ಇಸ್ಲಮಾಬಾದ್: ಖಲಿಸ್ಥಾನಿ ಉಗ್ರ, ಜರ್ನೈಲ್ ಸಿಂಗ್ ಬಿಂದ್ರನ್ ವಾಲೆನ ಸೋದರಳಿಯ ಲಖ್ಬೀರ್ ಸಿಂಗ್ ರೋಡ್ ಡಿಸೆಂಬರ್ 2ರಂದು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ. ಲಖ್ಬೀರ್ ಸಿಂಗ್ ಹೃದಯಾಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಿಖ್ ಸಂಪ್ರದಾಯಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಿ ಪಾಕಿಸ್ತಾನದಲ್ಲಿ ಲಖ್ಬೀರ್ ಅವರ ಅಂತಿಮ ವಿಧಿಗಳನ್ನು ರಹಸ್ಯವಾಗಿ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೂಚನೆ ಮೇರೆಗೆ ಪಂಜಾಬ್ ನಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಲಖ್ಬೀರ್ ಸಿಂಗ್ ಭಾಗಿಯಾಗಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ:Road Mishap: ಥಾಯ್ಲೆಂಡ್‌ನಲ್ಲಿ ಬಸ್ ಅಪಘಾತ… 14 ಮಂದಿ ಮೃತ್ಯು, 20 ಪ್ರಯಾಣಿಕರಿಗೆ ಗಾಯ
ಅಕ್ಟೋಬರ್‌ನಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಯೋತ್ಪಾದನಾ ವಿರೋಧಿ ಏಜೆನ್ಸಿಯ ದಾಳಿಯ ನಂತರ ಲಖ್ಬೀರ್ ಸಿಂಗ್ ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಪಂಜಾಬ್ ನ ಮೊಗಾದಲ್ಲಿ ಈ ದಾಳಿ ನಡೆದಿತ್ತು.
2021ರಿಂದ 2023ರವರೆಗಿನ ಭಯೋತ್ಪದನಾ ಸಂಬಂಧಿ ಆರು ಪ್ರಕರಣಗಳ ತನಿಖೆ ನಡೆಸಿದ ಎನ್ಐಎ ಈ ದಾಳಿ ನಡೆಸಿತ್ತು.