Advertisement

ಗಾಂಧಿ ಕುಟುಂಬದ ಮನೆ ಬಾಗಿಲು ಕಾಯುವ ಖರ್ಗೆಗೆ ಜನಪರ ಕಾರ್ಯಕ್ರಮ ಮಾಡಿ ಗೊತ್ತಿಲ್ಲ: ಪಿ.ರಾಜೀವ

11:40 AM Jan 16, 2023 | keerthan |

ವಿಜಯಪುರ: ನಿರಂತರ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದಿಂದ ಮಾಡಲಾಗದ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕೆಲಸ ಬಿಜೆಪಿ ಮಾಡಿದೆ. ಹೀಗಾಗಿ ಇಂಥ ಐತಿಹಾಸಿಕ ಕಾರ್ಯಕ್ರಮ ಮಾಡಿಯೇ ತಿಳಿಯದ ಗಾಂಧಿ ಕುಟುಂಬದ ಮನೆ ಬಾಗಿಲು ಕಾಯುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಕಾರ್ಯಕ್ರಮ ಟೀಕಿಸುವ ನೈತಿಕತೆ ಇಲ್ಲ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ-ಶಾಸಕ ಪಿ.ರಾಜೀವ ಟೀಕಿಸಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳದ ವಿಷಯದಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿದೆ. ಸದಾಶಿವ ವರದಿ ಬಹಿರಂಗವಾಗಲಿ ಎಂದು ನಾವೂ ಆಗ್ರಹಿಸಿದ್ದೇವೆ. ಇದಕ್ಕಾಗಿ ಸರ್ಕಾರ ಸಂಪುಟ ಉಪ ಸಮಿತಿ ರಚಿಸಿದ್ದು, ಶೀಘ್ರವೇ ವರದಿ ಸಿಗಲಿದೆ ಎಂದರು.

ಮತ್ತೊಂದೆಡೆ ಸಾಮಾಜಿಕ ನ್ಯಾಯದ ಪರವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಲಿತರಿಗೆ ಮೀಸಲು ಪ್ರಮಾಣ ಹೆಚ್ಚಿಸಿದೆ. ನಾಗಮೋಹನ ದಾಸ ವರದಿಯನ್ನು ಒಪ್ಪಿಕೊಂಡು, ಪರಿಶಿಷ್ಟ ಜಾತಿ ಮೀಸಲು ಪ್ರಮಾಣ ಶೇ. 17 ಕ್ಕೆ ಏರಿಕೆ ಮಾಡಿ, ಬದ್ದತೆ ತೋರಿದ್ದಾರೆ ಎಂದರು.

ಇದನ್ನೂ ಓದಿ:ಹರಕೆ ತೀರಿಸಲು ಪಶುಪತಿನಾಥನ ದರ್ಶನಕ್ಕೆಂದು ಹೊರಟಿದ್ದಾತ ವಿಮಾನ ಪತನದಲ್ಲಿ ಕೊನೆಯುಸಿರು

ಬಡತನವನ್ನು ದುರ್ಬಳಕೆ ಮಾಡಿಕೊಂಡು ಕೆಲವು‌ ಮಷಿನರಿಗಳು ಬಂಜಾರಾ ಮತಾಂತರಕ್ಕೆ ಮುಂದಾಗಿವೆ. ಈ ವಿಷಯ ನಿಗಮದ ಗಮನಕ್ಕಿದ್ದು, ಗಂಭೀರವಾಗಿ ಪರಿಗಣಿಸಿದ ಕಾರಣದಿಂದಲೇ ಸರ್ಕಾರ ಮತಾಂತರ ಕಾಯ್ದೆ ಜಾರಿಗೆ‌ ತಂದಿದೆ ಎಂದರು.

Advertisement

ಸಚಿವ ಮುರುಗೇಶ ನಿರಾಣಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯದ ವೈಯಕ್ತಿಕ ನಿಂದನೆಯ ಬಗ್ಗೆ ಪಕ್ಷದ ಔಟ್ ಪುಟ್ ಗಾಗಿ ಕಾಯಿರಿ. ಪಕ್ಷದ ನಾಯಕತ್ವ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಸಂದರ್ಭದಲ್ಲಿ ನಾಯಕರು ತೀರ್ಮಾನಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡಿಲ್ಲ, ಇತಿಹಾಸದಲ್ಲಿ ಹಲವು ನಾಯಕರು ನಡೆಸಿದ ಇಂಥ ಪ್ರಯತ್ನಗಳು ಯಶಸ್ಸು ಕಂಡಿಲ್ಲ. ರಾಷ್ಟ್ರೀಯ ಚಿಂತನೆಯ ಕರ್ನಾಟಕದ ಮತದಾರ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next