Advertisement

ಮೆರವಣಿಗೆಯಲ್ಲಿ ಒಟ್ಟಿಗೆ ಕುಣಿದ ಖಂಡ್ರೆ-ಖೂಬಾ!

11:28 PM Apr 14, 2019 | Team Udayavani |

ಬೀದರ: ಲೋಕಸಭೆ ಚುನಾವಣೆ ಕಣದಲ್ಲಿ ಪರಸ್ಪರ ವಾಗ್ಧಾಳಿ, ಆರೋಪ-ಪ್ರತ್ಯಾರೋಪ ನಡೆಸುವ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಭಾನುವಾರ ಒಟ್ಟಿಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ!.

Advertisement

ನಗರದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವ ನಿಮಿತ್ತ ಮೆರವಣಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರೂ ನಾಯಕರು ನೂರಾರು ಜನರ ನಡುವೆ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಖೂಬಾ, ಖಂಡ್ರೆ ಹೆಜ್ಜೆ ಹಾಕುತ್ತಿದ್ದಂತೆ ಜನರೆಲ್ಲಾ ಸ್ಫೂರ್ತಿಗೊಂಡು ಹೆಜ್ಜೆ ಹಾಕಲು ಶುರು ಮಾಡಿದರು.

ನೆರೆದಿದ್ದ ಜನತೆ ಸಿಳ್ಳೆ ಹಾಕಿ ಸಂಭ್ರಮಿಸಿದರು. ಖಂಡ್ರೆ ಹಾಗೂ ಖೂಬಾ ಅವರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತುಕೊಂಡು ಕುಣಿದರು. ಖೂಬಾ ಸಿಳ್ಳೆ ಹೊಡೆದು ಸಂಭ್ರಮ ಪಟ್ಟರು. ಸಂವಿಧಾನ ಶಿಲ್ಪಿಯ ಜಯಂತ್ಯುತ್ಸವದಲ್ಲಿ ರಾಜಕೀಯ ಮರೆತು ಇಬ್ಬರೂ ಮುಖಂಡರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next