Advertisement

ʼಯಶ್‌ 19ʼ ಈ ದಿನ ಅನೌನ್ಸ್‌ ಮೆಂಟ್‌ ಆಗೋದು ಪಕ್ಕಾ: ನಿರ್ದೇಶಕರು ಯಾರು?

12:58 PM Mar 04, 2023 | Team Udayavani |

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್ ಮುಂದಿನ ಸಿನಿಮಾ ಯಾವಾಗ ಎನ್ನುವುದು ಅಭಿಮಾನಿಗಳ ಪಾಲಿಗೆ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಇನ್ನೇನು ಯಶ್‌ ತಮ್ಮ ಸಿನಿಮಾವನ್ನು ಹುಟ್ಟು ಹಬ್ಬದಂದು ಘೋಷಿಸಿ ಬಿಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು ಆದರೆ ಅದು ಸಾಧ್ಯವಾಗಿಲ್ಲ.

Advertisement

ಕೆಜಿಎಫ್‌ 1,2 ಬಳಿಕ ಯಶ್‌ ಗ್ಲೋಬಲ್‌ ಸ್ಟಾರ್‌ ಆಗಿದ್ದಾರೆ. ಅವರು ಯಾವ ಸಿನಿಮಾವನ್ನು ಮಾಡಿದರೂ ಜಾಗ್ರತೆ ಹೆಜ್ಜೆಯನ್ನಿಡಬೇಕು. ಅವರ ಮುಂದಿನ ಸಿನಿಮಾವನ್ನು ಪ್ರೇಕ್ಷಕರು ಕೆಜಿಎಫ್‌ ರೇಂಜ್‌ ನಲ್ಲೇ ನೋಡಲು ಕಾಯುತ್ತಿದ್ದಾರೆ. ಆ ಕಾರಣದಿಂದ ಯಶ್‌ ಮುಂದಿನ ಸಿನಿಮಾಕ್ಕಾಗಿ ಇಷ್ಟೊಂದು ಕಾಯಿಸುತ್ತಿದ್ದಾರೆ ಎನ್ನುವುದು ಒಂದು ಮಾತು.

ಇದೀಗ ಯಶ್‌ ಮುಂದಿನ ಸಿನಿಮಾದ ಅನೌನ್ಸ್‌ ಮೆಂಟ್‌ ಏಪ್ರಿಲ್‌ ನಲ್ಲಿ ಆಗಲಿದೆ ಎನ್ನಲಾಗುತ್ತಿದೆ. ನಿರ್ದೇಶಕರು ಯಾರು, ನಿರ್ಮಾಣ ಯಾರು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಮುಂದಿನ ತಿಂಗಳು ಹೊರ ಬೀಳಲಿದೆ ಎಂದು ʼಇಂಡಿಯಾ ಟುಡೇʼ ವರದಿ ತಿಳಿಸಿದೆ.

ಸದ್ಯ ಯಶ್‌ ಸ್ಕ್ರಿಪ್ಟ್‌ ಗಳನ್ನು ಕೇಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಸ್ಕ್ರಿಪ್ಟ್‌ ಕೇಳಿ ಫೈನಲ್‌ ಬಳಿಕ ಸಿನಿಮಾದ ಬಗ್ಗೆ ಮಾಹಿತಿಯನ್ನು ರಿವೀಲ್‌ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ತಿಂಗಳು ಕೆವಿಎನ್‌ ನ ವೆಂಕಟ್ ಕೋಣಂಕಿ ನಾರಾಯಣ ಅವರೊಂದಿಗೆ ಯಶ್‌ ಅವರ ಫೋಟೋ ವೈರಲ್‌ ಆಗಿತ್ತು. ಕೆವಿಎನ್‌ ಯಶ್‌ ಮುಂದಿನ ಸಿನಿಮಾಕ್ಕೆ ನಿರ್ಮಾಣ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ ಆದರೆ ಈ ಬಗ್ಗೆ ಅಧಿಕೃತವಾಗಿ ಅಪ್ಡೇಡ್‌ ಹೊರಬರಬೇಕಿದೆ.  ಇದಲ್ಲದೇ ʼಕಬ್ಜʼ ನಿರ್ದೇಶಕ ಆರ್.‌ ಚಂದ್ರ ಅವರೊಂದಿಗೆ ಯಶ್‌ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಗಾಸಿಪ್‌ ಆಗಿ ಚಂದನವನದಲ್ಲಿ ಹರಿದಾಡಿತ್ತು. ನರ್ತನ್‌ ಅವರು ಯಶ್‌ 19 ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನುವುದು ಈ ಹಿಂದೆ ಕೇಳಿ ಬಂದ ಮಾತಾಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next