Advertisement

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

03:39 PM May 18, 2022 | Team Udayavani |

ನವದೆಹಲಿ: ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಜಾಗತಿಕವಾಗಿ ಬಿಡುಗಡೆಯಾಗಿ ನಾಲ್ಕು ವಾರ ಕಳೆದಿದ್ದು, ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. 5ನೇ ವಾರದಲ್ಲಿ ವಿಶ್ವಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾ 1,200 ಕೋಟಿ ರೂಪಾಯಿ ಕ್ಲಬ್ ಗೆ ಸೇರುವ ಮೂಲಕ ದಾಖಲೆ ಬರೆದಿದೆ.

Advertisement

ಇದನ್ನೂ ಓದಿ:ಮತಾಂತರ ನಿಷೇಧದ ಸುಗ್ರೀವಾಜ್ಞೆಯು ಉದ್ಯೋಗಗಳನ್ನು ಸೃಷ್ಟಿಸುವುದೇ?: ಡಿಕೆಶಿ ಪ್ರಶ್ನೆ

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವಮಟ್ಟದಲ್ಲಿ 1,200 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಈ ಸಾಧನೆ ಮಾಡಿರುವ ಮೂರನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ 34 ದಿನಗಳಾಗಿದ್ದು, ಕೆಜಿಎಫ್ ಚಾಪ್ಟರ್ 2 ಚಿತ್ರ 1,200 ಕೋಟಿ ರೂಪಾಯಿ ಕ್ಲಬ್ ಗೆ ಸೇರಿದ್ದು, ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾ 1,968.03 ಕೋಟಿ ರೂಪಾಯಿ ಹಾಗೂ ಬಾಹುಬಲಿ 2 ಚಿತ್ರ 1,810 ಕೋಟಿ ರೂಪಾಯಿ ಗಳಿಸಿತ್ತು.

ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್ 2 ವೀಕ್ಷಿಸಿ:

Advertisement

ಈ ವರ್ಷ ಭರ್ಜರಿ ಯಶಸ್ಸು ಕಂಡ ಹಾಗೂ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ  ಕೆಜಿಎಫ್ 2 ಅಮೆಜಾನ್ ಪ್ರೈಮ್ ನಲ್ಲಿ  ಮೇ 27ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಚಿತ್ರ ವೀಕ್ಷಿಸಲು 199 ರೂಪಾಯಿ ಪಾವತಿಸಿ ಮನೆಯಲ್ಲಿಯೇ ಸಿನಿಮಾ ವೀಕ್ಷಿಸಬಹುದಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next