Advertisement

4 ಗ್ರಾಪಂಗೆ ಆಯ್ಕೆ, ಒಂದು ಮುಂದೂಡಿಕೆ

02:16 PM Feb 09, 2021 | Team Udayavani |

ಕೆಜಿಎಫ್: ತಾಲೂಕಿನ ಐದು ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪೈಕಿ ಕ್ಯಾಸಂಬಳ್ಳಿ ಹೊರೆತುಪಡಿಸಿ, ನಾಲ್ಕು ಪಂಚಾಯಿತಿಗಳಲ್ಲಿ ಚುನಾವಣೆ ಸುಗಮವಾಗಿ ನಡೆಯಿತು.

Advertisement

ಮಾರಿಕುಪ್ಪ ಗ್ರಾಪಂಗೆ ಅಧ್ಯಕ್ಷರಾಗಿ ಜಲಜಾಕ್ಷಿ ತಮ್ಮ ಪ್ರತಿಸ್ಪರ್ಧಿ ಚೈತ್ರಾ ರವರನ್ನು 10-8 ಮತಗಳ ಅಂತರದಿಂದ ಸೋಲಿಸಿದರು. ಉಪಾಧ್ಯಕ್ಷರಾಗಿ ರಘುಕುಮಾರ್‌ ಗೆದ್ದರು. ಘಟ್ಟಮಾದಮಂಗಲ: ಹರೀಶ್‌ ಕೃಷ್ಣ ಅಧ್ಯಕ್ಷ, ರೋಜಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಸುಂದರಪಾಳ್ಯ: ರಾಮಬಾಬು ಮತ್ತು ರತ್ನಮ್ಮ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಚುನಾಯಿತರಾದರು.  ಪ್ರತಿಸ್ಪರ್ಧಿಗಳಾದ ರಾಧಾಕೃಷ್ಣ ಮತ್ತು ಸರಸ್ವತಮ್ಮ ಅವರನ್ನು 10-8 ಮತಗಳಿಂದ ಸೋಲಿಸಿದರು.

ಹುಲ್ಕೂರು (ಗುಟ್ಟಹಳ್ಳಿ): ವೆಂಕಟಮ್ಮ 9 ಮತ ಗಳಿಸಿ, ತಮ್ಮ ಪ್ರತಿಸ್ಪರ್ಧಿ ಸುಧಾರಾಣಿ ಅವರನ್ನು ಎರಡು ಮತಗಳಿಂದ ಸೋಲಿಸಿದರು. ಉಪಾಧ್ಯಕ್ಷ ರಾಗಿ ಆಯ್ಕೆಯಾದ ಸೋಮಶೇಖರರೆಡ್ಡಿ 10 ಮತ ಗಳಿಸಿ, ಪ್ರತಿಸ್ಪರ್ಧಿ ವೆಂಕಟಾಚಲಪತಿ ಅವರನ್ನು ಸೋಲಿಸಿದರು.

ಇದನ್ನೂ ಓದಿ :ದೋಣಿಮಡಗು: ಮರು ಚುನಾವಣೆಗೆ ಕೈ ಪಟ್ಟು

Advertisement

ಕ್ಯಾಸಂಬಳ್ಳಿ ಮುಂದೂಡಿಕೆ:ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆ ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಒಟ್ಟಿಗೆ ಮಾಡಿದ್ದರಿಂದ, ಮತ ಪತ್ರಗಳನ್ನು ತಪ್ಪಾಗಿ ಹಂಚಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದವರಿಗೆ 21 ಮತ ಬಂದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಿಗೆ 19 ಮತಗಳು ಬಂದವು. ಪಂಚಾ ಯಿತಿಯಲ್ಲಿ ಒಟ್ಟು 20 ಸದಸ್ಯರು ಇದ್ದರು. ಒಂದು ಮತ ವ್ಯತ್ಯಾಸ ಉಂಟಾಗಿ ದ್ದರಿಂದ ಮುಂದೂಡಲಾಯಿತು. ಮಧ್ಯಾಹ್ನ 12.30 ಕ್ಕೆ ಮುಗಿಯಬೇಕಾಗಿದ್ದ ಚುನಾವಣೆ ಸಂಜೆವರೆಗೂ ನಡೆಯಿತು.

ತೀವ್ರ ಒತ್ತಡಕ್ಕೆ ಒಳಗಾದ ಚುನಾವಣಾಧಿಕಾರಿ ದಿನೇಶ್‌ ಕುಸಿದುಬಿದ್ದರು. ನಂತರ ಅವರನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next