Advertisement

ಖರ್ಗೆ ಸೋಲು ನಿಶ್ಚಿತ-ಜಾಧವ್‌ ಗೆಲವು ಖಚಿತ

12:57 PM Mar 14, 2019 | Team Udayavani |

ಜೇವರ್ಗಿ: ಲೋಕಸಭೆ ಚುನಾವಣೆಯಲ್ಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಕ್ಕ ಪಾಠ ಕಲಿಸುವುದೇ ನನ್ನ ಗುರಿಯಾಗಿದ್ದು, ಖರ್ಗೆ ಸೋಲು ನಿಶ್ಚಿತ, ಡಾ| ಉಮೇಶ ಜಾಧವ್‌ ಗೆಲುವು ಖಚಿತವಾಗಿದೆ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಕೇಂದ್ರದ ಹಲವಾರು ಹುದ್ದೆಗಳನ್ನು ಅಲಂಕರಿಸಿದರೂ ಕೋಲಿ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಒಪ್ಪಿಗೆ ನೀಡಲಿಲ್ಲ. ಅವರ ಪುತ್ರ ಪ್ರಿಯಾಂಕ್‌ ವ್ಯಾಮೋಹಕ್ಕೆ ಒಳಗಾಗಿ ಮಾಲೀಕಯ್ಯ ಗುತ್ತೇದಾರ, ಬಾಬುರಾವ್‌ ಚವ್ಹಾಣ, ಖಮರುಲ್‌ ಇಸ್ಲಾಂ ಹಾಗೂ ತಮ್ಮನ್ನು ಸೇರಿದಂತೆ ಈಗ ಡಾ| ಉಮೇಶ ಜಾಧವ್‌ ಅವರನ್ನು ರಾಜಕೀಯವಾಗಿ ತುಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತುರ್ತು ಸಚಿವ ಸಂಪುಟ ಸಭೆ ಕರೆದಾಗ ನನ್ನ ಪತ್ನಿ ಆಸ್ಪತ್ರೆಯಲ್ಲಿ ಜೀವನ್ಮರಣದ ವಿರುದ್ಧ ಹೋರಾಡುತ್ತಿದ್ದರು. ಆದರೂ ನಾನು ಸಭೆಗೆ ಹಾಜರಾಗಿ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದ್ದೆ. ಈ ವೇಳೆ ಕೆಲವರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿ ಕೇಂದ್ರಕ್ಕೆ ಕಳುಹಿಸಿದರು ಎಂದರು.

ಸ್ವಾತಂತ್ರ್ಯಾ ಲಭಿಸಿ 73ವರ್ಷಗಳಾದರೂ ಕೋಲಿ ಸಮಾಜಕ್ಕೆ ಇಂದಿಗೂ ಸ್ವಾತಂತ್ರ್ಯಾ ಸಿಕ್ಕಿಲ್ಲ. ನಾನು ಹೋರಾಟಗಾರ ವಿಠ್ಠಲ ಹೇರೂರ್‌ ಅವರ ರಥ ನಡೆಸುತ್ತಿದ್ದೇನೆ ಎಂದು ಹೇಳಿದರು. 

ಕಲಬುರ್ಗಿ ಜಿಲ್ಲೆಯಲ್ಲಿ ಕೋಲಿ ಸಮಾಜದ 4.25ಲಕ್ಷ ಜನರಿದ್ದಾರೆ. ಈ ಸಲ ಮಲ್ಲಿಕಾರ್ಜುನ ಖರ್ಗೆ ಸೋಲುವುದು ನಿಶ್ಚಿತ. ಡಾ| ಉಮೇಶ ಜಾಧವ್‌ ಲೋಕಸಭೆಗೆ ಹೋದರೆ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುವುದು ಖಚಿತ ಎಂದರು.

Advertisement

ಕೋಲಿ ಸಮಾಜದ ರಾಜ್ಯ ಕಾರ್ಯಕಾರಣಿ ಸದಸ್ಯ ಶರಣಪ್ಪ ಹದನೂರ, ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಆವಂಟಿ, ಜಿಲ್ಲಾಧ್ಯಕ್ಷರಾದ ಶಾಂತಪ್ಪ ಕೂಡಿ, ರಾಮಣ್ಣ ನೈಕೋಡಿ, ಯಾದಗಿರಿ ಜಿಲ್ಲಾಧ್ಯಕ್ಷ ಪಿಡ್ಡಪ್ಪ ಜಾಲಗಾರ, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಸಂತೋಷ ತಳವಾರ, ಯಮನಪ್ಪಗೌಡ ಎನ್‌. ಇಜೇರಿ ರೇವನೂರ, ರವಿ ವಕೀಲ ರೇವನೂರ, ಭೀಮರಾಯ ಜನಿವಾರ ಹಾಗೂ ಪುರಸಭೆ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next