Advertisement

ಕಣಗಾಲರೇ ಸ್ಫೂರ್ತಿ!

09:51 AM Dec 05, 2019 | Naveen |

ಈವತ್ತಿಗೆ ಎಲ್ಲ ಭಾಷೆಗಳ ಚಿತ್ರಗಳೂ ಕೂಡಾ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಿರುಗುತ್ತಿವೆ. ಏನನ್ನೇ ಕಲ್ಪಿಸಿಕೊಂಡರೂ ಅದಕ್ಕೆ ವಾಸ್ತವಿಕ ರೂಪ ಕೊಡುವಷ್ಟು ಪರಿಣಾಮಕಾರಿಯಾಗಿ ತಂತ್ರಜ್ಞಾನಗಳ ಭರಾಟೆ ಚಾಲ್ತಿಯಲ್ಲಿದೆ. ನಿಖರವಾಗಿ ಹೇಳಬೇಕೆಂದರೆ ಎಲ್ಲ ಕಲ್ಪನೆಗಳನ್ನೂ ಮೀರಿ ತಂತ್ರಜ್ಞಾನ ಬೆಳೆದುಕೊಂಡಿದೆ. ಆದರೆ ಎಪ್ಪತ್ತು ಎಂಭತ್ತರ ದಶಕಗಳ ಆಚೀಚೆ ಈಗಿನ ತಂತ್ರಜ್ಞಾನಗಳ ಕಲ್ಪನೆಯೂ ಇರಲಿಲ್ಲ. ವಿಶೇಷವೆಂದರೆ ಆ ಕಾಲದಲ್ಲಿಯೇ ಪುಟ್ಟಣ್ಣ ಕಣಗಾಲರಂಥಾ ಮಹಾನ್ ಪ್ರತಿಭಾವಂತ ನಿರ್ದೇಶಕರು ಈವತ್ತಿಗೂ ಪ್ರಸ್ತಿತವಾಗುವಂಥಾ ದೃಶ್ಯ ಕಾವ್ಯಗಳನ್ನು ಸೃಷ್ಟಿಸಿದ್ದರು. ಬೆರಗೊಂದನ್ನು ಪೀಳಿಗೆಗಳಾಚೆಗೂ ದಾಟಿಸುವಂಥಾ ಅದ್ಭುತ ಚಿತ್ರಗಳನ್ನು ರೂಪಿಸಿದ್ದರು. ಅದರಲ್ಲಿ ಎಪ್ಪತ್ತರ ದಶಕದಲ್ಲಿ ಬಂದಿದ್ದ ಕಥಾ ಸಂಗಮ ಚಿತ್ರವೂ ಸೇರಿಕೊಂಡಿದೆ.

Advertisement

ಈವತ್ತಿಗೂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುವವರಿಗೆಲ್ಲ ಪುಟ್ಟಣ್ಣ ಕಣಗಾಲ್ ರೋಲ್ ಮಾಡೆಲ್ ಆಗಿರುತ್ತಾರೆ. ಎಪ್ಪತ್ತರ ದಶಕದಲ್ಲಿ ಅವರು ಕಥಾ ಸಂಗಮ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಒಂದೇ ಬಗೆಯ ಸಿನಿಮಾಗಳು ರೆಡಿಯಾಗುತ್ತಿದ್ದ ಆ ಕಾಲದಲ್ಲಿ ಒಂದೇ ಚಿತ್ರದಲ್ಲಿ ನಾಲಕ್ಕು ಕಥೆ ಹೇಳುವಂಥಾ ಪ್ರಯತ್ನವನ್ನು ಕಥಾ ಸಂಗಮದ ಮೂಲಕ ಕಣಗಾಲರು ಮಾಡಿದ್ದರು. ಆ ಕಾಲಕ್ಕೆ ಅದೊಂದು ಕ್ರಾತಿಯೆಂದರೂ ಅತಿಶಯೋಕ್ತಿಯಲ್ಲ. ಇದೀಗ ಪುಟ್ಟಣ್ಣ ಕಣಗಾಲರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ರಿಷಬ್ ಶೆಟ್ಟಿ ಏಳು ನಿರ್ದೇಶಕರ ಏಳು ಕಥೆಗಳನ್ನು ಒಂದು ಸಿನಿಮಾದಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಶ್ರೀದೇವಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಆಧುನಿಕ ಕಥಾ ಸಂಗಮದಲ್ಲಿ ಏಳು ಮಂದಿ ಪ್ರತಿಭಾವಂತ ನಿರ್ದೇಶಕರ ಏಳು ಬಗೆಯ ವಿಶಿಷ್ಟವಾದ ಕಥೆಗಳಿದ್ದಾವೆ. ಈ ಏಳೂ ಮಂದಿ ತಂತಮ್ಮ ಕಥೆಗಳಿಗೆ ತಾವೇ ದೃಶ್ಯ ರೂಪ ಕೊಟ್ಟಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಅದೆಲ್ಲಿಯೂ ಸೂತ್ರ ತಪ್ಪದಂತೆ ಜತನದಿಂದ ನೋಡಿಕೊಂಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಕಥಾ ಸಂಗಮದ ಮೂಲಕ ಕಣಗಾಲರು ನಾಲಕ್ಕು ಕಥೆ ಹೇಳಿದ್ದರು. ಆದರೆ ಇಲ್ಲಿ ಏಳು ಕಥೆಗಳನ್ನು ಪ್ರೇಕ್ಷಕರ ಮುಂದೆ ಹರವಲಾಗುತ್ತದೆ. ಅದರ ಮಜಾ ಏನನ್ನೋದು ವಾರದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next