Advertisement

Khalistani:ಭಾರತವನ್ನು ವಿಭಜಿಸಿ ಹಲವು ದೇಶಗಳನ್ನು ಸೃಷ್ಟಿಸಬೇಕು: ಖಲಿಸ್ತಾನಿ ಉಗ್ರ ಪನ್ನು !

04:13 PM Sep 25, 2023 | Nagendra Trasi |

ನವದೆಹಲಿ: ಇತ್ತೀಚೆಗಷ್ಟೇ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ ವಂತ್‌ ಸಿಂಗ್‌ ಪನ್ನೂನ್‌ ಗೆ ಸೇರಿದ್ದ ಆಸ್ತಿ-ಪಾಸ್ತಿಯನ್ನು ಎನ್‌ ಐಎ ವಶಪಡಿಸಿಕೊಂಡಿದೆ. ಮತ್ತೊಂದೆಡೆ “ಭಾರತವನ್ನು ವಿಭಜಿಸಿ ಹಲವು ದೇಶಗಳನ್ನಾಗಿ ರಚಿಸುವ ಬಯಕೆ ಖಲಿಸ್ತಾನ ಉಗ್ರ ಗುರುಪತ್‌ ವಂತ್‌ ಸಿಂಗ್‌ ನದ್ದಾಗಿದೆ ಎಂದು ಮೂಲಗಳು ಎನ್‌ ಡಿಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:Kerala: ಮಹಿಳೆಗೆ ದೈಹಿಕ ಕಿರುಕುಳ; ʼಮಲ್ಲು ಟ್ರಾವೆಲರ್ʼ ಯೂಟ್ಯೂಬರ್‌ಗೆ ಲುಕ್‌ ಔಟ್ ನೋಟಿಸ್

ಪನ್ನೂನ್‌ ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ದಾಖಲೆಯ ಪ್ರಕಾರ, ಭಾರತದ ಒಗ್ಗಟ್ಟು ಮತ್ತು ಸಾರ್ವಭೌಮತ್ವದ ಬಗ್ಗೆ ನಿಷೇಧಿತ ಪ್ರತ್ಯೇಕತಾವಾದಿಗಳ ಸಂಘಟನೆಯಾದ ಸಿಖ್ಸ್‌ ಫಾರ್‌ ಜಸ್ಟೀಸ್‌ ನ ಮುಖ್ಯಸ್ಥ ಗುರುಪಂತ್‌ ವಂತ್‌ ಸಿಂಗ್‌ ಪನ್ನೂನ್‌ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ  ಕಾಶ್ಮೀರದ ಜನತೆಗಾಗಿ ಪ್ರತ್ಯೇಕ ದೇಶವನ್ನು ರಚಿಸಬೇಕಾಗಿದೆ. ಅಲ್ಲದೇ ಮುಸ್ಲಿಮ್‌ ದೇಶವನ್ನು ರಚಿಸಬೇಕಾಗಿದೆ ಎಂದು ವರದಿ ವಿವರಿಸಿದೆ.

ಪಂಜಾಬ್‌ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಭಯೋತ್ಪಾದನೆ ಚಟುವಟಿಕೆ ಹರಡುವಲ್ಲಿ ಪನ್ನೂ ಪ್ರಮುಖ ಸೂತ್ರಧಾರಿಯಾಗಿದ್ದ. ಈ ಹಿನ್ನಲೆಯಲ್ಲ್ಲಿ 2019ರಲ್ಲಿ ಪನ್ನು ಮೋಸ್ಟ್‌ ವಾಂಟಡ್‌ ಉಗ್ರ ಎಂದು ಎನ್‌ ಐಎ ಘೋಷಿಸಿತ್ತು. ಪನ್ನು ನೇತೃತ್ವದ ಸಿಖ್‌ ಫಾರ್‌ ಜಸ್ಟೀಸ್‌ ಯುವಕರನ್ನು ತಪ್ಪು ದಾರಿ ಗೆ ಎಳೆಯುತ್ತಿದೆ. ಅಲ್ಲದೇ ಅವರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಸ್ವತಂತ್ರ ಖಲಿಸ್ತಾನಿ ರಚನೆಗಾಗಿ ಹೋರಾಡುತ್ತಿರುವುದಾಗಿ ದಾಖಲೆಯಲ್ಲಿ ವಿವರಿಸಿದೆ.

22019ರಲ್ಲಿ ಸಿಖ್‌ ಫಾರ್‌ ಜಸ್ಟೀಸ್‌ ಅನ್ನು  ಭಾರತ ಸರ್ಕಾರ ನಿಷೇಧಿಸಿತ್ತು. 2020ರ ಜುಲೈಲ್ಲಿ ಪನ್ನುವನ್ನು ಭಯೋತ್ಪಾಕ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿತ್ತು. ಗುರುಪತ್‌ ವಂತ್‌ ಸಿಂಗ್‌ ಪನ್ನು ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಅನ್ನು ಜಾರಿಗೊಳಿಸುವಂತೆ ಭಾರತ ಸರ್ಕಾರ ಎರಡು ಬಾರಿ ಮಾಡಿದ್ದ ಮನವಿಯನ್ನು ಇಂಟರ್‌ ಪೋಲ್‌ ತಿರಸ್ಕರಿಸಿತ್ತು.

Advertisement

ಮತ್ತೊಬ್ಬ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡು ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿರುವ ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತದ ಹಿರಿಯ ರಾಯಭಾರಿಗಳು ಹಾಗೂ ಅಧಿಕಾರಿಗಳ ಮೇಲೆ ದಾಳಿ ನಡೆಸುವುದಾಗಿ ಪನ್ನು ಬೆದರಿಕೆಯೊಡ್ಡಿದ್ದ.

ಕೆನಡಾ ಪ್ರಜೆಯಾಗಿರುವ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಕೊಲೆಯ ಹಿಂದೆ ಭಾರತ ಸರ್ಕಾರದ ಕೈವಾಡ ಇದ್ದಿರುವುದಾಗಿ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರ್ಯೂಡೊ ಆರೋಪಿಸಿದ್ದು, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿತ್ತು.

ಗುರುಪತ್‌ ವಂತ್‌ ಸಿಂಗ್‌ ಪನ್ನು ಕುಟುಂಬ ಸದಸ್ಯರು ಪಾಕಿಸ್ತಾನದ ಖಾನ್‌ ಕೋಟ್‌ ಮೂಲದವರು. 1947ರಲ್ಲಿ ದೇಶ ಇಬ್ಬಾಗವಾದ ಸಂದರ್ಭದಲ್ಲಿ ಪನ್ನು ಪೋಷಕರು ಅಮೃತಸರಕ್ಕೆ ವಲಸೆ ಬಂದಿದ್ದರು. ಪನ್ನು ಪೋಷಕರು ವಿಧಿವಶರಾಗಿದ್ದು, ಈತನ ಸಹೋದರ ಮಗ್ವಂತ್‌ ಸಿಂಗ್‌ ವಿದೇಶದಲ್ಲಿ ನೆಲೆಸಿದ್ದಾನೆ ಎಂದು ವರದಿ ವಿವರಿಸಿದೆ.

ಮುಸ್ಲಿಮರಿಗೆ ಪ್ರೇರೇಪಣೆ ನೀಡಿ, ಮುಸ್ಲಿಮ್‌ ರಾಷ್ಟ್ರವನ್ನು ನಿರ್ಮಾಣ ಮಾಡುವುದಾಗಿ ಬಯಕೆ ವ್ಯಕ್ತಪಡಿಸಿರುವ ಪನ್ನು, ಅದಕ್ಕೆ ಡೆಮೊಕ್ರಟಿಕ್‌ ರಿಪಬ್ಲಿಕ್‌ ಆಫ್‌ ಉರ್ದುಸ್ತಾನ್‌ ಎಂದು ಹೆಸರಿಡಬೇಕು ಎಂಬುದು ಆತನ ಇಚ್ಛೆಯಾಗಿದೆ ಎಂದು ದಾಖಲೆಯಲ್ಲಿ ತಿಳಿಸಿದೆ.

ಭಯೋತ್ಪಾದಕ ಗುರುಪತ್‌ ವಂತ್‌ ಸಿಂಗ್‌ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪಂಜಾಬ್‌, ದೆಹಲಿ, ಹಿಮಾಚಲ್‌ ಪ್ರದೇಶ, ಹರ್ಯಾಣ ಮತ್ತು ಉತ್ತರಾಖಂಡ್‌ ನಲ್ಲಿ ಪನ್ನು ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next