ಪುತ್ತೂರು: ಸಂಯುಕ್ತ ಖಾಝಿ ನೇಮಕ ಸಂಬಂಧಿಸಿ ನಡೆದ ಸಭೆಯಲ್ಲಿ ಚರ್ಚೆ ತಾರಕಕ್ಕೇರಿ ಹೊ-ಕೈ ನೂಕುನುಗ್ಗಲು ನಡೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರು ತಾಲೂಕಿನ ಸಂಯುಕ್ತ ಖಾಝಿ ನೇಮಕದ ಕುರಿತು ಚರ್ಚಿಸುವ ಉದ್ದೇಶದಿಂದ ಅ.15ರಂದು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಸಭೆ ನಡೆದಿತ್ತು.
ಸಮಸ್ತದ ಅಧ್ಯಕ್ಷ ಅಸಯ್ಯದ್ ಸಯ್ಯಿದುನಾ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ತಂಙಳ್ ಅವರನ್ನು ಪುತ್ತೂರು ತಾಲೂಕು ಸಂಯುಕ್ತ ಖಾಝಿಯಾಗಿ ಅ.29 ರಂದು ನೇಮಕಗೊಳಿಸುವ ಕುರಿತು ಈಗಾಗಲೇ ಹಲವು ಜಮಾಅತ್‌ಗಳು ತೀರ್ಮಾನಿಸಿರುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಾಲ್ಮರ ಶರೀಫ್ ಅವರು ಆಕ್ಷೇಪಿಸಿ ಅಧ್ಯಕ್ಷರನ್ನು ತರಾಟೆಗೆತ್ತಿಕೊಳ್ಳಲು ಮುಂದಾದರು.
ಈ ಸಂದರ್ಭ ಅಲ್ಲಿದ್ದ ಜಮಾಅತ್‌ನ ಕೆಲವರು ಆಕ್ಷೇಪಿಸಿ ಶರೀಫ್ ಅವರನ್ನು ತರಾಟೆಗೆತ್ತಿಕೊಂಡಾಗ ಚರ್ಚೆ, ಚಕಮಕಿ ನೂಕುನುಗ್ಗಲು ನಡೆಯಿತು. ಸೇರಿದ್ದ ಪ್ರಮುಖರು ರಾಜಿ ಮಾತುಕತೆ ನಡೆಸಿ ಬಳಿಕ ಪ್ರಕರಣವನ್ನು ಇತ್ಯರ್ಥಗೊಳಿಸಿದರು. ಆದರೆ ಘಟನೆಯ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.