Advertisement

ರಾಕಿಯನ್ನು ಗೇಲಿ ಮಾಡಿದ ಐರಾ!: ಮುದ್ದು ಮಗಳ ವಿಡಿಯೋ ಹಂಚಿಕೊಂಡ ಯಶ್

05:19 PM May 01, 2022 | Team Udayavani |

ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್- 2 ಯಶಸ್ಸಿನ ಆನಂದಲ್ಲಿದ್ದು, ಮಗಳ ಮುದ್ದಾದ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

Advertisement

ತನ್ನ ವೈಯಕ್ತಿಕ ಜೀವನದ ಸಂಭ್ರಮಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಯಶ್ ಅವರು ಏಪ್ರಿಲ್ 30 ರಂದು ಇನ್ ಸ್ಟಾಗ್ರಾಮ್ ನಲ್ಲಿ ಕೆಜಿಎಫ್- 2 ತನ್ನ ಆನ್-ಸ್ಕ್ರೀನ್ ಪಾತ್ರದ ರಾಕಿ ಭಾಯ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಅವರ ಮಗಳು ಐರಾ ಳ ಸಿಹಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ಬೆಳಗಿನ ಆಚರಣೆ .. ರಾಕಿಯನ್ನು ಗೇಲಿ ಮಾಡುವುದರೊಂದಿಗೆ ಪ್ರಾರಂಭವಾಗಬೇಕು” ಎಂದು ಯಶ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ : ದಾಖಲೆಗಳ ಮೇಲೆ ದಾಖಲೆ: 300% ಲಾಭ ತಂದುಕೊಟ್ಟ ಕೆಜಿಎಫ್-2 ಹಿಂದಿ ಆವೃತ್ತಿ !!

“ನಾನು ರಾಕಿ ಭಾಯ್ ಅನ್ನು ಪ್ರೀತಿಸುತ್ತೇನೆ,” ಎಂದು ತಂದೆಯ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋವನ್ನು ಯಶ್ ಅಭಿಮಾನಿಗಳು ಮತ್ತು ಅನುಯಾಯಿಗಳು ಶ್ಲಾಘಿಸಿದ್ದಾರೆ, ಮುದ್ದಾದ ಚಿತ್ರವನ್ನು ಕಾಮೆಂಟ್‌ಗಳ ಮೂಲಕ ಮೆಚ್ಚಿಕೊಂಡಿದ್ದಾರೆ.

Advertisement

ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಯಾವಾಗಲೂ ಎಲ್ಲರ ಗಮನ ಸೆರೆಹಿಡಿಯುವಷ್ಟು ಮುದ್ದಾದ ವರ್ತನೆ ತೋರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next