿಸಿದ್ದ ಜೈನ್‌ ವಿಶ್ವವಿದ್ಯಾಲಯ ಗರಿಷ್ಠ 20 ಚಿನ್ನಗಳೊಂದಿಗೆ ಸಮಗ್ರ ಚಾಂಪಿಯನ್‌ ಆಯಿತು. 17 ಚಿನ್ನ ಗೆದ್ದ ಲವ್ಲಿ ಪ್ರೊಫೆಶನಲ್‌ ವಿವಿ ದ್ವಿತೀಯ ಸ್ಥಾನ ಪಡೆಯಿತು. ಆ್ಯತ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿ ಈ ಬಾರಿಯೂ ಗರಿಷ್ಠ ಪದಕ ಗಳಿಸಿತು.

ಕೋಟ ವಿವಿ ಕಬಡ್ಡಿ ಚಿನ್ನ
ಪುರುಷರ ಕಬಡ್ಡಿ ಫೈನಲ್‌ ಪಂದ್ಯದಲ್ಲಿ ಭಿವಾನಿಯ ಚೌಧರಿ ಬನ್ಸಿಲಾಲ್‌ ವಿವಿ ಯನ್ನು ಕೋಟ ವಿಶ್ವವಿದ್ಯಾಲಯ 37-52 ಅಂಕಗಳಿಂದ ಮಣಿಸಿ ಚಿನ್ನ ಜಯಿಸಿತು. ಪಂದ್ಯದ ಆರಂಭದಲ್ಲಿ ಉತ್ತಮವಾಗಿಯೇ ಆಡಿದ್ದ ಬನ್ಸಿಲಾಲ್‌ ವಿವಿ ನಂತರ ಹಿಡಿತ ಕಳೆದುಕೊಂಡು ಬೆಳ್ಳಿಗೆ ಸಮಾಧಾನಗೊಂಡಿತು. ಕಂಚಿನ ಪದಕವನ್ನು ಸಿ.ವಿ.ರಾಮನ್‌ ವಿವಿ, ಪಂಜಾಬ್‌ ವಿವಿಗಳು ಪಡೆದವು.

ವನಿತೆಯರ ಫೈನಲ್‌ ಪಂದ್ಯದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯವು 46-19 ಅಂಕಗಳ ಅಂತರದಲ್ಲಿ ಮಹರ್ಷಿ ದಯಾನಂದ ವಿವಿಯನ್ನು ಮಣಿಸಿ ಚಿನ್ನ ಪಡೆಯಿತು. ದಯಾನಂದ ವಿವಿ ಬೆಳ್ಳಿಗೆ ಸಮಾಧಾನಗೊಂಡರೆ, ಸಾವಿತ್ರಿಬಾಯಿ ಫುಲೆ ಮತ್ತು ಹಿಮಾಚಲಪ್ರದೇಶ ವಿವಿಗಳು ಕಂಚಿನ ಪದಕ ಗೆದ್ದವು.

ಹಾಕಿ ತಂಡಗಳಿಗೆ ಸನ್ಮಾನ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ಪುರುಷರ ಹಾಕಿ ತಂಡವನ್ನು ಸನ್ಮಾನಿಸಲಾಯಿತು. ನಾಯಕ ಮನ್‌ಪ್ರೀತ್‌ ಸಿಂಗ್‌ ತಮ್ಮ ತಂಡದೊಂದಿಗೆ ಹಾಜರಾಗಿದ್ದರು. ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಭಾರತ ಮಹಿಳಾ ಹಾಕಿ ತಂಡವನ್ನೂ ಅಮಿತ್‌ ಶಾ ಅವರು ಸಮ್ಮಾನಿಸಿದರು. ಇಲ್ಲಿ ತಂಡದೊಂದಿಗೆ ನಾಯಕಿ ರಾಣಿ ರಾಮ್‌ಪಾಲ್‌ ಹಾಜರಿದ್ದರು.

Advertisement

ರಾಷ್ಟ್ರೀಯ ದಾಖಲೆಗಳು
ಖೇಲೋ ಇಂಡಿಯಾ ಯೂನಿವ ರ್ಸಿಟಿ ಗೇಮ್ಸ್‌ನ 2ನೇ ಆವೃತ್ತಿಯಲ್ಲಿ 2 ನೂತನ ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡವು. ಈ ಎರಡನ್ನೂ ಕರ್ನಾಟಕದ ವಿವಿಗಳ ಕ್ರೀಡಾಪಟುಗಳೇ ನಿರ್ಮಿಸಿದರು ಎಂಬುದು ಗಮನಾರ್ಹ. ಮಂಗಳೂರು ವಿಶ್ವವಿದ್ಯಾಲಯದ ವೇಟ್‌ಲಿಫ್ಟರ್‌ ಆ್ಯನ್‌ ಮರಿಯಾ +87 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಅವರು ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 129 ಕೆಜಿ ತೂಕ ಎತ್ತಿದರು. ಜೈನ್‌ ವಿಶ್ವವಿದ್ಯಾಲಯದ ಶಿವ ಶ್ರೀಧರ್‌ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 2 ನಿಮಿಷ, 05.43 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next