Advertisement

ಕೆ.ಜಿ.ಹಳ್ಳಿ ಪ್ರಕರಣ: ಹಳೆಯಂಗಡಿಯ ಮೊಹಿದ್ದೀನ್‌ ವಶಕ್ಕೆ

08:01 PM Sep 22, 2022 | Team Udayavani |

ಹಳೆಯಂಗಡಿ: ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ತಂಡವು ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಹಳೆಯಂಗಡಿ ಇಂದಿರಾನಗರದ 3ನೇ ಅಡ್ಡರಸ್ತೆಯ ದಿ. ಮೊಹಮ್ಮದ್‌ ಅವರ ಪುತ್ರ ಮೊಹಿದ್ದೀನ್‌ (47) ಮೂಲ್ಕಿ ಪೊಲೀಸರ ಸಹಕಾರದಲ್ಲಿ ಮುಂಜಾನೆ ಮನೆಗೆ ದಾಳಿ ನಡೆಸಿ ವಶಪಡಿಸಿಕೊಟ್ಟಿದ್ದಾರೆ.

Advertisement

ಮಂಗಳೂರಿನ ಬಂದರ್‌ನಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದು, ಗುರುವಾರ ಮುಂಜಾನೆ 3-30ಕ್ಕೆ ಏಕಾಏಕಿ ಇಂದಿರಾನಗರದ ಎರಡು ಮನೆಗಳಿಗೆ ದಾಳಿ ನಡೆಸಲಾಗಿತ್ತು ಇದರಲ್ಲಿ ಮೊಹಿದ್ದೀನ್‌ನ ತಂದೆಯ ಮನೆ ಅಲ್ಲಿಯೇ ಹತ್ತಿರದಲ್ಲಿರುವ ಆತನ ಸ್ವಂತ ಮನೆಗೆ ದಾಳಿ ನಡೆಸಿದಾಗ ಮೊಹಿದ್ದೀನ್‌ ಸ್ವಂತ ಮನೆಯಲ್ಲಿ ಸಿಕ್ಕಿದ್ದಾನೆ. ಆತನೊಂದಿಗೆ ಆತ ಬಳಸುತ್ತಿದ್ದ ಲ್ಯಾಪ್‌ಟಾಪ್‌ ಮತ್ತು ಕೆಲವು ಅಮೂಲ್ಯ ದಾಖಲೆಗಳನ್ನು ಸಹ ಎನ್‌ಐಎ ತಂಡವು ವಶಪಡಿಸಿಕೊಂಡಿದೆ.

ದಿ. ಮೊಹಮ್ಮದ್‌ನ ಎಂಟು ಮಕ್ಕಳಲ್ಲಿ ಐದನೇ ಪುತ್ರನಾಗಿದ್ದು, ಮೊಹಿದ್ದೀನ್‌ ಮದುವೆಯಾಗಿ ಮೂವರು ಪುತ್ರಿಯರು ಹಾಗೂ ಒರ್ವ ಪುತ್ರನ ಸಹಿತ ಪತ್ನಿಯೊಂದಿಗೆ ವಾಸವಾಗಿದ್ದನು, ತಂದೆಯ ಮನೆಯಲ್ಲಿ ತಾಯಿಯು ಮೊಹಿದ್ದೀನ್‌ನ ಸಹೋದರರೊಂದಿಗೆ ಇದ್ದಾರೆ ಎಂದು ತಿಳಿದು ಬಂದಿದ. ಪಿಎಫ್‌ಐ ಸಂಘಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಪದಾ ಕಾರಿಯಾಗಿದ್ದು ಸ್ಥಳೀಯವಾಗಿ ಸಂಘಟನೆಯನ್ನು ಬೆಳೆಸುತ್ತಿದ್ದನು. ಮಿತ ಭಾಷಿಯಾದರೂ ಸದ್ದಿಲ್ಲದೇ ಸಂಘಟನೆಯ ಕೆಲಸವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದನಲ್ಲದೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದನು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪೊಲೀಸ್‌ ಠಾಣೆಗೆ ಭದ್ರತೆ :

ಎನ್‌ಐಇ ತಂಡದ ವಶದಲ್ಲಿರುವ ಮೊಹಿದ್ದೀನ್‌ನ ಮೇಲೆ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘಟನೆಯ ಪ್ರಮುಖರೋರ್ವರನ್ನು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ಹಳೆಯಂಗಡಿ ಅಥವ ಮೂಲ್ಕಿ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದುದರಿಂದ ಹಳೆಯಂಗಡಿಯಲ್ಲಿ ಹೆಚ್ಚುವರಿ ಪೊಲೀಸ್‌ ಹಾಗೂ ಮೂಲ್ಕಿ ಠಾಣೆಯ ಸುತ್ತಮುತ್ತ ಭದ್ರತೆಯನ್ನು ನೀಡಲಾಗಿದೆ.

Advertisement

ಬೊಳ್ಳೂರಿನ ಅಹ್ಮದ್‌ ಬಾವ :

ಹಳೆಯಂಗಡಿಯ ಇಂದಿರಾನಗರದ ಪಕ್ಕದ ಬೊಳ್ಳೂರಿನಲ್ಲಿ 2009ರ ಅಕ್ಟೋಬರ್‌ 4ರಂದು ಉಗ್ರರಿಗೆ ನೆರವಾದ ಗಂಭೀರ ಆರೋಪದಲ್ಲಿ ಬಂಧಿತನಾಗಿರುವ ಅಹ್ಮದ್‌ ಬಾವನನ್ನು ಇದೇ ರೀತಿ ಮುಂಜಾನೆ ಮನೆಗೆ ಪೊಲೀಸರು ಪ್ರವೇಶಿಸಿ ದಾಖಲೆ ವಶಪಡಿಸಿಕೊಂಡಿದ್ದನ್ನು ಸ್ಥಳೀಯರು ಸ್ಮರಿಸಿಕೊಂಡು, ಆತ ಇನ್ನೂ ಬಂಧಿಯಾಗಿಯೇ ವಿಚಾರಣೆ ಎದುರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next