Advertisement

ಜೀ ವಾಹಿನಿಗೆ ‘ಕೆಜಿಎಫ್-2’ ಸ್ಯಾಟಲೈಟ್ ರೈಟ್ಸ್ : ಮಾರಾಟವಾಗಿದ್ದು ಎಷ್ಟು ಕೋಟಿಗೆ ?

01:58 PM Aug 20, 2021 | Team Udayavani |

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ಚಿತ್ರದ ದಕ್ಷಿಣ ಭಾರತೀಯ ಭಾಷೆಯಗಳ ಸ್ಯಾಟ್ ಲೈಟ್ ಹಕ್ಕುಗಳು ಇಂದು ಮಾರಾಟವಾಗಿವೆ.

Advertisement

ವರಮಹಾಲಕ್ಷ್ಮಿ ಹಬ್ಬದಂದು ಕೆಜಿಎಫ್​ ಚಾಪ್ಟರ್​ 2 ತಂಡ ಸ್ಯಾಟಲೈಟ್​ ಹಕ್ಕು ಮಾರಾಟದ ಮಾಹಿತಿ ನೀಡಿದೆ. ದಕ್ಷಿಣ ಭಾರತೀಯ ಭಾಷೆಗಳ ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಜೀ ವಾಹಿನಿ ಸಿನಿಮಾದ ಸ್ಯಾಟಲೈಟ್​ ಪ್ರಸಾರದ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತಾಗಿ ಹೊಂಬಾಳೆ ಫಿಲಂಸ್​, ನಿರ್ದೇಶಕ ಪ್ರಶಾಂತ್​ ನೀಲ್, ಯಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಎಷ್ಟು ಕೋಟಿಗೆ ಡೀಲ್ :

ಬಹುನಿರೀಕ್ಷಿತ ಕೆಜಿಎಫ್  ಚಾಪ್ಟರ್ 2 ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ನೂರು ಕೋಟಿ ರೂ. ನೀಡಿದೆ ಎಂದು ವರದಿಗಳು ತಿಳಿಸಿವೆ. 100 ಕೋಟಿ ರೂ.ಗೆ ಸ್ಯಾಟಲೈಟ್ ಹಕ್ಕುಗಳು ಮಾರಾಟ ವಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಇತ್ತೀಚಿಗಷ್ಟೆ ಒಟಿಟಿ ಯಿಂದಲೂ ಈ ಚಿತ್ರಕ್ಕೆ ದೊಡ್ಡ ಮೊತ್ತದ ಆಫರ್ ಬಂದಿತ್ತು. 250 ಕೋಟಿ ರೂ. ನೀಡುವುದಾಗಿ ಹೇಳಿಕೊಂಡಿತ್ತು. ಆದರೆ, ಚಿತ್ರತಂಡ ಇದನ್ನು ತಿರಸ್ಕರಿಸಿತು.

Advertisement

ಪ್ರಶಾಂತ್ ನೀಲ್ ನಿರ್ದೇಶನ ಕೆಜಿಎಫ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ವಿಜಯ್ ಕಿರಂಗದೂರು ಅವರು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ವರ್ಷ ಕೆಜಿಎಫ್ 2 ಸಿನಿಮಾ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next