Advertisement

ಲಿಂಗರಾಜಪ್ಪ  ಅಪ್ಪ ಮನೆಗೆ ತೆರಳಿ ಖಂಡ್ರೆ ಸಾಂತ್ವಾನ

04:02 PM Jun 19, 2021 | Team Udayavani |

ಕಲಬುರಗಿ :  ನಗರದ ಗೋದುತಾಯಿ ಕಾಲೋನಿಯಲ್ಲಿರುವ ಲಿಂಗರಾಜಪ್ಪ ಅಪ್ಪ ಮನೆಗೆ ತೆರಳಿ ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಾಂತ್ವನ ಹೇಳಿದರು. ಲಿಂಗರಾಜಪ್ಪ ಅವರ ತಂದೆಯವರಾಗಿರುವ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಬಸವರಾಜ ಅಪ್ಪ, ಮಾತೋಶ್ರೀ ನಳಿನಿ ಅವರು ಲಿಂಗೈಕ್ಯರಾದ ಪ್ರಯುಕ್ತ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರಲ್ಲದೇ ಲಿಂಗೈಕ್ಯ ಬಸವರಾಜ ಅಪ್ಪ ಸಾತ್ವಿಕರು, ಶರಣ ಸಂಸ್ಕೃತಿಯ ಪ್ರತಿಪಾದಕರಾಗಿದ್ದರು.

Advertisement

ದಾಸೋಹದ ಮೂಲಕ ಎಲ್ಲ ಸಮುದಾಯದವರು ಒಂದೇ ಎಂದು ಸಾರುತ್ತಿದ್ದರು ಎಂದು ಸ್ಮರಿಸಿದರು. ಈಗ ಅವರ ಪುತ್ರ ಲಿಂಗರಾಜ ಅಪ್ಪ ಸಹ ಶರಣ ಸಂಸ್ಕೃತಿ ರಾಯಭಾರಿಯಾಗಿ ಮುನ್ನಡೆಯುತ್ತಿದ್ದಾರೆ. ತಾವು ನಿಮಗೆ ಸಂಪೂರ್ಣ ಸಹಕಾರ ನೀಡುñತೇವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಲಿಂಗರಾಜ ಅಪ್ಪ, ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗಾಗಿ ಗಡಿಭಾಗದಲ್ಲಿರುವ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಇನ್ನಿತರ ರಾಜ್ಯಗಳಲ್ಲಿರುವ ನಮ್ಮ ಸಮಾಜದರನ್ನು ಒಂದುಗೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ತಮ್ಮ ಸಹಕಾರ ಸದಾ ಇರುತ್ತದೆ. ಮುಂದಿನ ದಿನಗಳಲ್ಲಿ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಕಡೆಯಿಂದ ತರಬೇತಿ ನೀಡಲು ಬೇಕಾಗುವ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು. ಈಶ್ವರ ಖಂಡ್ರೆ ಮಾರ್ಗದರ್ಶನದಲ್ಲಿ ಶರಣಕುಮಾರ ಮೋದಿ ಅಧ್ಯಕ್ಷತೆಯಲ್ಲಿ ಮಹಾಸಭಾದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಮಾಜವು ಬೆಳೆಯಲಿ ಎಂದು ಹೇಳಿದರು.

ಮಚೇಂದ್ರನಾಥ ಮೂಲಗೆ, ಧರ್ಮಪ್ರಕಾಶ ಪಾಟೀಲ, ವಿರೂಪಾಕ್ಷಯ್ಯ ಮಠಪತಿ, ಸಿದ್ದುಗೌಡ ಅಫಜಲಪುರಕರ್‌, ಶೀಲಾ ಮುತ್ತಿನ, ಗೌರಿ ಚಿಚೊRàಟಿ, ಚನ್ನಪ್ಪ ದಿಗ್ಗಾವಿ, ಸೋಮಶೇಖರ ಹಿರೇಮಠ, ಶರಣು ತೆಂಗಳಿ, ನಾಗವೇಣಿ ಪಾಟೀಲ, ಆನಂದ ಪಾಟೀಲ, ಭೀಮಾಶಂಕರ ಮೀಟೇಕಾರ, ಅವಿನಾಶ ಜಗನ್ನಾಥ ಜ್ಯೋತಿ ಮರಗೋಳ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next