Advertisement

ದಂಗಲ್ ಚಿತ್ರದ ದಾಖಲೆ ಹಿಂದಿಕ್ಕಿದ ಯಶ್; ಹಿಂದಿಯಲ್ಲಿ ಹೆಚ್ಚು ಗಳಿಕೆ ಕಂಡ 2ನೇ ಚಿತ್ರ KGF 2

03:49 PM May 05, 2022 | Team Udayavani |

ಮುಂಬಯಿ: ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ದಾಖಲೆಗಳ ನಾಗಾಲೋಟ ಮುಂದುವರಿದಿದ್ದು, ಕೆಜಿಎಫ್ ಚಾಪ್ಟರ್ 2 ಹಿಂದಿ ಅವತರಣಿಕೆ 391.65 ಕೋಟಿ ರೂಪಾಯಿ ಗಳಿಸುವ ಮೂಲಕ ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ ದಾಖಲೆಯನ್ನು ಮುರಿದಿದೆ.

Advertisement

ಇದನ್ನೂ ಓದಿ:ಈದ್ಗಾ ಮೈದಾನಕ್ಕೆ 1.5 ಕೋಟಿ ರೂ. ಮೌಲ್ಯದ ಭೂಮಿ ನೀಡಿದ ಹಿಂದೂ ಸಹೋದರಿಯರು

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ ಬಾಕ್ಸಾಫೀಸ್ ಗಳಿಕೆ (387.38 ಕೋಟಿ)ಯನ್ನು ಹಿಂದಿಕ್ಕಿರುವುದಾಗಿ ಸಿನಿಮಾ ಉದ್ಯಮದ ವಿಶ್ಲೇಷಕ ರಮೇಶ್ ಬಾಲಾ ಮತ್ತು ತರಣ್ ಆದರ್ಶ್ ತಮ್ಮ ಟ್ವೀಟ್ ಅಪ್ ಡೇಟ್ಸ್ ಮೂಲಕ ತಿಳಿಸಿದ್ದಾರೆ.

ಹಿಂದಿ ಅವತರಣಿಕೆಯಲ್ಲಿ ಈಗ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಅತೀ ಹೆಚ್ಚು ಗಳಿಕೆ ಕಂಡಿದ್ದು, ಕೆಜಿಎಫ್ 2 ಎರಡನೇ ಸ್ಥಾನದಲ್ಲಿದೆ ಹಾಗೂ ಅಮೀರ್ ಖಾನ್ ನಟನೆಯ ದಂಗಲ್ 3ನೇ ಸ್ಥಾನದಲ್ಲಿದೆ. ಪ್ರಭಾಸ್ ನಟನೆಯ ಬಾಹುಬಲಿ 2 ಸಿನಿಮಾ ಹಿಂದಿಯಲ್ಲಿ 510.99 ಕೋಟಿ ರೂಪಾಯಿ ಗಳಿಸಿದ್ದು, ದಂಗಲ್ ಸಿನಿಮಾ 387.38 ಕೋಟಿ ಗಳಿಕೆ ಕಂಡಿತ್ತು.

ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೊಂಡ ದಿನವೇ ಹಿಂದಿಯಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕವಾಗಿ ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾ 2024 ಕೋಟಿ ರೂಪಾಯಿ ಗಳಿಕೆ ಮೂಲಕ ಮೊದಲ ಸ್ಥಾನದಲ್ಲಿದೆ. ಬಾಹುಬಲಿ 2 ಚಿತ್ರ 1,810 ಕೋಟಿ ರೂಪಾಯಿ ಕಲೆಕ್ಷನ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್ ಆರ್ ಆರ್ ಸಿನಿಮಾ 1,210 ಕೋಟಿ ರೂಪಾಯಿ ಗಳಿಸಿದ್ದು 3ನೇ ಸ್ಥಾನದಲ್ಲಿದ್ದು, ಕೆಜಿಎಫ್ ಚಾಪ್ಟರ್ 2 ಸಿನಿಮಾ 1,056 ಕೋಟಿ ಗಳಿಕೆಯೊಂದಿಗೆ 4ನೇ ಸ್ಥಾನದಲ್ಲಿದೆ.

Advertisement

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14ರಂದು ದೇಶ, ವಿದೇಶಗಳಲ್ಲಿ ಬಿಡುಗಡೆಗೊಂಡಿತ್ತು. ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಅಚ್ಯುತ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next