Advertisement

ಜನಪ್ರಿಯ ನಟರ ಅಗ್ರ 10 ಸ್ಥಾನದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌

12:13 AM Dec 08, 2022 | Team Udayavani |

ಹೊಸದಿಲ್ಲಿ: ಸಿನೆಮಾಗಳು, ಆ ಕ್ಷೇತ್ರದ ನಟ – ನಟಿಯರ ಬಗ್ಗೆ ಸಮೀಕ್ಷೆ ನಡೆಸಿ ರ್‍ಯಾಂಕಿಂಗ್‌ ನೀಡುವ ಇಂಟರ್‌ನೆಟ್‌ ಮೂವಿ ಡೇಟಾಬೇಸ್‌ (ಐಎಂಡಿಬಿ) ನಡೆಸಿದ ಪ್ರಸಕ್ತ ವರ್ಷದ ಸಮೀಕ್ಷೆಯ ವಿವರ ಬಿಡುಗಡೆಯಾಗಿದೆ.

Advertisement

ಈ ಪಟ್ಟಿಯಲ್ಲಿ ಕನ್ನಡದ ರಾಕಿಂಗ್‌ ಸ್ಟಾರ್‌ ಯಶ್‌ ಹತ್ತನೇ ಸ್ಥಾನದಲ್ಲಿ ಇದ್ದಾರೆ. ತಮಿಳು ಚಿತ್ರದ ಪ್ರಮುಖ ನಟ ಧನುಷ್‌ ಮೊದಲ ಸ್ಥಾನ ಪಡೆದಿದ್ದಾರೆ. ಗಮನಾರ್ಹ ಅಂಶವೆಂದರೆ ಸಮೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ದಕ್ಷಿಣ ಭಾರತದ ನಟರೇ ಇದ್ದಾರೆ.

ತೆಲುಗು ಚಿತ್ರ ನಟ ಜ್ಯೂನಿಯರ್‌ ಎನ್‌ಟಿಆರ್‌ ಎಂಟನೇ ಸ್ಥಾನದಲ್ಲಿ ಇದ್ದಾರೆ. ರಾಮ್‌ ಚರಣ್‌ ತೇಜ, ಸಮಂತಾ ರುತ್‌ ಪ್ರಭು, ಅಲ್ಲು ಅರ್ಜುನ್‌ ಪಟ್ಟಿಯಲ್ಲಿ ಇದ್ದಾರೆ.

ಬಾಲಿವುಡ್‌ ನಟಿ ಅಲಿಯಾ ಭಟ್‌ ದ್ವಿತೀಯ ಸ್ಥಾನ, ಐಶ್ವರ್ಯಾ ರೈ ಬಚ್ಚನ್‌ ಮೂರನೇ ಸ್ಥಾನ, ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಆರನೇ ಸ್ಥಾನಪಡೆದುಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next