ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಗೊತ್ತೇ ಇದೆ. ಬಿಡುಗಡೆಯಾಗಿ ಸದ್ಯ 49 ದಿನಗಳನ್ನು ಪೂರೈಸಿರುವ ‘ಕೆಜಿಎಫ್ ಚಾಪ್ಟರ್ 2’ ಇದುವರೆಗೆ 1239 ಕೋಟಿ ರೂ ಸಂಪಾದನೆ ಮಾಡಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಎಪ್ರಿಲ್ 14ರಂದು ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬ್ಯಾನರ್ ನಡಿಯಲ್ಲಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದರು.
‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಗಳಿಕೆಯ ಬಗ್ಗೆ ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಯಶ್ ಚಿತ್ರವು ಮೊದಲ ಐದು ವಾರದಲ್ಲಿ 1210.53 ಕೋಟಿ ರೂ ಗಳಿಕೆ ಮಾಡಿದ್ದು, ಆರನೇ ವಾರ 19.84 ಕೋಟಿ ರೂ ಗಳಿಸಿದೆ. ಏಳನೇ ವಾರದ ಮೊದಲ ದಿನ 1.02 ಕೋಟಿ, ಎರಡನೇ ದಿನ 1.34 ಕೋಟಿ, ಮೂರನೇ ದಿನ 2.41 ಕೋಟಿ, ನಾಲ್ಕನೇ ದಿನ 3.06 ಕೋಟಿ, ಐದನೇ ದಿನ 0.92 ಕೋಟಿ ಮತ್ತು ಆರನೇ ದಿನ 0.85 ಕೋಟಿ ರೂ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಫೇಸ್ಬುಕ್ನ ಸುಂದರ ಸ್ತ್ರೀಯರಿಗೆ ಅಶ್ಲೀಲ ಫೋಟೋ, ವಿಡಿಯೋ ರವಾನೆ!
Related Articles
ಸುಮಾರು ನೂರು ಕೋಟಿ ರೂ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣವಿದೆ.
– Hombale Films (@HombaleFilms) 2 June 2022