Advertisement

ತಮಿಳಿನಲ್ಲಿ ಸ್ಯಾಂಡಲ್‌ವುಡ್ ಸಾಮರ್ಥ್ಯ: ಕೆಜಿಎಫ್- 2 ಆವೃತ್ತಿ ಮತ್ತೊಂದು ದಾಖಲೆ

02:31 PM May 02, 2022 | Team Udayavani |

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್- 2 ತನ್ನ ಕಿರೀಟದಲ್ಲಿ ದಿನಕ್ಕೊಂದು ಗರಿಯನ್ನು ಸೇರಿಸುತ್ತಾ ಮುನ್ನುಗ್ಗುತ್ತಿದ್ದು,ಬಹು ದಾಖಲೆಗಳನ್ನು ಮುರಿದು ವಿಶ್ವಾದ್ಯಂತ ಇತಿಹಾಸವನ್ನು ಸೃಷ್ಟಿಸಿದ ಚಿತ್ರ ತಮಿಳುನಾಡಿನಲ್ಲೂ ಬ್ಲಾಕ್ಬಸ್ಟರ್ ಹಿಟ್ ಆಗಿದೆ.

Advertisement

ಕೆಜಿಎಫ್- 2 ತಮಿಳು ಆವೃತ್ತಿ 100 ಕೋಟಿ ರೂಪಾಯಿಗಳನ್ನು ಬಾಚಿಕೊಂಡ ಏಕೈಕ ಸ್ಯಾಂಡಲ್‌ವುಡ್ ಚಲನಚಿತ್ರವಾಗಿದೆ.ಈಗಾಗಲೇ 153 ಕೋಟಿ ರೂ. ಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ಕಂಡರಿಯದ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದ್ದು, ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡದ ಚಿತ್ರ ಎನಿಸಿಕೊಂಡಿದೆ.

ಬಿಡುಗಡೆಯಾಗಿ ಎರಡು ವಾರಗಳ ನಂತರವೂ ಕೆಜಿಎಫ್ 2 ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆಯುತ್ತಿದ್ದು, ಸದ್ಯ ಚಿತ್ರದ ಅಬ್ಬರ ನಿಲ್ಲುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ!.

Advertisement
Advertisement

Udayavani is now on Telegram. Click here to join our channel and stay updated with the latest news.

Next